ಪಂಜಾಬ್‌ನಲ್ಲಿ ವಾರಾಂತ್ಯ ಲಾಕ್‌ಡೌನ್ ವಿರುದ್ಧ ರೈತರಿಂದ ಪ್ರತಿಭಟನೆ
ಕೋವಿಡ್ -19 ಸೋಂಕು ಮತ್ತು ಸಾವು ನೋವುಗಳು ಹೆಚ್ಚುತ್ತಿರುವುದರ ಮಧ್ಯೆ ರಾಜ್ಯ ಸರ್ಕಾರ ವಿಧಿಸಿರುವ ವಾರಾಂತ್ಯದ ಲಾಕ್‌ಡೌನ್ ವಿರುದ್ಧ ರೈತರು ಶನಿವಾರ ಪಂಜಾಬ್‌ನ ಹಲವು ಸ್ಥಳಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
Published: 08th May 2021 04:08 PM | Last Updated: 08th May 2021 04:08 PM | A+A A-

ಸಾಂದರ್ಭಿಕ ಚಿತ್ರ
ಚಂಡೀಗಢ: ಕೋವಿಡ್ -19 ಸೋಂಕು ಮತ್ತು ಸಾವು ನೋವುಗಳು ಹೆಚ್ಚುತ್ತಿರುವುದರ ಮಧ್ಯೆ ರಾಜ್ಯ ಸರ್ಕಾರ ವಿಧಿಸಿರುವ ವಾರಾಂತ್ಯದ ಲಾಕ್‌ಡೌನ್ ವಿರುದ್ಧ ರೈತರು ಶನಿವಾರ ಪಂಜಾಬ್‌ನ ಹಲವು ಸ್ಥಳಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಕೇಂದ್ರದ ಕೃಷಿ ಕಾನೂನುಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಪಂಜಾಬ್‌ನ 32 ರೈತ ಸಂಘಗಳು ರಾಜ್ಯದಲ್ಲೂ ಲಾಕ್ ಡೌನ್ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸುವುದಾಗಿ ಘೋಷಿಸಿತ್ತು ಮತ್ತು ಸರ್ಕಾರದ ನಿರ್ಬಂಧಗಳನ್ನು ಧಿಕ್ಕರಿಸುವಂತೆ ಅಂಗಡಿಯವರನ್ನು ಒತ್ತಾಯಿಸಿದೆ.
ಮೊಗಾ, ಪಟಿಯಾಲ, ಅಮೃತಸರ, ಅಜ್ನಾಲಾ ಸೇರಿದಂತೆ ರಾಜ್ಯದ ಇತರ ಸ್ಥಳಗಳಲ್ಲಿ ಇಂದು ಪ್ರತಿಭಟನೆ ನಡೆಸಲಾಯಿತು.
"ನಾವು ಅಂಗಡಿ ಮಾಲೀಕರಿಗೆ ತಮ್ಮ ಅಂಗಡಿಗಳನ್ನು ತೆರೆಯುವಂತೆ ಮನವಿ ಮಾಡುತ್ತಿದ್ದೇವೆ. ನಾವು ಅವರೊಂದಿಗೆ ಇದ್ದೇವೆ" ಎಂದು ಮೊಗಾದಲ್ಲಿ ಭಾರತಿ ಕಿಸಾನ್ ಯೂನಿಯನ್(ಏಕ್ತಾ ಉಗ್ರಾಹನ್) ಪ್ರಧಾನ ಕಾರ್ಯದರ್ಶಿ ಸುಖದೇವ್ ಸಿಂಗ್ ಖೋಕ್ರಿಕಲನ್ ಅವರು ಹೇಳಿದ್ದಾರೆ.
"ಕೋವಿಡ್ ಬಿಕ್ಕಟ್ಟನ್ನು ಎದುರಿಸಲು ಲಾಕ್‌ಡೌನ್ ಪರಿಹಾರವಲ್ಲ. ಆರೋಗ್ಯ ಮೂಲಸೌಕರ್ಯಗಳನ್ನು ಸುಧಾರಿಸಲು ಸರ್ಕಾರ ಏನೂ ಮಾಡುತ್ತಿಲ್ಲ ಎಂದು ಖೋಕ್ರಿಕಲನ್ ಆರೋಪಿಸಿದರು.