ಕೋವಿಡ್-19 ಹೆಚ್ಚಳ: ಭಾರತದಿಂದ ಬರುವ ಪ್ರಯಾಣಿಕರಿಗೆ ಶ್ರೀಲಂಕಾ ನಿರ್ಬಂಧ

ಕೋವಿಡ್-19 ಸೋಂಕು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಭಾರತದಿಂದ ಬರುವ ಪ್ರಯಾಣಿಕರಿಗೆ ಶ್ರೀಲಂಕಾ ನಿರ್ಬಂಧ ವಿಧಿಸಿದೆ. 
ಕೋವಿಡ್-19 ಹೆಚ್ಚಳ: ಭಾರತದಿಂದ ಬರುವ ಪ್ರಯಾಣಿಕರಿಗೆ ಶ್ರೀಲಂಕಾ ನಿರ್ಬಂಧ
ಕೋವಿಡ್-19 ಹೆಚ್ಚಳ: ಭಾರತದಿಂದ ಬರುವ ಪ್ರಯಾಣಿಕರಿಗೆ ಶ್ರೀಲಂಕಾ ನಿರ್ಬಂಧ

ಕೊಲಂಬೊ: ಕೋವಿಡ್-19 ಸೋಂಕು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಭಾರತದಿಂದ ಬರುವ ಪ್ರಯಾಣಿಕರಿಗೆ ಶ್ರೀಲಂಕಾ ನಿರ್ಬಂಧ ವಿಧಿಸಿದೆ. 

ತಕ್ಷಣದಿಂದಲೇ ಲಂಕಾ ನಿರ್ಬಂಧ ಜಾರಿಗೆ ಬರಲಿದೆ. ಲಂಕಾ ಅಷ್ಟೆ ಅಲ್ಲದೆ ಭಾರತದಿಂದ ಬರುವವರಿಗೆ ಬ್ರಿಟನ್, ಯುಎಇ, ಆಸ್ಟ್ರೇಲಿಯಾ, ಸಿಂಗಪೂರ್ ರಾಷ್ಟ್ರಗಳಲ್ಲಿ ನಿರ್ಬಂಧ ಜಾರಿಗೊಳಿಸಲಾಗಿದೆ. 

ಲಂಕಾದ ನಾಗರಿಕ ವಿಮಾನಯಾನ ಪ್ರಾಧಿಕಾರ ಮೇ.06 ರಂದು ಈ ಬಗ್ಗೆ ಅಧಿಕೃತ ಆದೇಶ ಹೊರಡಿಸಿದ್ದು, "ಲಂಕಾ ಆರೋಗ್ಯ ಸಚಿವಾಲಯದ ಸಲಹೆಗಳನ್ನು ಪರಿಗಣಿಸಿ ಈ ಆದೇಶ ಹೊರಡಿಸಲಾಗಿದೆ" ಎಂದು ಪ್ರಯಾಣಿಕ ವಿಮಾನಯಾನದ ಪ್ರಧಾನ ನಿರ್ದೇಶಕರು ಮಾಹಿತಿ ನೀಡಿದ್ದಾರೆ. ಭಾರತದಲ್ಲಿ ಕೊರೋನಾ ತೀವ್ರವಾಗಿ ಹರಡುತ್ತಿರುವ ಪರಿಣಾಮ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಲಂಕಾ ತಿಳಿಸಿದೆ. 

ಕಳೆದ 5 ದಿನಗಳಿಂದ ಲಂಕಾದಲ್ಲಿ ಪ್ರತಿ ದಿನ 2,000 ಕೋವಿಡ್-19 ಸೋಂಕು ಪ್ರಕರಣಗಳು ವರದಿಯಾಗುತ್ತಿದ್ದು, ಇದು ಏಪ್ರಿಲ್ ತಿಂಗಳಲ್ಲಿ ದಿನವೊಂದಕ್ಕೆ ಸರಾಸರಿ 200 ರಷ್ಟಿತ್ತು. ಭಾರತೀಯರು ಪಶ್ಚಿಮ ಏಷ್ಯಾಗೆ ಹಾಗೂ ಸಿಂಗಪೂರ್ ಗಳಿಗೆ ತೆರಳುವುದಕ್ಕೆ ಶ್ರೀಲಂಕಾ ಮಾರ್ಗವನ್ನೇ ಬಳಸಬೇಕಾಗಿತ್ತು. ಇದಕ್ಕೂ ಮುನ್ನ 14 ದಿನಗಳ ಕಾಲ ಕ್ವಾರಂಟೈನ್ ನಲ್ಲಿರಬೇಕೆಂಬ ನಿಯಮ ವಿಧಿಸಲಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com