ದೆಹಲಿಯಲ್ಲಿ ಇಂದು ಕೊರೋನಾಗೆ 341 ಬಲಿ, 19,000ಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣಗಳು
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೋನಾ ಮರಣ ಮೃದಂಗ ಮುಂದುವರೆದಿದ್ದು, ಶುಕ್ರವಾರ ಬರೋಬ್ಬರಿ 341 ಮಂದಿ ಮೃತಪಟ್ಟಿದ್ದು, 19,832 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ.
Published: 07th May 2021 07:57 PM | Last Updated: 07th May 2021 07:57 PM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೋನಾ ಮರಣ ಮೃದಂಗ ಮುಂದುವರೆದಿದ್ದು, ಶುಕ್ರವಾರ ಬರೋಬ್ಬರಿ 341 ಮಂದಿ ಮೃತಪಟ್ಟಿದ್ದು, 19,832 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ.
ಸತತ ಎರಡನೇ ದಿನವೂ ಪಾಸಿಟಿವ್ ಪ್ರಮಾಣವು ಶೇಕಡಾ 25 ಕ್ಕಿಂತ ಕಡಿಮೆಯಾಗಿದೆ ಎಂದು ದೆಹಲಿ ಆರೋಗ್ಯ ಇಲಾಖೆ
ತಿಳಿಸಿದೆ.
ಕಳೆದ ಐದು ದಿನಗಳಲ್ಲಿ ಇದು ನಾಲ್ಕನೇ ಬಾರಿಗೆ ಹೊಸ ಪ್ರಕರಣಗಳ ಸಂಖ್ಯೆ 20,000 ಕ್ಕಿಂತ ಕಡಿಮೆಯಾಗಿದೆ. ಒಟ್ಟು 91,035 ಸಕ್ರಿಯ ಪ್ರಕರಣಗಳಿದ್ದು, 11.83 ಲಕ್ಷಕ್ಕೂ ಹೆಚ್ಚು ಜನ ಚೇತರಿಸಿಕೊಂಡಿದ್ದಾರೆ ಎಂದು ಆರೋಗ್ಯ ಇಲಾಖೆ ಬುಲೆಟಿನ್
ತಿಳಿಸಿದೆ.
ಈ ಮಧ್ಯೆ, ಮೇ 6 ರಂದು ದೆಹಲಿಯು ಕೇವಲ 577 ಮೆಟ್ರಿಕ್ ಟನ್ ಆಮ್ಲಜನಕ ಪಡೆದಿದ್ದು, ಇದು ಒಟ್ಟು 976 ಮೆ.ಟನ್ ಅಗತ್ಯತೆಯ ಶೇಕಡಾ 59 ರಷ್ಟಿದೆ ಎಂದು ಎಎಪಿ ಶಾಸಕ ರಾಘವ್ ಚಡ್ಡಾ ಅವರು ಹೇಳಿದ್ದಾರೆ.
ಇನ್ನು ಮೇ 3 ರಿಂದ 18 ರಿಂದ 44 ವರ್ಷದವರಿಗೆ ಕೋವಿಡ್ ಲಸಿಕೆ ನೀಡಲಾಗುತ್ತಿದ್ದು, ಇದುವರೆಗೆ 1.84 ಲಕ್ಷ ಜನರು ತಮ್ಮ ಮೊದಲ ಡೋಸ್ ಪಡೆದಿದ್ದಾರೆ ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ತಿಳಿಸಿದ್ದಾರೆ.