ಯು.ಕೆ ರೂಪಾಂತರಿಗೆ, ಉತ್ತರ ಭಾರತ, ಡಬ್ಬಲ್ ಮ್ಯುಟೆಂಟ್ ವೈರಾಣುವಿಗೆ ಗುಜರಾತ್, ಮಹಾರಾಷ್ಟ್ರ, ಕರ್ನಾಟಕ ಹೈರಾಣ!

ಅತಿ ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿರುವ ಬ್ರಿಟನ್ ರೂಪಾಂತರಿ ಕೊರೋನಾ ಉತ್ತರ ಭಾರತದಲ್ಲಿ ತಲೆನೋವಾಗಿ ಪರಿಣಮಿಸಿದರೆ, ಗುಜರಾತ್, ಮಹಾರಾಷ್ಟ್ರ, ಕರ್ನಾಟಕಗಳು ಡಬಲ್ ಮ್ಯುಟೆಂಟ್ ವೈರಾಣುವಿಗೆ ಹೈರಾಣಾಗಿವೆ. 
ಮುನ್ನೆಚ್ಚರಿಕಾ ಕ್ರಮವಾಗಿ ತಾಪಮಾನ ತಪಾಸಣೆ (ಸಂಗ್ರಹ ಚಿತ್ರ)
ಮುನ್ನೆಚ್ಚರಿಕಾ ಕ್ರಮವಾಗಿ ತಾಪಮಾನ ತಪಾಸಣೆ (ಸಂಗ್ರಹ ಚಿತ್ರ)

ನವದೆಹಲಿ: ಅತಿ ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿರುವ ಬ್ರಿಟನ್ ರೂಪಾಂತರಿ ಕೊರೋನಾ ಉತ್ತರ ಭಾರತದಲ್ಲಿ ತಲೆನೋವಾಗಿ ಪರಿಣಮಿಸಿದರೆ, ಗುಜರಾತ್, ಮಹಾರಾಷ್ಟ್ರ, ಕರ್ನಾಟಕಗಳು ಡಬಲ್ ಮ್ಯುಟೆಂಟ್ ವೈರಾಣುವಿಗೆ ಹೈರಾಣಾಗಿವೆ. 

ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (ಎನ್ ಸಿ ಡಿಸಿ)ದ ನಿರ್ದೇಶಕ ಸುಜೀತ್ ಸಿಂಗ್ ಈ ಬಗ್ಗೆ ಮಾಹಿತಿ ನೀಡಿದ್ದು, ಕಳೆದ ಒಂದು ತಿಂಗಳು ಅಥವಾ ಒಂದುವರೆ ತಿಂಗಳಿನಿಂದ SARS CoV-2 (UK variant) ನ ವಂಶಾವಳಿಯ B1.1.7 ವೈರಾಣುವಿನ ಪ್ರಸರಣ ಅನುಪಾತ ದೇಶಾದ್ಯಂತ ಕಡಿಮೆಯಾಗುತ್ತಿದೆ ಎಂದು ಹೇಳಿದ್ದಾರೆ. 

ಪಂಜಾಬ್ (482 ಸ್ಯಾಂಪಲ್ ಗಳು) ದೆಹಲಿ (516) ತೆಲಂಗಾಣ (192) ಮಹಾರಾಷ್ಟ್ರ (83) ಕರ್ನಾಟಕ (82) ಸ್ಯಾಂಪಲ್ ಗಳನ್ನು ಅಧ್ಯಯನ ಮಾಡಲಾಗಿದ್ದು, ಉತ್ತರ ಭಾರತದಲ್ಲಿ ಬ್ರಿಟನ್ ರೂಪಾಂತರಿ ಕೊರೋನಾ ಹೆಚ್ಚು ಪ್ರಾಬಲ್ಯವಾಗಿರುವುದು ಕಂಡುಬಂದಿದೆ. ಸರ್ಕಾರದ ಟಾಪ್ 10 ಪ್ರಯೋಗಾಲಯಗಳು ಹಾಗೂ ಸಂಸ್ಥೆಗಳು ಡಿಸೆಂಬರ್ ನಿಂದ ಜಿನೋಮ್ ಸೀಕ್ವೆನ್ಸಿಂಗ್ ನಲ್ಲಿ ತೊಡಗಿಸಿಕೊಂಡಿವೆ.  

ಈ ವರೆಗೂ ಒಟ್ಟಾರೆ 18,053 ಸ್ಯಾಂಪಲ್ ಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ ಎಂದು ಸುಜೀತ್ ಸಿಂಗ್ ಮಾಹಿತಿ ನೀಡಿದ್ದಾರೆ. 

ಜಿನೋಮ್ ಸೀಕ್ವೆನ್ಸಿಂಗ್ ನ್ನು ರಾಜ್ಯಗಳಿಗೆ ಫೆಬ್ರವರಿಯಲ್ಲಿ 2 ಬಾರಿ ಮಾರ್ಚ್ ನಲ್ಲಿ 4 ಬಾರಿ ಹಾಗೂ ಏಪ್ರಿಲ್ ನಲ್ಲಿ 4 ಬಾರಿ ನೀಡಲಾಗಿದ್ದು, ಹೊಸ ರೂಪಾಂತರಿ ವೈರಾಣು ಹಾಗೂ ಆತಂಕಕಾರಿ ತಳಿಗಳ ಸ್ಥಿತಿಗಳ ಬಗ್ಗೆ ರಾಜ್ಯಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದ್ದು, ಸಾರ್ವಕನಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಕಠಿಣ ಕ್ರಮ ಕೈಗೊಳ್ಳುವುದಕ್ಕೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ. 

ಡಬಲ್ ಮ್ಯುಟೆಂಟ್ ವೈರಾಣವನ್ನು B.1.617 ಎಂದೂ ಹೇಳಲಾಗುತ್ತದೆ. ಈ ಮಾದರಿಯ ವೈರಾಣು ಮಹಾರಾಷ್ಟ್ರ (761 ಸ್ಯಾಂಪಲ್) ಪಶ್ಚಿಮ ಬಂಗಾಳ (124) ದೆಹಲಿ (107) ಗುಜರಾತ್ (102) ಗಳಲ್ಲಿ ಹೆಚ್ಚು ಪ್ರಾಬಲ್ಯವಾಗಿದೆ. 

B.1.315 ಎಂದೂ ಗುರುತಿಸಲಾಗುವ ದಕ್ಷಿಣ ಆಫ್ರಿಕಾದ ಮಾದರಿಯ ವೈರಾಣುವಿನ ತಳಿ ತೆಲಂಗಾಣ ಹಾಗೂ ದೆಹಲಿಗಳಲ್ಲಿ ಹೆಚ್ಚು ಕಂಡುಬಂದಿದೆ. ಮಹಾರಾಷ್ಟ್ರದಲ್ಲಿ ಬ್ರೆಜಿಲ್ ನ ರೂಪಾಂತರಿ ವೈರಾಣುವೂ ಕಂಡುಬಂದಿರುವುದು ಅಚ್ಚರಿಯ ಸಂಗತಿಯಾಗಿದೆ. 

ಇದೇ ವೇಳೆ ದೆಹಲಿ, ಉತ್ತರ ಪ್ರದೇಶ, ಮಹಾರಾಷ್ಟ್ರ ಗಳು ದೇಶದಲ್ಲಿ ದಿನವೊಂದಕ್ಕೆ ಬರುತ್ತಿರುವ ಕೋವಿಡ್-19 ಸೋಂಕಿತರ ಪ್ರಮಾಣದ ಶೇ.72.19 ರಷ್ಟನ್ನು ಹೊಂದಿರುವ 10 ರಾಜ್ಯಗಳ ಪೈಕಿ ಇದ್ದು, ಕರ್ನಾಟಕ, ಕೇರಳ, ಹರ್ಯಾಣ, ಪಶ್ಚಿಮ ಬಂಗಾಳ, ತಮಿಳುನಾಡು, ಆಂಧ್ರಪ್ರದೇಶ ಹಾಗೂ ರಾಜಸ್ಥಾನಗಳೂ ಈ ಪಟ್ಟಿಯಲ್ಲಿವೆ. 

ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಅಂದರೆ ದಿನವೊಂದಕ್ಕೆ 57,640 ಪ್ರಕರಣಗಳು ವರದಿಯಾದರೆ, ಕರ್ನಾಟಕದಲ್ಲಿ ಎರಡನೇ ಅತಿ ಹೆಚ್ಚು ಅಂದರೆ 50,112 ಪ್ರಕರಣಗಳು ಒಂದೇ ದಿನ ವರದಿಯಾಗಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com