ಮುನ್ನಾರ್: ಕೋವಿಡ್-19 ನಿಯಮ ಉಲ್ಲಂಘಿಸಿ ಚರ್ಚ್ ನಲ್ಲಿ ರಿಟ್ರೀಟ್ ಕಾರ್ಯಕ್ರಮ; 480 ಮಂದಿ ವಿರುದ್ಧ ಪ್ರಕರಣ

ಕೋವಿಡ್-19 ನಿಯಮಗಳನ್ನು ಉಲ್ಲಂಘನೆ ಮಾಡಿ ಕಳೆದ ತಿಂಗಳು ದಕ್ಷಿಣ ಕೇರಳದ ಮುನ್ನಾರ್ ನಲ್ಲಿರುವ ಚರ್ಚ್ ನಲ್ಲಿ ನಡೆದಿದ್ದ ರಿಟ್ರೀಟ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. 
ಮುನ್ನಾರ್: ಕೋವಿಡ್-19 ನಿಯಮ ಉಲ್ಲಂಘಿಸಿ ಚರ್ಚ್ ನಲ್ಲಿ ರಿಟ್ರೀಟ್ ಕಾರ್ಯಕ್ರಮ; 480 ಮಂದಿ ವಿರುದ್ಧ ಪ್ರಕರಣ
ಮುನ್ನಾರ್: ಕೋವಿಡ್-19 ನಿಯಮ ಉಲ್ಲಂಘಿಸಿ ಚರ್ಚ್ ನಲ್ಲಿ ರಿಟ್ರೀಟ್ ಕಾರ್ಯಕ್ರಮ; 480 ಮಂದಿ ವಿರುದ್ಧ ಪ್ರಕರಣ

ತಿರುವನಂತಪುರಂ: ಕೋವಿಡ್-19 ನಿಯಮಗಳನ್ನು ಉಲ್ಲಂಘನೆ ಮಾಡಿ ಕಳೆದ ತಿಂಗಳು ದಕ್ಷಿಣ ಕೇರಳದ ಮುನ್ನಾರ್ ನಲ್ಲಿರುವ ಚರ್ಚ್ ನಲ್ಲಿ ನಡೆದಿದ್ದ ರಿಟ್ರೀಟ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. 

ಸಿಎಸ್ಐ ಕ್ರೈಸ್ಟ್ ಚರ್ಚ್ ನ ಪಾದ್ರಿಗಳು, ಸಿಬ್ಬಂದಿಗಳು, ಪದಾಧಿಕಾರಿಗಳು ಸೇರಿ 480 ಮಂದಿಯ ವಿರುದ್ಧ ಕೇಸ್ ದಾಖಲಾಗಿದೆ. 

ದೇವಿಕುಲಮ್ ತಹಶೀಲ್ದಾರ್ ಸಲ್ಲಿಸಿದ ಪ್ರಾಥಮಿಕ ವರದಿಯ ಆಧಾರದಲ್ಲಿ ಈ ಕೇಸ್ ದಾಖಲಾಗಿದೆ. 

ಇಡುಕ್ಕಿ ಜಿಲ್ಲಾಧಿಕಾರಿ ಹೆಚ್ ದಿನೇಶನ್ , ಈ ಬಗ್ಗೆ ಮೇ.05 ರಂದು ಈ ಬಗ್ಗೆ ಮಾಹಿತಿ ಪಡೆದಿದ್ದಾರೆ. ದೇವಿಕುಲಮ್ ಉಪ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸುವಂತೆ ಸೂಚನೆ ನೀಡಿದ್ದರು. "ಚರ್ಚ್ ನಲ್ಲಿ ನಡೆದ ರಿಟ್ರಿಟ್ ಕಾರ್ಯಕ್ರಮ ಕೋವಿಡ್-19 ಶಿಷ್ಟಾಚಾರ (ನಿಯಮ)ಗಳನ್ನು ಉಲ್ಲಂಘನೆ ಮಾಡಲಾಗಿದೆ" ಎಂದು ವರದಿಯಲ್ಲಿ ತಿಳಿಸಲಾಗಿದೆ.

ಪಾದ್ರಿಗಳು ಹಾಗೂ ಪದಾಧಿಕಾರಿಗಳ ವಿರುದ್ಧ ಕೇರಳ ಎಪಿಡಮಿಕ್ ಡಿಸೀಸಸ್ ಆರ್ಡಿನೆನ್ಸ್, 2020 ರ ಪ್ರಕಾರ  ಕೇಸ್ ದಾಖಲಿಸಲಾಗಿದೆ. ಈ ಕಾರ್ಯಕ್ರಮದ ಬಗ್ಗೆ ಪೊಲೀಸರಿಗೂ ಯಾವುದೇ ಮಾಹಿತಿ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಎಫ್ಐಆರ್ ಒಂದನ್ನು ದಾಖಲಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು  ಡಿವೈಎಸ್ ಪಿ ಆರ್ ಸುರೇಶ್ ಹೇಳಿದ್ದಾರೆ. ಕಾರ್ಯಕ್ರಮ ಆಯೋಜಕರಿಗೂ ಕೋವಿಡ್-19 ಸೋಂಕು ತಗುಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com