ಸಿಂಧಗಿ ಸೇರಿ ವಿವಿಧ ರಾಜ್ಯಗಳ 8 ವಿಧಾನಸಭಾ ಕ್ಷೇತ್ರ, 3 ಲೋಕಸಭಾ ಕ್ಷೇತ್ರಗಳ ಉಪಚುನಾವಣೆ ಮುಂದೂಡಿಕೆ

ದೇಶದಲ್ಲಿನ ಸದ್ಯದ ಕೋವಿಡ್‍-19 ಪರಿಸ್ಥಿತಿಯ ಹಿನ್ನೆಲೆಯಲ್ಲಿ ಮೂರು ಲೋಕಸಭಾ ಕ್ಷೇತ್ರಗಳು ಮತ್ತು ಎಂಟು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯನ್ನು ಮುಂದೂಡಲು ಕೇಂದ್ರ ಚುನಾವಣಾ ಆಯೋಗ ಬುಧವಾರ ನಿರ್ಧರಿಸಿದೆ.
ಚುನಾವಣಾ ಆಯೋಗ
ಚುನಾವಣಾ ಆಯೋಗ

ನವದೆಹಲಿ: ದೇಶದಲ್ಲಿನ ಸದ್ಯದ ಕೋವಿಡ್‍-19 ಪರಿಸ್ಥಿತಿಯ ಹಿನ್ನೆಲೆಯಲ್ಲಿ ಮೂರು ಲೋಕಸಭಾ ಕ್ಷೇತ್ರಗಳು ಮತ್ತು ಎಂಟು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯನ್ನು ಮುಂದೂಡಲು ಕೇಂದ್ರ ಚುನಾವಣಾ ಆಯೋಗ ಬುಧವಾರ ನಿರ್ಧರಿಸಿದೆ.

ಮೂರು ಲೋಕಸಭಾ ಕ್ಷೇತ್ರಗಳಾದ ದಾದ್ರಾ-ನಗರ್ ಹವೇಲಿ, ಖಾಂಡ್ವಾ (ಮಧ್ಯಪ್ರದೇಶ) ಮತ್ತು ಮಂಡಿ (ಹಿಮಾಚಲ ಪ್ರದೇಶ) ಹಾಗೂ ಕಲ್ಕಾ ಮತ್ತು ಎಲ್ಲೆನಾಬಾದ್ (ಹರಿಯಾಣ), ರಾಜಸ್ಥಾನದ ವಲ್ಲಭನಗರ, ಕರ್ನಾಟಕದ ಸಿಂಧಗಿ, ರಾಜಬಾಲ ಮತ್ತು ಮಾವ್‍ರಿಂಗ್ ಕೆಂಗ್ –ಮೀಸಲು(ಮೇಘಾಲಯ), ಹಿಮಾಚಲ ಪ್ರದೇಶದ ಫತೇಪುರ್ ಮತ್ತು ಆಂಧ್ರಪ್ರದೇಶದ ಬದ್ವೆಲ್ -ಮೀಸಲು ಸೇರಿದಂತೆ ಎಂಟು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ದಿನಾಂಕ ಘೋಷಿಸಬೇಕಿತ್ತು.

'ಉಪಚುನಾವಣೆ ಕುರಿತು ಬುಧವಾರ ಪರಿಶೀಲಿಸಲಾಗಿದ್ದು, ದೇಶದಲ್ಲಿ ಕೋವಿಡ್‍-19 ಎರಡನೇ ಅಲೆ ಉಲ್ಬಣಗೊಂಡಿದ್ದು, ಪರಿಸ್ಥಿತಿ ಗಮನಾರ್ಹವಾಗಿ ಸುಧಾರಿಸುವವರೆಗೆ ಉಪಚುನಾವಣೆ ನಡೆಸುವುದು ಸೂಕ್ತವಲ್ಲ ಎಂದು ನಿರ್ಧರಿಸಲಾಗಿದೆ' ಎಂಬುದಾಗಿ ಚುನಾವಣಾ ಆಯೋಗ ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com