ವಿದೇಶಾಂಗ ಸಚಿವ ಎಸ್ ಜೈಶಂಕರ್
ವಿದೇಶಾಂಗ ಸಚಿವ ಎಸ್ ಜೈಶಂಕರ್

ಕೋವಿಡ್-19 ಜಾಗತಿಕ ಮಟ್ಟದ ಸಮಸ್ಯೆ, ಇದಕ್ಕೆ ಜಾಗತಿಕ ಮಟ್ಟದಲ್ಲಿಯೇ ಪರಿಹಾರ ಕಂಡುಕೊಳ್ಳಬೇಕು: ವಿದೇಶಾಂಗ ಸಚಿವ ಜೈಶಂಕರ್ 

ಜಗತ್ತಿನ ಎಲ್ಲಾ ದೇಶಗಳು ಇಂದು ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಒಂದು ಕೋವಿಡ್. ಔಷಧೋಪಚಾರಗಳ ವಿಷಯ ಬಂದಾಗ ಹೈಡ್ರಾಕ್ಸಿಕ್ಲೋರೋಕ್ವಿನ್ ನ್ನು ಅಮೆರಿಕ, ಸಿಂಗಾಪುರ, ಯುರೋಪಿಯನ್ ದೇಶಗಳಿಗೆ ನೀಡಿದ್ದೇವೆ. ನೀವು ಇದನ್ನು ಸಹಾಯ ಎಂದು ಕರೆದರೆ, ನಾವು ಸ್ನೇಹ, ಭ್ರಾತೃತ್ವ ಎನ್ನುತ್ತೇವೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.

ನವದೆಹಲಿ: ಜಗತ್ತಿನ ಎಲ್ಲಾ ದೇಶಗಳು ಇಂದು ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಒಂದು ಕೋವಿಡ್. ಔಷಧೋಪಚಾರಗಳ ವಿಷಯ ಬಂದಾಗ ಹೈಡ್ರಾಕ್ಸಿಕ್ಲೋರೋಕ್ವಿನ್ ನ್ನು ಅಮೆರಿಕ, ಸಿಂಗಾಪುರ, ಯುರೋಪಿಯನ್ ದೇಶಗಳಿಗೆ ನೀಡಿದ್ದೇವೆ. ಕೆಲವು ದೇಶಗಳಿಗೆ ಲಸಿಕೆಗಳನ್ನು ನೀಡಿದ್ದೇವೆ. ನೀವು ಇದನ್ನು ಸಹಾಯ ಎಂದು ಕರೆದರೆ, ನಾವು ಸ್ನೇಹ, ಭ್ರಾತೃತ್ವ ಎನ್ನುತ್ತೇವೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.

ವಿದೇಶಗಳಿಂದ ಕೋವಿಡ್-19ಗೆ ಸಂಬಂಧಿಸಿದಂತೆ ಆಕ್ಸಿಜನ್, ಔಷಧಿಗಳು,ಲಸಿಕೆ ಖರೀದಿ ವಿಚಾರದಲ್ಲಿ ಭಾರತದ ನೀತಿಗಳು ಬದಲಾಗಿವೆ ಎಂದು ಕೇಳಿಬರುತ್ತಿರುವ ಸುದ್ದಿಗಳಿಗೆ ಸಂಬಂಧಿಸಿದಂತೆ ಎಎನ್ಐ ಸುದ್ದಿಸಂಸ್ಥೆಯ ಪ್ರತಿನಿಧಿಗಳಿಗೆ ಈ ಸಂದರ್ಶನದಲ್ಲಿ ಹೀಗೆ ಹೇಳಿದ್ದಾರೆ.

ನಾವು ಜನರ ಸಮಸ್ಯೆಗಳ ದೃಷ್ಟಿಯಿಂದ ನೋಡಬೇಕಾಗುತ್ತದೆ. ದೆಹಲಿಯ ಪರಿಸ್ಥಿತಿ ನೋಡಿದರೆ, ನನ್ನ ಅಧಿಕಾರ ವ್ಯಾಪ್ತಿಯಲ್ಲಿ ಸಾಧ್ಯವಾದ ನೆರವನ್ನು ಜನರಿಗೆ ಮಾಡುತ್ತೇನೆ, ಇಂದು ದೇಶದಲ್ಲಿ ಕೋವಿಡ್ ಎರಡನೇ ಅಲೆಯಿಂದ ಜನರು ಬಹಳ ಸಂಕಷ್ಟಕ್ಕೆ ಒಳಗಾಗಿದ್ದಾರೆ. ವಿದೇಶಾಂಗ ಸಚಿವನಾಗಿ ನಾನು ಇಷ್ಟು ವರ್ಷಗಳಲ್ಲಿ ಪಡೆದ ಅನುಭವಗಳಿಂದ ಜನರಿಗೆ ಸಹಾಯ ಮಾಡಲು ನೋಡುತ್ತಿದ್ದೇನೆ ಎಂದರು.

ನಾನು ವಿದೇಶಕ್ಕೆ ಹೋದಾಗ ನನ್ನ ಸವಾಲುಗಳನ್ನು ಜನರು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತೇನೆ. ಅಲ್ಲಿ ಅಂತಾರಾಷ್ಟ್ರೀಯ ಸ್ನೇಹ, ಸಹಭಾಗಿತ್ವ ಬೆಳೆಯುತ್ತದೆ. ನಿನ್ನೆ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕನ್ ಅವರೊಂದಿಗೆ ನಡೆಸಿದ ಸಭೆಗಳಲ್ಲಿ ಭಾರತ ಮತ್ತು ವಿದೇಶಗಳಲ್ಲಿ ಸದ್ಯ ಇರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದಾಗಿತ್ತು. ಚರ್ಚೆಗೆ ಬಂದ ವಿಷಯಗಳಲ್ಲಿ ಪ್ರಮುಖವಾದದ್ದು ಲಸಿಕೆಗಳ ಕುರಿತಾಗಿತ್ತು ಎಂದರು.

ಕೊರೋನಾ ಎರಡನೇ ಅಲೆ ದೇಶದಲ್ಲಿ ತಾಂಡವವಾಡುತ್ತಿರುವಾಗ ಚರ್ಚೆ, ಆರೋಪ, ಪ್ರಶ್ನೆಗಳು ಬರುತ್ತಿರುತ್ತವೆ. ಜನರು ಚುನಾವಣೆಗಳ ಬಗ್ಗೆ ಮಾತನಾಡಿದರು. ಪ್ರಜಾಪ್ರಭುತ್ವ ದೇಶದಲ್ಲಿ ಚುನಾವಣೆಗಳು ನಡೆಯುವುದನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂದು ಕೋವಿಡ್ ಸಂಕಷ್ಟ ಸಂದರ್ಭದಲ್ಲಿ ಚುನಾವಣೆ ನಡೆಸುವ ಅಗತ್ಯವಿತ್ತೇ ಎಂಬ ಪ್ರಶ್ನೆಗೆ ಜೈಶಂಕರ್ ಉತ್ತರಿಸಿದರು.
ನಿನ್ನೆ ಮುಗಿದ ಭಾರತ-ಇಂಗ್ಲೆಂಡ್ ಶೃಂಗಸಭೆ ರೂಂಪಾತರವಾಗಿತ್ತು ಎಂದು ಬಣ್ಣಿಸಿದ ಜೈಶಂಕರ್, ಜಿ7 ಶೃಂಗರಾಷ್ಟ್ರಗಳ ವಿದೇಶಾಂಗ ಸಚಿವರುಗಳ ಜೊತೆ ತಾವು ನಿರಂತರ ಸಂಪರ್ಕದಲ್ಲಿದ್ದು ಅವರ ಮನೋಧರ್ಮ, ಕೋವಿಡ್-19 ವಿರುದ್ಧ ಹೋರಾಡುವ ಕ್ರಮ ಭಾರತದ ರೀತಿಯಲ್ಲಿಯೇ ಇರುವುದು ಸಂತಸ ತಂದಿದೆ ಎಂದರು.

ಜಿ7 ಶೃಂಗರಾಷ್ಟ್ರಗಳ ಮೂಲಕ ನಾನು ಹೇಳುವುದೇನೆಂದರೆ, ಕೋವಿಡ್-19 ಜಾಗತಿಕ ಸವಾಲಾಗಿದ್ದು ಪ್ರತಿಯೊಬ್ಬರಿಗೂ ಗೊತ್ತಿದೆ. ನಾವೆಲ್ಲರೂ ಇಂದು ಸಂಕಷ್ಟ ಹಾದಿಯಲ್ಲಿದ್ದೇವೆ. ಇದನ್ನು ಜಾಗತಿಕ ಮಟ್ಟದಲ್ಲಿ ಜಾಗತಿಕ ಸಾಮೂಹಿಕ ಪ್ರಯತ್ನಗಳ ಮೂಲಕವೇ ಬಗೆಹರಿಸಲಬೇಕಾಗಿದೆ ಎಂದರು.

Related Stories

No stories found.

Advertisement

X
Kannada Prabha
www.kannadaprabha.com