ದೆಹಲಿಯಲ್ಲಿ ಆಕ್ಸಿಜನ್ ಸಪೋರ್ಟ್ ಹೊಂದಿರುವ ಆಟೋ ಆಂಬುಲೆನ್ಸ್ ಸೇವೆಗೆ ಚಾಲನೆ

ಪ್ರಾರಂಭಿಕ ಹಂತದ ಕೋವಿಡ್-19 ರೋಗಲಕ್ಷಣಗಳನ್ನು ಹೊಂದಿರುವ, ಆಕ್ಸಿಜನ್ ಅಗತ್ಯವಿರುವ ರೋಗಿಗಳಿಗೆ ದೆಹಲಿಯಲ್ಲಿ ಆಕ್ಸಿಜನ್ ಸಪೋರ್ಟ್ ಹೊಂದಿರುವ ಆಟೋ ಆಂಬುಲೆನ್ಸ್ ಸೇವೆಗೆ ಚಾಲನೆ ನೀಡಲಾಗಿದೆ. 
ದೆಹಲಿಯಲ್ಲಿ ಆಕ್ಸಿಜನ್ ಸಪೋರ್ಟ್ ಹೊಂದಿರುವ ಆಟೋ ಆಂಬುಲೆನ್ಸ್ ಸೇವೆಗೆ ಚಾಲನೆ
ದೆಹಲಿಯಲ್ಲಿ ಆಕ್ಸಿಜನ್ ಸಪೋರ್ಟ್ ಹೊಂದಿರುವ ಆಟೋ ಆಂಬುಲೆನ್ಸ್ ಸೇವೆಗೆ ಚಾಲನೆ

ನವದೆಹಲಿ: ಪ್ರಾರಂಭಿಕ ಹಂತದ ಕೋವಿಡ್-19 ರೋಗಲಕ್ಷಣಗಳನ್ನು ಹೊಂದಿರುವ, ಆಕ್ಸಿಜನ್ ಅಗತ್ಯವಿರುವ ರೋಗಿಗಳಿಗೆ ದೆಹಲಿಯಲ್ಲಿ ಆಕ್ಸಿಜನ್ ಸಪೋರ್ಟ್ ಹೊಂದಿರುವ ಆಟೋ ಆಂಬುಲೆನ್ಸ್ ಸೇವೆಗೆ ಚಾಲನೆ ನೀಡಲಾಗಿದೆ. 

ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಟಿವೈಸಿಐಎ ಫೌಂಡೇಷನ್ ಸಹಯೋಗದಲ್ಲಿ 10 ಆಟೋಗಳನ್ನು ಆಟೋ ಆಂಬುಲೆನ್ಸ್ ನ್ನಾಗಿ ಪರಿವರ್ತಿಸಿ ಸೇವೆಗೆ ಲಭ್ಯವಾಗುವಂತೆ ಮಾಡಿದ್ದಾರೆ. 

ಆಟೋ ಆಂಬುಲೆನ್ಸ್ ನಲ್ಲಿ ಆಕ್ಸಿಜನ್ ಸಿಲೆಂಡರ್ ಹಾಗೂ ಸ್ಯಾನಿಟೈಸರ್ ಗಳ ಸೌಲಭ್ಯಗಳು ಇರಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

ಆಟೋ ಚಾಲಕರು ಪಿಪಿಇ ಕಿಟ್ ಗಳನ್ನು ಧರಿಸಲಿದ್ದಾರೆ.  ಪ್ರಾರಂಭಿಕ ಹಂತದ ಕೋವಿಡ್-19 ಲಕ್ಷಣಗಳನ್ನು ಹೊಂದಿರುವ ಆಕ್ಸಿಜನ್ ಮಟ್ಟ 85-90 ಕ್ಕೆ ಬಂದಿರುವ ರೋಗಿಗಳಿಗೆ ಹತ್ತರದ ಆಸ್ಪತ್ರೆಗಳಿಗೆ ತೆರಳುವುದಕ್ಕೆ ಆಟೋ ಆಂಬುಲೆನ್ಸ್ ಗಳು ಸಹಕಾರಿಯಾಗಲಿವೆ.

9818430043 - 011-41236614 ದೂರವಾಣಿ ಸಂಖ್ಯೆಯ ಮೂಲಕ ಆಟೋ ಆಂಬುಲೆನ್ಸ್ ಗಳನ್ನು ಬುಕ್ ಮಾಡಬಹುದಾಗಿದೆ.  ಇದೇ ಮಾದರಿಯಲ್ಲಿ ಇನ್ನೂ 20 ಆಟೋ ಆಂಬುಲೆನ್ಸ್ ಗಳನ್ನು ತಯಾರಿಸುವುದಕ್ಕೆ ಯೋಜನೆ ರೂಪಿಸಲಾಗಿದೆ. ದೆಹಲಿಯಲ್ಲಿ ಈ ವರೆಗೂ 12,53,902 ಕೊರೋನಾ ಸೋಂಕು ಪ್ರಕರಣಗಳು ವರದಿಯಾಗಿದ್ದು, 11.43 ಲಕ್ಷ  ಮಂದಿ ಚೇತರಿಸಿಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com