ಗುಜರಾತ್: ಕೋವಿಡ್-19 ನಿರ್ಮೂಲನೆ ಪೂಜೆಗಾಗಿ ಮೆರವಣಿಗೆಯಲ್ಲಿ ತೆರಳುತ್ತಿದ್ದ 46 ಜನರ ಬಂಧನ

ಕೊರೋನಾವೈರಸ್ ನಿಮೂರ್ಲನೆಗಾಗಿ ಗುಜರಾತಿನ ಗಾಂಧಿನಗರ ಜಿಲ್ಲೆಯ ಹಳ್ಳಿಯೊಂದರಲ್ಲಿ ಮೆರವಣಿಗೆಯಲ್ಲಿ ತೆರಳುತ್ತಿದ್ದ 46 ಮಂದಿಯನ್ನು ಪೊಲೀಸರು ಬಂಧಿಸಿರುವುದಾಗಿ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ. ಕೆಲ ದಿನಗಳಲ್ಲಿ ಗುಜರಾತಿನಲ್ಲಿ ಇಂತಹ ಎರಡನೇ ಘಟನೆ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಅಹಮದಾಬಾದ್: ಕೊರೋನಾ ವೈರಸ್ ನಿಮೂರ್ಲನೆಗಾಗಿ ಗುಜರಾತಿನ ಗಾಂಧಿನಗರ ಜಿಲ್ಲೆಯ ಹಳ್ಳಿಯೊಂದರಲ್ಲಿ ಮೆರವಣಿಗೆಯಲ್ಲಿ ತೆರಳುತ್ತಿದ್ದ 46 ಮಂದಿಯನ್ನು ಪೊಲೀಸರು ಬಂಧಿಸಿರುವುದಾಗಿ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ. ಕೆಲ ದಿನಗಳಲ್ಲಿ ಗುಜರಾತಿನಲ್ಲಿ ಇಂತಹ ಎರಡನೇ ಘಟನೆ ನಡೆದಿದೆ.

ಗಾಂಧಿನಗರದ ರಾಯಪುರ ಹಳ್ಳಿಯಲ್ಲಿ ಬುಧವಾರ ನಡೆದ ಹೊಸದಾದ ಮೆರವಣಿಗೆ ವೇಳೆ ಎಲ್ಲಾ ಕೋವಿಡ್ ನಿಯಮಗಳನ್ನು ಉಲ್ಲಂಘನೆ ಮಾಡಲಾಗಿದೆ ಎಂದು ಡಿಎಸ್ ಪಿ ಎಂ.ಕೆ. ರಾಣಾ ತಿಳಿಸಿದ್ದಾರೆ.

ಈ ಮೆರವಣಿಗೆಯ ದೃಶ್ಯ ಗುರುವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸುಮಾರು 100 ಪುರುಷರು ಹಾಗೂ ಮಹಿಳೆಯರು ಮಾಸ್ಕ್ ಧರಿಸಿದೆ ಮೆರವಣಿಯಲ್ಲಿ ಪಾಲ್ಗೊಂಡಿರುವುದು ಕಂಡುಬಂದಿದೆ.ಡ್ರಮ್ ಬಾರಿಸಿಕೊಂಡು ಕೆಲ ಪುರುಷರು ಮೆರವಣಿಗೆ ನಡೆಸುತ್ತಿದ್ದರೆ ಮಹಿಳೆಯರು ತಲೆ ಮೇಲೆ ಕುಂಭ ಹೊತ್ತಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ನಂತರ ಮೆರವಣಿಗೆಯಲ್ಲಿ ತೊಡಗಿದ್ದ 46 ಮಂದಿಯನ್ನು ಬಂಧಿಸಲಾಗಿದೆ ಎಂದು ರಾಣಾ ಮಾಹಿತಿ ನೀಡಿದ್ದಾರೆ.

ತಮ್ಮ ಊರಿನಲ್ಲಿರುವ ದೇವರ ಮೇಲೆ ನೀರು ಸುರಿದರೆ ಕೊರೋನಾವೈರಸ್ ನಿರ್ಮೂಲನೆಯಾಗಲಿದೆ ಎಂಬ ಕೆಲ ಜನರ ನಂಬಿಕೆಯಿಂದ ಈ ಮೆರವಣಿಗೆ ನಡೆಸಲಾಗಿದೆ. ಎಲ್ಲ 46 ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 188 ಹಾಗೂ ವಿಪತ್ತು ನಿರ್ವಹಣಾ ಕಾಯ್ದೆ ಮತ್ತು ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.

ಮೇ 3 ರಂದು ಅಹಮದಾಬಾದಿನ ನವಪುರ ಗ್ರಾಮದಲ್ಲಿಯೂ ಇದೇ ರೀತಿಯ ಮೆರವಣಿಗೆ  ನಡೆಸಲಾಗಿತ್ತು, ಈ ಘಟನೆ ಸಂಬಂಧ 23 ಜನರನ್ನು ಪೊಲೀಸರು ಬಂಧಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com