ದೆಹಲಿಗೆ ಮೇ 8 ರಂದು 700 ಮೆ.ಟನ್ ಬದಲು ಕೇವಲ 499 ಮೆ.ಟನ್ ಆಮ್ಲಜನಕ: ಎಎಪಿ ಶಾಸಕ ಆರೋಪ

ಸುಪ್ರೀಂ ಕೋರ್ಟ್ ಆದೇಶಿಸಿದಂತೆ ದಿನನಿತ್ಯ ದೆಹಲಿಗೆ ಸರಾಸರಿ 700 ಮೆಟ್ರಿಕ್ ಟನ್ ಆಮ್ಲಜನಕದ ಪೂರೈಕೆಗೆ ಬದಲಾಗಿ ಮೇ 8 ರಂದು ಕೇವಲ 499 ಮೆಟ್ರಿಕ್ ಟನ್ ಆಮ್ಲಜನಕವನ್ನು ಪೂರೈಸಲಾಗಿದೆ ಎಂದು ಎಎಪಿ ಶಾಸಕ ರಾಘವ್ ಚಾಧಾ ಭಾನುವಾರ ತಿಳಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಸುಪ್ರೀಂ ಕೋರ್ಟ್ ಆದೇಶಿಸಿದಂತೆ ದಿನನಿತ್ಯ ದೆಹಲಿಗೆ ಸರಾಸರಿ 700 ಮೆಟ್ರಿಕ್ ಟನ್ ಆಮ್ಲಜನಕದ ಪೂರೈಕೆಗೆ ಬದಲಾಗಿ ಮೇ 8 ರಂದು ಕೇವಲ 499 ಮೆಟ್ರಿಕ್ ಟನ್ ಆಮ್ಲಜನಕವನ್ನು ಪೂರೈಸಲಾಗಿದೆ ಎಂದು ಎಎಪಿ ಶಾಸಕ ರಾಘವ್ ಚಾಧಾ ಭಾನುವಾರ ತಿಳಿಸಿದ್ದಾರೆ.

ಕಳೆದ ವಾರ ನಗರಕ್ಕೆ ಪ್ರತಿದಿನ ಸರಾಸರಿ 533 ಮೆ.ಟನ್ ಆಮ್ಲಜನಕ ದೊರಕಿತು, ಇದು ಸುಪ್ರೀಂ ಕೋರ್ಟ್ ನಿರ್ದೇಶಿಸಿದ ಪ್ರಮಾಣದ ಶೇಕಡಾ 76 ರಷ್ಟಿದೆ.

ಶನಿವಾರ, ರಾಷ್ಟ್ರ ರಾಜಧಾನಿಯಲ್ಲಿ ಕೇವಲ ನಾಲ್ಕು ಆರೋಗ್ಯ ಕೇಂದ್ರಗಳು 1,271 ಆಮ್ಲಜನಕ ಸಹಿತ ಬೆಡ್ ಗಳನ್ನು ಆಮ್ಲಜನಕದ ಕೊರತೆಯ ಎಸ್‌ಒಎಸ್ ಕರೆಗಳನ್ನು ಕಳುಹಿಸಿವೆ ಎಂದು ಸ್ಥಳೀಯ ಸರ್ಕಾರ ಹೇಳಿದೆ. ಅಧಿಕೃತ ಅಂಕಿಅಂಶಗಳ ಪ್ರಕಾರ ದೆಹಲಿ ಸರ್ಕಾರವು ಈ ಆಸ್ಪತ್ರೆಗಳಿಗೆ 15.50 ಮೆ.ಟನ್ ಆಮ್ಲಜನಕವನ್ನು ಪೂರೈಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com