ಜಮ್ಮುವಿನ ಶೋಪಿಯಾನ್ ಜಿಲ್ಲೆಯಲ್ಲಿ ಎನ್ ಕೌಂಟರ್: ಮೂವರು ಉಗ್ರರು ಹತ, ಒಬ್ಬ ಪೊಲೀಸರಿಗೆ ಶರಣು 

ಜಮ್ಮು-ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಗುರುವಾರ ನಸುಕಿನ ಜಾವ ನಡೆದ ಎನ್ ಕೌಂಟರ್ ನಲ್ಲಿ ಮೂವರು ಉಗ್ರರು ಸಾವಿಗೀಡಾಗಿದ್ದು ಓರ್ವ ಪೊಲೀಸರಿಗೆ ಶರಣಾಗಿದ್ದಾನೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಶ್ರೀನಗರ: ಜಮ್ಮು-ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಗುರುವಾರ ನಸುಕಿನ ಜಾವ ನಡೆದ ಎನ್ ಕೌಂಟರ್ ನಲ್ಲಿ ಮೂವರು ಉಗ್ರರು ಸಾವಿಗೀಡಾಗಿದ್ದು ಓರ್ವ ಪೊಲೀಸರಿಗೆ ಶರಣಾಗಿದ್ದಾನೆ.

ದಕ್ಷಿಣ ಕಾಶ್ಮೀರ ಜಿಲ್ಲೆಯ ಕಂಗಿಗಾಮ್ ಪ್ರದೇಶದಲ್ಲಿ ಉಗ್ರರ ಇರುವಿಕೆ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಕಳೆದ ರಾತ್ರಿಯೇ ಪ್ರದೇಶವನ್ನು ಸುತ್ತುವರಿದು ಶೋಧ ಕಾರ್ಯವನ್ನು ಆರಂಭಿಸಿದರು.

ಅಲ್-ಬದರ್ ಉಗ್ರಗಾಮಿ ಗುಂಪಿನ ಹೊಸದಾಗಿ ನೇಮಕಗೊಂಡಿರುವ ಸ್ಥಳೀಯ ಉಗ್ರರ ಚಲನವಲನಗಳನ್ನು ಗುರುತಿಸಿದ ಪೊಲೀಸರು ಅವರನ್ನು ಕೊನೆಗೂ ಬಂಧಿಸಿ ಶರಣಾಗುವಂತೆ ಮನವೊಲಿಸಲು ಪ್ರಯತ್ನಿಸಿದರು. ಆದರೆ ಉಗ್ರರು ಅದಕ್ಕೆ ನಿರಾಕರಿಸಿ ಗುಂಡಿನ ಮಳೆಗರೆಯಲಾರಂಭಿಸಿದರು. ಭದ್ರತಾ ಪಡೆ ಮೇಲೆ ಗ್ರೆನೇಡ್ ದಾಳಿ ನಡೆಸಲು ಆರಂಭಿಸಿದರು.

ಇದಕ್ಕೆ ಪ್ರತಿಯಾಗಿ ಪೊಲೀಸರು ಗುಂಡು ಹಾರಿಸಿದಾಗ ಎನ್ ಕೌಂಟರ್ ನಡೆಯಿತು. ಈ ವೇಳೆ ಓರ್ವ ಉಗ್ರನು ಶರಣಾದನು. ಉಳಿದ ಮೂವರು ಪೊಲೀಸರ ಕೈಯಲ್ಲಿ ಹತ್ಯೆಯಾದರು. ಶರಣಾದ ಉಗ್ರನನ್ನು ತೌಸಿಫ್ ಅಹ್ಮದ್ ಎಂದು ಗುರುತಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com