ಸ್ಟಾಲಿನ್
ಸ್ಟಾಲಿನ್

ಹಾಲಿನ ದರ ಕಡಿತ, 2 ಸಾವಿರ ರೂ. ಕೋವಿಡ್ ಪರಿಹಾರ: ತಮಿಳು ನಾಡು ಸಿಎಂ ಸ್ಟಾಲಿನ್‌ ಭರ್ಜರಿ ಗಿಫ್ಟ್!

ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ದಿನವೇ ಎಂಕೆ ಸ್ಟಾಲಿನ್ ರಾಜ್ಯದ ಜನರಿಗೆ ಭರ್ಜರಿ ಗಿಫ್ಟ್ ಕೊಟ್ಟಿದ್ದು ಕೋವಿಡ್ ಕಾಲದ ಪರಿಹಾರವಾಗಿ 2 ಸಾವಿರ ಹಾಗೂ ಸರ್ಕಾರದ ಆವಿನ್ ಹಾಲಿನ ದರ ಕಡಿತ ಮಾಡಿ ಆದೇಶ ಹೊರಡಿಸಿದ್ದಾರೆ.

ಚೆನ್ನೈ: ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ದಿನವೇ ಎಂಕೆ ಸ್ಟಾಲಿನ್ ರಾಜ್ಯದ ಜನರಿಗೆ ಭರ್ಜರಿ ಗಿಫ್ಟ್ ಕೊಟ್ಟಿದ್ದು ಕೋವಿಡ್ ಕಾಲದ ಪರಿಹಾರವಾಗಿ 2 ಸಾವಿರ ಹಾಗೂ ಸರ್ಕಾರದ ಆವಿನ್ ಹಾಲಿನ ದರ ಕಡಿತ ಮಾಡಿ ಆದೇಶ ಹೊರಡಿಸಿದ್ದಾರೆ. 

ಚುನಾವಣೆಗೂ ಮುನ್ನ ಡಿಎಂಕೆ ಪಕ್ಷದ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸುತ್ತಿರುವ ಸ್ಟಾಲಿನ್ ಮೊದಲನೆದಾಗಿ 2 ಸಾವಿರ ಕೋವಿಡ್ ಪರಿಹಾರ, ಹಾಲಿನ ದರ ಇಳಿಕೆ ಮತ್ತು ಸರ್ಕಾರಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಮಾಣದ ಆದೇಶಗಳಿಗೆ ಸಹಿ ಹಾಕಿದ್ದು, ಇನ್ನು ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರಿ ವಿಮಾ ಯೋಜನೆಯಡಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ಒದಗಿಸುವ ಯೋಜನೆ ಜಾರಿಗೆ ತರುವುದಾಗಿ ಘೋಷಿಸಿದರು. 

ಕೋವಿಡ್ ಸಂಕಷ್ಟದ ಪರಿಹಾರವಾಗಿ ಮೊದಲ ಕಂತು ತಲಾ 2 ಸಾವಿರ ರೂ. ಅನ್ನು ರೇಷನ್ ಕಾರ್ಡ್ ಹೊಂದಿರುವ 2,07,67,000 ಜನರಿಗೆ ಮೇ ತಿಂಗಳಲ್ಲಿ ನೀಡಲಾಗುತ್ತಿದ್ದು ಇದರ ಒಟ್ಟು ಮೊತ್ತ 4,153.69 ಕೋಟಿ ರುಪಾಯಿ ಆಗಲಿದೆ. 

ಇನ್ನು ಮೇ 16ರಿಂದ ಜಾರಿಗೆ ಬರುವಂತೆ ಸರ್ಕಾರದ ಆವಿನ್ ಹಾಲಿನ ಬೆಲೆಯಲ್ಲಿ ಲೀಟರ್ ಗೆ 3 ರುಪಾಯಿ ಇಳಿಕೆ ಮಾಡಿ ಸ್ಟಾಲಿನ್ ಮತ್ತೊಂದು ಆದೇಶ ಹೊರಡಿಸಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com