ಕೊರೋನಾ ನಿರ್ವಹಣೆಯಲ್ಲಿ ಕೇಂದ್ರ ಸರ್ಕಾರ ವಿಪರೀತ ಆಲಸ್ಯ ತೋರುತ್ತಿರುವುದು ಆಶ್ಚರ್ಯ ತಂದಿದೆ: ಐಎಂಎ

ಕೋವಿಡ್ ಸಮಸ್ಯೆಯನ್ನು ನಿಬಾಯಿಸುವಲ್ಲಿ ಕೇಂದ್ರ ಸರ್ಕಾರ ತೋರುತ್ತಿರುವ ಆಲಸ್ಯತನ ನಮಗೆ ಆಶ್ಚರ್ಯ ಮೂಡಿಸಿದೆ ಎಂದು ಭಾರತೀಯ ವೈದ್ಯಕೀಯ ಸಂಘ ಅಸಮಾಧಾನ ವ್ಯಕ್ತ ಪಡಿಸಿದೆ.

Published: 08th May 2021 01:44 PM  |   Last Updated: 08th May 2021 02:00 PM   |  A+A-


Harshavardhan

ಹರ್ಷವರ್ಧನ್

Posted By : Shilpa D
Source : ANI

ನವದೆಹಲಿ: ಕೋವಿಡ್ ಸಮಸ್ಯೆಯನ್ನು ನಿಬಾಯಿಸುವಲ್ಲಿ ಕೇಂದ್ರ ಸರ್ಕಾರ ತೋರುತ್ತಿರುವ ಆಲಸ್ಯತನ ನಮಗೆ ಆಶ್ಚರ್ಯ ಮೂಡಿಸಿದೆ ಎಂದು ಭಾರತೀಯ ವೈದ್ಯಕೀಯ ಸಂಘ ಅಸಮಾಧಾನ ವ್ಯಕ್ತಪಡಿಸಿದೆ.

ಕೊರೋನಾ ಎರಡನೇ ಅಲೆ ಸೃಷ್ಟಿಸಿರುವ ಸಮಸ್ಯೆ ಬಿಕ್ಕಟ್ಟನ್ನು ಎದುರಿಸಲು  ತೋರುತ್ತಿರುವ ಆಲಸ್ಯ ಮತ್ತು ಸೂಕ್ತ ಕ್ರಮ ತೆಗೆದುಕೊಳ್ಳದಿರುವುದು ನಮ್ಮನ್ನು ಆಶ್ಚರ್ಯಚಕಿತಗೊಳಿಸಿದೆ ಎಂದು ತಿಳಿಸಿದೆ.

ವಾಸ್ತವ್ಯ ಅರಿಯದೇ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಐಎಂಎ ಮತ್ತು ವೃತ್ತಿಪರ ಸಹೋದ್ಯೋಗಿಗಳು ತೆಗೆದುಕೊಂಡ ಪೂರ್ವಭಾವಿ ಸಿದ್ಧತೆ ಮುಂತಾದವುಗಳನ್ನು ಗಾಳಿಗೆ ತೂರಿದ್ದಾರೆ ಎಂದು ಹೇಳಿಕೆ ಬಿಡುಗಡೆ ಮಾಡಿದೆ.

10 ದಿನಗಳಿಂದ 15 ದಿನಗಳವರೆಗೆ ಸಂಪೂರ್ಣ ಲಾಕ್‌ಡೌನ್ ಘೋಷಿಸುವ ಕೆಲವು ರಾಜ್ಯಗಳಿಗಿಂತ ಸಂಪೂರ್ಣ, ಯೋಜಿತ ಪೂರ್ವನಿರ್ಧರಿತ ರಾಷ್ಟ್ರೀಯ ಲಾಕ್‌ಡೌನ್ ಅಗತ್ಯವಿದೆ ಎಂದು ಐಎಂಎ ತಿಳಿಸಿದೆ. ಯೋಜಿತ ಲಾಕ್ ಡೌನ್ ನಿಂದ ಆರೋಗ್ಯ ಮೂಲಸೌಕರ್ಯವನ್ನು ಸಿದ್ದಪಡಿಸಲು ಸಮಯ ಸಿಗುತ್ತದೆ. ಯಾಂತ್ರಿಕ ಶಕ್ತಿ ಮತ್ತು ಮಾನವಶಕ್ತಿ ಎರಡನ್ನೂ ವ್ಯವಸ್ಥಿತಗಾಗಿ ರೂಪಿಸಬೇಕೆಂದು ತಿಳಿಸಿದೆ.

ವೇಗವಾಗಿ ಹರಡುತ್ತಿರುವ ಸೋಂಕನ್ನು ಲಾಕ್ ಡೌನ್ ಮಾಡುವುದರಿಂದ ಕಡಿಮೆ ಮಾಡಬಹುದಾಗಿದೆ. ಪ್ರತಿದಿನ ಸುಮಾರು 4 ಲಕ್ಷ ಹೊಸ ಕೊರೋನಾ ಸೋಂಕಿನ ಪ್ರಕರಣಗಳು ಪತ್ತೆಯಾಗುತ್ತಿವೆ. ಆದರೆ ಕೇಂದ್ರ ಸರ್ಕಾರ ಲಾಕ್ ಡೌನ್ ಘೋಷಿಸಲು ಹಿಂದು ಮುಂದೆ ನೋಡುತ್ತಿದೆ, ರಾತ್ರಿ ಕರ್ಫ್ಯೂ ನಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ, ಮಾನವ ಜೀವ ಅತ್ಯಮೂಲ್ಯವಾದದ್ದು ಎಂದು ಹೇಳಿಕೆಯಲ್ಲಿ ಉಲ್ಲೇಖಿಸಿದೆ.

ದೇಶದ ಆಸ್ಪತ್ರೆಗಳಲ್ಲಿ ವೈದ್ಯಕೀಯ ಆಮ್ಲಜನಕದ ತೀವ್ರ ಕೊರತೆಯಾಗುತ್ತಿದೆ ಎಂದು ಕೇಂದ್ರ ಸರ್ಕಾರಿದ ಗಮನ ಸೆಳೆದ ಐಎಂಎ, ಆಮ್ಲಜನಕದ ಬಿಕ್ಕಟ್ಟು ಪ್ರತಿದಿನ ಹೆಚ್ಚುತ್ತಿದೆ, ಹಲವರು ಆಮ್ಲಜನಕ ಕೊರತೆಯಿಂದ ಸಾವನ್ನಪ್ಪುತ್ತಿದ್ದಾರೆ. ಜನರಲ್ಲಿ ಭೀತಿ ಉಂಟಾಗುತ್ತಿದೆ ಎಂದು ಹೇಳಿದ್ದಾರೆ. ವೈದ್ಯಕೀಯ ಆಮ್ಲಜನಕ ಉತ್ಪಾದನೆ ಅಗತ್ಯ ಪ್ರಮಾಣದಲ್ಲಿ ನಡೆಯುತ್ತಿದೆ, ಆದರೆ ಅದರ ಸಮರ್ಪಕ ವಿತರಣೆಯಾಗದ ಕಾರಣ ತೊಂದರೆ ಉಂಟಾಗಿದೆ ಎಂದು ಹೇಳಿದೆ.

ಕಳೆದ 24 ಗಂಟೆಗಳಲ್ಲಿ ಭಾರತವು 4,01,078 ಹೊಸ ಕೋವಿಡ್ ಪ್ರಕರಣಗಳನ್ನು ವರದಿ ಮಾಡಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ದೇಶದಲ್ಲಿ ಒಟ್ಟು ಪ್ರಕರಣಗಳು ಈಗ ಕೊರೋನಾ ಸೋಂಕಿತರ ಸಂಖ್ಯೆ 2,18,92,676 ಕ್ಕೆ ಏರಿದೆ.


Stay up to date on all the latest ರಾಷ್ಟ್ರೀಯ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp