ಒಂದು ವರ್ಷದಿಂದ ಭಾರತದಲ್ಲಿ ನಿರಾಶ್ರಿತ; ಪ್ರಧಾನಿ ಸ್ಕಾಟ್ ಮಾರಿಸನ್ ವಿರುದ್ಧ ದೂರು ದಾಖಲಿಸಿದ ಆಸಿಸ್ ವಕೀಲ

ಆಸ್ಟ್ರೇಲಿಯಾ ಸರ್ಕಾರ ಮತ್ತು ಆಸಿಸ್ ಪ್ರಧಾನಿ ವಿರುದ್ಧ ಆ ದೇಶದ ವಕೀಲರೊಬ್ಬರು ದೂರು ದಾಖಲಿಸಿದ್ದು, ವಿಮಾನಗಳ ನಿಷೇಧ ಅಸಾಂವಿಧಾನಿಕ ಎಂದು ಹೇಳಿದ್ದಾರೆ.
ಪ್ರಧಾನಿ ಸ್ಕಾಟ್ ಮಾರಿಸನ್
ಪ್ರಧಾನಿ ಸ್ಕಾಟ್ ಮಾರಿಸನ್

ಬೆಂಗಳೂರು: ಆಸ್ಟ್ರೇಲಿಯಾ ಸರ್ಕಾರ ಮತ್ತು ಆಸಿಸ್ ಪ್ರಧಾನಿ ವಿರುದ್ಧ ಆ ದೇಶದ ವಕೀಲರೊಬ್ಬರು ದೂರು ದಾಖಲಿಸಿದ್ದು, ವಿಮಾನಗಳ ನಿಷೇಧ ಅಸಾಂವಿಧಾನಿಕ ಎಂದು ಹೇಳಿದ್ದಾರೆ.

ಭಾರತದಲ್ಲಿ ಹೆಚ್ಚಾಗುತ್ತಿರುವ ಕೋವಿಡ್-19 ಸೋಂಕು ಪ್ರಕರಣಗಳಿಂದಾಗಿ ಕಳೆದ ವರ್ಷದ ಮಾರ್ಚ್ ನಿಂದಲೂ 73 ವರ್ಷ ಆಸ್ಟ್ರೇಲಿಯಾ ನಿವಾಸಿ ಭಾರತದಲ್ಲಿ ನಿರಾಶ್ರಿತರಾಗಿದ್ದು, ಇದೀಗ ಆಸಿಸ್ ಸರ್ಕಾರ ಹೇರಿರುವ ವಿಮಾನಗಳ ನಿಷೇಧದ ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿದ್ದಾರೆ. ಆಸ್ಟ್ರೇಲಿಯಾ  ಸರ್ಕಾರ ಹೇರಿರುವ ವಿಮಾನಗಳ ನಿಷೇಧ ಅಸಂವಿಧಾನಿಕ ಎಂದು ಹೇಳಿರುವ 73 ವರ್ಷದ ಆಸ್ಟ್ರೇಲಿಯಾ ನಿವಾಸಿ ಗ್ಯಾರಿ ನ್ಯೂಮನ್‌ ಎಂಬ ವಕೀಲ ಆಸಿಸ್ ಸರ್ಕಾರ ಮತ್ತು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ವಿರುದ್ಧ ದೂರು ದಾಖಲಿಸಿದ್ದಾರೆ.

ಇತ್ತೀಚೆಗೆ ಆಸ್ಟ್ರೇಲಿಯಾ ಸರ್ಕಾರ ಭಾರತದಿಂದ ಬರುವ ಎಲ್ಲ ವಿಮಾನಗಳಿಗೆ ನಿಷೇಧ ಹೇರಿದ್ದು ಮಾತ್ರವಲ್ಲದೇ... ದೇಶಕ್ಕೆ ಪ್ರವೇಶಿಸಲು ಯತ್ನಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಹೇಳಿತ್ತು. ಇದು ಭಾರತದಲ್ಲಿರುವ ಆಸಿಸ್ ನಾಗರೀಕರಿಗೂ ಅನ್ವಯವಾಗುತ್ತದೆ ಎಂದು ಹೇಳಲಾಗಿತ್ತು. ಭಾರತದಲ್ಲಿ  14 ದಿನಕ್ಕೂ ಅಧಿಕ ಸಮಯ ಕಳೆದ ಆಸಿಸ್ ನಾಗರೀಕರು ದೇಶ ಪ್ರವೇಶಿಸುವಂತಿಲ್ಲ. ಒಂದು ವೇಳೆ ಬಂದರೆ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಿ ಜೈಲಿಗಟ್ಟಲಾಗುತ್ತದೆ. ಅಲ್ಲದೆ 14 ದಿನಗಳಿಗಿಂತ ಕಡಿಮೆ ಅವಧಿ ಭಾರತದಲ್ಲಿದ್ದ ಆಸಿಸ್ ನಾಗರಿಕರು ಆಸ್ಟ್ರೇಲಿಯಾಕ್ಕೆ ಮರಳಲು ವಿಶೇಷ ಪಾಸ್ ಗಳ ವ್ಯವಸ್ಥೆ  ಮಾಡಲಾಗುತ್ತದೆ ಎಂದೂ ಆಸಿಸ್ ಸರ್ಕಾರ ಸ್ಪಷ್ಟಪಡಿಸಿತ್ತು. ಈ ಕಾನೂನಿನ ಅನ್ವಯ ನಿಯಮ ಮೀರಿದವರಿಗೆ ಐದು ವರ್ಷಗಳ ಜೈಲು ಶಿಕ್ಷೆ ಅಥವಾ 66,000 ಆಸ್ಟ್ರೇಲಿಯಾದ ಡಾಲರ್ (50,899 ಡಾಲರ್) ದಂಡ ವಿಧಿಸುವ ಸಾಧ್ಯತೆಯಿದೆ ಎಂದು ಎಚ್ಚರಿಸಿತ್ತು. 

ಆಸ್ಟ್ರೇಲಿಯಾ ಸರ್ಕಾರದ ಇದೇ ಕ್ರಮ ಇದೀಗ ವಕೀಲ ಗ್ಯಾರಿ ನ್ಯೂಮನ್‌ ಕುತ್ತಾಗಿದ್ದು, ಇದೇ ನಿಯಮದ ವಿರುದ್ಧ ಆಸಿಸ್ ಪ್ರಧಾನಿ ವಿರುದ್ಧ ನ್ಯೂಮನ್ ದೂರು ದಾಖಲಿಸಿದ್ದಾರೆ. ಆಸಿಸ್ ಸರ್ಕಾರದ ವಿಮಾನ ನಿಷೇಧ ಮತ್ತು ದೇಶ ಪ್ರವೇಶಿಸುವವರ ವಿರುದ್ಧದ ಕಾನೂನು ಕ್ರಮ ಅಸಾಂವಿಧಾನಿಕ ಎಂದು ಆರೋಪಿಸಿ  ಸಿಡ್ನಿಯ ಫೆಡರಲ್ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ. ಗ್ಯಾರಿ ನ್ಯೂಮನ್‌ ಪರ ವಕೀಲರಾದ ಮೈಕೆಲ್ ಬ್ರಾಡ್ಲಿ ಮತ್ತು ಕ್ರಿಸ್ ವಾರ್ಡ್ ಅವರು ಬುಧವಾರ ಮಧ್ಯಾಹ್ನ ನ್ಯಾಯಮೂರ್ತಿ ಸ್ಟೀಫನ್ ಬರ್ಲಿ ಅವರ ಮುಂದೆ ಅರ್ಜಿ ಸಲ್ಲಿಸಿದ್ದಾರೆ.

ಸ್ಕಾಟ್ ಮಾರಿಸನ್ ಸರ್ಕಾರ ತನ್ನ ಅಧಿಕಾರಕ್ಕೆ ಹೊರತಾಗಿ ಕಾರ್ಯನಿರ್ವಹಿಸುತ್ತಿದೆ. ಆರೋಗ್ಯ ಸಚಿವ ಗ್ರೆಗ್ ಹಂಟ್ ಅವರ ಘೋಷಣೆಯು ಮನೆಗೆ ಮರಳುವ ಆಸಿಸ್ ನಾಗರಿಕರ ಸ್ವಾತಂತ್ರ್ಯವನ್ನು ಉಲ್ಲಂಘಿಸಿದೆ ಎಂಬ ಎಬಿಸಿ ಸುದ್ದಿಯ ವರದಿಯನ್ನು ಅರ್ಜಿಯಲ್ಲಿ ಅರ್ಜಿದಾರರು ಉಲ್ಲೇಖಿಸಿದ್ದಾರೆ ಎಂದು  ಹೇಳಲಾಗಿದೆ.  
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com