ವಿಶ್ವಪ್ರಸಿದ್ಧ ಸಾಂಕ್ರಾಮಿಕ ರೋಗ ತಜ್ಞ ಡಾ.ರಾಜೇಂದ್ರ ಕಪಿಲಾ ಕೊರೋನಾಗೆ ಬಲಿ!

ವಿಶ್ವಪ್ರಸಿದ್ಧ ಸಾಂಕ್ರಾಮಿಕ ರೋಗ ತಜ್ಞ ಡಾ. ರಾಜೇಂದ್ರ ಕಪಿಲಾ ಅವರು ಕೊರೋನಾಗೆ ಬಲಿಯಾಗಿದ್ದಾರೆ. 
ರಾಜೇಂದ್ರ ಕಪಿಲಾ
ರಾಜೇಂದ್ರ ಕಪಿಲಾ

ನವದೆಹಲಿ: ವಿಶ್ವಪ್ರಸಿದ್ಧ ಸಾಂಕ್ರಾಮಿಕ ರೋಗ ತಜ್ಞ ಡಾ. ರಾಜೇಂದ್ರ ಕಪಿಲಾ ಅವರು ಕೊರೋನಾಗೆ ಬಲಿಯಾಗಿದ್ದಾರೆ. 

ಎಚ್‌ಐವಿ-ಏಡ್ಸ್ ಕುರಿತು ವ್ಯಾಪಕವಾದ ಕೃತಿಗಳನ್ನು ಬರೆದಿರುವ ರಟ್ಜರ್ಸ್ ವಿಶ್ವವಿದ್ಯಾಲಯದ ಪ್ರಾಧ್ಯಾಪರ ಡಾ. ರಾಜೇಂದ್ರ ಕಪಿಲಾ ಅವರಿಗೆ 81 ವರ್ಷ ವಯಸ್ಸಾಗಿತ್ತು. ಡಾ. ಕಪಿಲಾ ಮತ್ತು ಅವರ ಪತ್ನಿ ಡಾ. ದೀಪ್ತಿ ಸಕ್ಸೇನಾ ಕಪಿಲಾ ಅವರು ಅಮೆರಿಕಾದ ಫಿಜರ್ ಲಸಿಕೆಯ ಎರಡೂ ಪ್ರಮಾಣವನ್ನು ಪಡೆದಿದ್ದರು. ಮಾರ್ಚ್‌ನಲ್ಲಿ ದಂಪತಿಗಳು ಭಾರತಕ್ಕೆ ಮರಳಿದ್ದು ಗಾಜಿಯಾಬಾದ್‌ನಲ್ಲಿ ವಾಸವಾಗಿದ್ದರು. 

ರಾಜೇಂದ್ರ ಕಪಿಲಾ ಅವರು ಏಪ್ರಿಲ್ ಎರಡನೇ ವಾರದಲ್ಲಿ ಅಮೆರಿಕಾಗೆ ಹಿಂತಿರುಗಬೇಕಾಗಿತ್ತು. ಆದರೆ ಏಪ್ರಿಲ್ 8ರಂದು ಅವರಿಗೆ ಕೊರೋನಾ ಪಾಸಿಟಿವ್ ಬಂದಿದ್ದರಿಂದ ಆಸ್ಪತ್ರೆಗೆ ದಾಖಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೇ 3ರಂದು ಮೃತಪಟ್ಟಿದ್ದಾರೆ.

ದೆಹಲಿ ವಿಶ್ವವಿದ್ಯಾಲಯದ ಮೌಲಾನಾ ಆಜಾದ್ ವೈದ್ಯಕೀಯ ಕಾಲೇಜಿನಿಂದ ಎಂಬಿಬಿಎಸ್ ಮುಗಿಸಿದ ನಂತರ, ಡಾ. ಕಪಿಲಾ 1964ರಲ್ಲಿ ಗುರು ತೇಜ್ ಬಹದ್ದೂರ್ ಆಸ್ಪತ್ರೆಯ ವೈದ್ಯಕೀಯ ವಿಜ್ಞಾನ ಕಾಲೇಜಿನಿಂದ ಎಂಡಿ ಪಡೆದರು. ರಟ್ಜರ್ಸ್ ವಿಶ್ವವಿದ್ಯಾಲಯದ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಅವರ ಪ್ರೊಫೈಲ್‌ನಲ್ಲಿ ಡಾ. ಕಪಿಲಾ ನ್ಯೂಜೆರ್ಸಿಯ ನೆವಾರ್ಕ್‌ನಲ್ಲಿರುವ ಮಾರ್ಟ್‌ಲ್ಯಾಂಡ್ ಆಸ್ಪತ್ರೆಯಲ್ಲಿ ಇಂಟರ್ನ್, ನಿವಾಸಿ ಮತ್ತು ಸಹವರ್ತಿ ಎಂದು ಉಲ್ಲೇಖಿಸಲಾಗಿದೆ. 

ವಿಯೆಟ್ನಾಂ ಸಂಘರ್ಷದ ಸಮಯದಲ್ಲಿ ಅವರು ಜಪಾನ್‌ನ ಓಕಿನಾವಾದಲ್ಲಿ ಅಮೆರಿಕಾ ಸೇನೆಯ ಸಹಾಯಕ ಮುಖ್ಯಸ್ಥರಾಗಿದ್ದರು. ನ್ಯೂಜೆರ್ಸಿ ಸಾಂಕ್ರಾಮಿಕ ರೋಗ ಸೊಸೈಟಿಯ ಸ್ಥಾಪಕ ಸದಸ್ಯರಾಗಿದ್ದರು.

ಎಚ್‌ಐವಿ-ಏಡ್ಸ್ ಕ್ಷೇತ್ರದಲ್ಲಿ ಅನೇಕ ಜನರಿಗೆ ತರಬೇತಿ ನೀಡಿ 50 ವರ್ಷಗಳ ಕಾಲ ರಟ್ಜರ್ಸ್ ವಿಶ್ವವಿದ್ಯಾಲಯದಲ್ಲಿ ಅಭ್ಯಾಸ ಮಾಡಿದ ಡಾ. ಕಪಿಲಾ ಅವರಿಗೆ ಯೂನಿವರ್ಸಿಟಿ ಆಫ್ ಮೆಡಿಸಿನ್ ಮತ್ತು ಡೆಂಟಿಸ್ಟ್ರಿ ಆಫ್ ನ್ಯೂಜೆರ್ಸಿಯ (ಯುಎಂಡಿಎನ್‌ಜೆ) ಎಕ್ಸಲೆನ್ಸ್ ಇನ್ ಟೀಚಿಂಗ್ ಪ್ರಶಸ್ತಿ ನೀಡಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com