ಕೋವಿಡ್ ಮಾರ್ಗಸೂಚಿ ದಿಕ್ಕರಿಸಿ ವ್ಯಕ್ತಿಯನ್ನು ಸಮಾಧಿ ಮಾಡಿದ ನಂತರ ರಾಜಸ್ಥಾನದ ಗ್ರಾಮವೊಂದರಲ್ಲಿ 21 ಜನರ ಸಾವು!

ಕೋವಿಡ್ ಸೋಂಕಿತನ ಶವವನ್ನು ಕೊರೋನಾ ಮಾರ್ಗಸೂಚಿ ಅನುಸರಿಸದೆ ಸಮಾಧಿ ಮಾಡಿದ ನಂತರ ಕಳೆದ ಕೆಲ ದಿನಗಳಲ್ಲೇ ರಾಜಸ್ಥಾನದ ಸಿಕಾರ್ ಜಿಲ್ಲೆಯ ಹಳ್ಳಿಯಲ್ಲಿ ಇಪ್ಪತ್ತೊಂದು ಜನರು ಸಾವನ್ನಪ್ಪಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಜೈಪುರ: ಕೋವಿಡ್ ಸೋಂಕಿತನ ಶವವನ್ನು ಕೊರೋನಾ ಮಾರ್ಗಸೂಚಿ ಅನುಸರಿಸದೆ ಸಮಾಧಿ ಮಾಡಿದ ನಂತರ ಕಳೆದ ಕೆಲ ದಿನಗಳಲ್ಲೇ ರಾಜಸ್ಥಾನದ ಸಿಕಾರ್ ಜಿಲ್ಲೆಯ ಹಳ್ಳಿಯಲ್ಲಿ ಇಪ್ಪತ್ತೊಂದು ಜನರು ಸಾವನ್ನಪ್ಪಿದ್ದಾರೆ. 

ಏಪ್ರಿಲ್ 15ರಿಂದ ಮೇ 5ರ ನಡುವೆ ವೈರಸ್‌ನಿಂದ ಕೇವಲ ನಾಲ್ಕು ಸಾವುಗಳು ಸಂಭವಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಧಿಕಾರಿಗಳ ಪ್ರಕಾರ, ಏಪ್ರಿಲ್ 21ರಂದು ಕೋವಿಡ್ ಸೋಂಕಿತನ ದೇಹವನ್ನು ಖೀರ್ವಾ ಗ್ರಾಮಕ್ಕೆ ತರಲಾಯಿತು. ಅಂತ್ಯಕ್ರಿಯೆಯಲ್ಲಿ ಸುಮಾರು 150 ಜನರು ಭಾಗಿಯಾಗಿದ್ದರು. ಆದರೆ ಈ ವೇಳೆ ಕೊರೋನಾ ಮಾರ್ಗಸೂಚಿ ಅನ್ನು ಅನುಸರಿಸದೆ ಸಮಾಧಿ ಮಾಡಲಾಯಿತು. ಶವವನ್ನು ಪ್ಲಾಸ್ಟಿಕ್ ಚೀಲದಿಂದ ಹೊರತೆಗೆದು ಸಮಾಧಿ ಸಮಯದಲ್ಲಿ ಹಲವಾರು ಜನರು ಅದನ್ನು ಮುಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದರು.

'21 ಸಾವುಗಳಲ್ಲಿ ಕೋವಿಡ್ ಕಾರಣದಿಂದಾಗಿ ಕೇವಲ 3-4 ಸಾವುಗಳು ಸಂಭವಿಸಿವೆ. ಹೆಚ್ಚಿನ ಸಾವುಗಳು ವೃದ್ಧಾಪ್ಯದಿಂದ ಆಗಿವೆ. 'ನಾವು ಕೋವಿಡ್ -19 ಸಮುದಾಯ ಪ್ರಸರಣವಾಗಿದೆಯೇ ಎಂದು ಪರೀಕ್ಷಿಸಲು ಸಾವು ಸಂಭವಿಸಿದ 147 ಕುಟುಂಬಗಳ ಮಾದರಿಯನ್ನು ನಾವು ತೆಗೆದುಕೊಂಡಿದ್ದೇವೆ ಎಂದು ಲಕ್ಷ್ಮನ್‌ಗಡದ ಉಪ ವಿಭಾಗೀಯ ಅಧಿಕಾರಿ ಕುಲ್ರಾಜ್ ಮೀನಾ ತಿಳಿಸಿದ್ದಾರೆ.

ಗ್ರಾಮದಲ್ಲಿ ಸ್ಯಾನಿಟೈಸೇಶನ್ ಡ್ರೈವ್ ನಡೆಸಲಾಗಿದೆ. ಸಮಸ್ಯೆಯ ತೀವ್ರತೆಯ ಬಗ್ಗೆ ಗ್ರಾಮಸ್ಥರಿಗೆ ವಿವರಿಸಲಾಗಿದ್ದು, ಈಗ ಅವರು ಸಹಕರಿಸುತ್ತಿದ್ದಾರೆ ಎಂದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com