ಪ್ರಧಾನಿ ಮೋದಿಯನ್ನು ಟೀಕಿಸಿದ ಹೇಮಂತ್ ಸೊರೆನ್ ಮುಖ್ಯಮಂತ್ರಿ ಸ್ಥಾನಕ್ಕೆ ನಾಲಾಯಕ್: ಬಿಜೆಪಿ ವಾಗ್ದಾಳಿ

ಪ್ರಧಾನಿ ನರೇಂದ್ರ ಮೋದಿಯನ್ನು ಟೀಕಿಸಿರುವ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ವಿರುದ್ಧ ಶುಕ್ರವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ಮುಖಂಡರು, ನಿರೀಕ್ಷಿಸಲಾಗಿದ್ದ ಕನಿಷ್ಠ ಸೌಜನ್ಯದ ಕೊರತೆಯಿಂದ ಮುಖ್ಯಮಂತ್ರಿ ಕಚೇರಿ ಹಾಗೂ ಅದರ ಘನತೆಗೆ ಕುಂದುಂಟಾಗಿದೆ ಎಂದು ಆರೋಪಿಸಿದ್ದಾರೆ.
ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್
ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯನ್ನು ಟೀಕಿಸಿರುವ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ವಿರುದ್ಧ ಶುಕ್ರವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ಮುಖಂಡರು, ನಿರೀಕ್ಷಿಸಲಾಗಿದ್ದ ಕನಿಷ್ಠ ಸೌಜನ್ಯದ ಕೊರತೆಯಿಂದ ಮುಖ್ಯಮಂತ್ರಿ ಕಚೇರಿ ಹಾಗೂ ಅದರ ಘನತೆಗೆ ಕುಂದುಂಟಾಗಿದೆ ಎಂದು ಆರೋಪಿಸಿದ್ದಾರೆ.

ಜಾರ್ಖಂಡ್ ರಾಜ್ಯದಲ್ಲಿನ ಕೋವಿಡ್-19 ಪರಿಸ್ಥಿತಿ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ದೂರವಾಣಿ ಸಂಭಾಷಣೆ ನಂತರ ಗುರುವಾರ ರಾತ್ರಿ ಟ್ವೀಟ್ ಮಾಡಿದ್ದ ಮುಖ್ಯಮಂತ್ರಿ ಹೇಮಂತ್ ಸೊರೆನ್, ಪ್ರಧಾನಿ ಮೋದಿ ಕೇವಲ ಮನ್ ಕೀ ಬಾತ್ ಮಾತನಾಡಿದರು. ಅದರ ಬದಲು ವ್ಯವಹಾರದ ಬಗ್ಗೆ ಚರ್ಚೆ ನಡೆಸಿದ್ದರೆ ಉತ್ತಮವಾಗಿರುತಿತ್ತು ಎಂದು ಟೀಕಿಸಿದ್ದರು.

ಈ ಟ್ವೀಟ್ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್, ಇದು ಕೆಲ ರಾಜಕಾರಣಿಗಳ ಟೀಕೆಯ ಮಟ್ಟವಾಗಿದೆ. ಕೋವಿಡ್-19 ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಪ್ರಧಾನಿ ಕರೆ ಮಾಡಿದ್ದರೆ, ಸಿಎಂ ಈ ರೀತಿ ಟ್ವೀಟ್ ಮಾಡುತ್ತಾರೆ. ಇದು ಸಿಎಂ ಸ್ಥಾನಕ್ಕೆ ಹೊಂದಿರಬೇಕಾದ ಸೌಜನ್ಯದ ಕೊರತೆ ಎಂದಿದ್ದಾರೆ.

ಬಿಜೆಪಿ ಸಂಸದ ಮತ್ತು ಪಕ್ಷದ ಮುಖ್ಯ ವಕ್ತಾರ ಅನಿಲ್ ಬಲೂನಿ ಕೂಡ ಸೊರೆನ್ ವಿರುದ್ಧ ಕಿಡಿಕಾರಿದ್ದು, ದೇಶದ ಒಕ್ಕೂಟ ವ್ಯವಸ್ಥೆ ಬಗ್ಗೆ
ಅವರಿಗೆ ಅರಿವಿಲ್ಲ, ಜನರು ನಿಮ್ಮ ತಪ್ಪು ನೀತಿಯಿಂದ ತೊಂದರೆ ಪಡಬಾರದು, ಜನರ ಹಣೆಬರಹ ಎಂದು ಹೇಳಿ ಸೊರೆನ್ ಬಿಡಬಹುದು ಆದರೆ, ಮೋದಿ ಸರ್ಕಾರ ಯಾವಾಗಲೂ ನಿಮ್ಮೊಂದಿಗೆ ಇದೆ ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಜಾರ್ಖಂಡ್ ಅಲ್ಲದೇ, ಆಂಧ್ರಪ್ರದೇಶ, ಒಡಿಶಾ ಮತ್ತು ತೆಲಂಗಾಣ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಕೋವಿಡ್-19 ಪರಿಸ್ಥಿತಿ ಕುರಿತು ಗುರುವಾರ ಮಾತನಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com