ಖ್ಯಾತ ಶಿಲ್ಪಿ, ರಾಜ್ಯಸಭಾ ಸದಸ್ಯ ರಘುನಾಥ್‍ ಮೊಹಾಪಾತ್ರ ಕೋವಿಡ್‍ಗೆ ಬಲಿ

ಖ್ಯಾತ ಶಿಲ್ಪಿ ಹಾಗೂ ಹಾಲಿ ರಾಜ್ಯಸಭಾ ಸದಸ್ಯ ರಘುನಾಥ್‍ ಮೊಹಾಪಾತ್ರ ಭಾನುವಾರ ಇಲ್ಲಿನ ಏಮ್ಸ್ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ. 

Published: 09th May 2021 11:39 PM  |   Last Updated: 10th May 2021 12:41 PM   |  A+A-


Rajya Sabha MP Raghunath Mohapatra dies of COVID-19; PM Modi expresses grief

ಖ್ಯಾತ ಶಿಲ್ಪಿ, ರಾಜ್ಯಸಭಾ ಸದಸ್ಯ ರಘುನಾಥ್‍ ಮೊಹಾಪಾತ್ರ ಕೋವಿಡ್‍ಗೆ ಬಲಿ

Posted By : Srinivas Rao BV
Source : The New Indian Express

ಭುವನೇಶ್ವರ: ಖ್ಯಾತ ಶಿಲ್ಪಿ ಹಾಗೂ ಹಾಲಿ ರಾಜ್ಯಸಭಾ ಸದಸ್ಯ ರಘುನಾಥ್‍ ಮೊಹಾಪಾತ್ರ ಭಾನುವಾರ ಇಲ್ಲಿನ ಏಮ್ಸ್ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ. 

ಅವರಿಗೆ 78 ವರ್ಷ ವಯಸ್ಸಾಗಿತ್ತು. ಕೋವಿಡ್ ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ರಘುನಾಥ್‍ ಮೊಹಾಪಾತ್ರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. "ಕಲೆ, ಸಂಸ್ಕೃತಿ, ವಾಸ್ತುಶಿಲ್ಪ ಲೋಕಕ್ಕೆ ಮೊಹಾಪಾತ್ರ ಅವರ ಕೊಡುಗೆ ಅಪಾರ. ಸಾಂಪ್ರದಾಯಿಕ ಕರಕುಶಲ ವಸ್ತುಗಳಿಗೆ ಜನಪ್ರಿಯತೆ ಹೆಚ್ಚಿಸುವುದರಲ್ಲಿ ಅವರ ಕೊಡುಗೆ ಸದಾ ಸ್ಮರಣೀಯವಾಗಿದೆ, ನಾನು ದುಃಖತಪ್ತ ಕುಟುಂಬದವರೊಂದಿಗೆ ಇದ್ದೇನೆ" ಮೋದಿ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ. 


Stay up to date on all the latest ರಾಷ್ಟ್ರೀಯ news
Poll
Yediyurappa

ಯಡಿಯೂರಪ್ಪ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ತಮ್ಮ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗುವುದೇ?


Result
ಹೌದು
ಇಲ್ಲ
flipboard facebook twitter whatsapp