ಆರ್ ಎಸ್ಎಸ್ ನ ಪಾಸಿಟಿವಿಟಿ ಕಾರ್ಯಕ್ರಮದಲ್ಲಿ ಅಜಿಮ್ ಪ್ರೇಮ್ ಜಿ ಭಾಷಣ 

ಕೋವಿಡ್-19 ಸೋಂಕಿನ ವಿರುದ್ಧ ಹೋರಾಟ ಮಾಡುವುದಕ್ಕೆ ಜನತೆಯಲ್ಲಿ ವಿಶ್ವಾಸ ತುಂಬುವ ಸಕಾರಾತ್ಮಕತೆ ಮೂಡಿಸುವ ಕಾರ್ಯಕ್ರಮದಲ್ಲಿ ವಿಪ್ರೋ ಸಮೂಹದ ಸ್ಥಾಪಕ ಅಜಿಮ್ ಪ್ರೇಮ್ ಜಿ ಭಾಗವಹಿಸಲಿದ್ದಾರೆ. 
ಅಜೀಂ ಪ್ರೇಮ್ ಜಿ
ಅಜೀಂ ಪ್ರೇಮ್ ಜಿ

ಮುಂಬೈ: ಕೋವಿಡ್-19 ಸೋಂಕಿನ ವಿರುದ್ಧ ಹೋರಾಟ ಮಾಡುವುದಕ್ಕೆ ಜನತೆಯಲ್ಲಿ ವಿಶ್ವಾಸ ತುಂಬುವ ಸಕಾರಾತ್ಮಕತೆ ಮೂಡಿಸುವ ಕಾರ್ಯಕ್ರಮದಲ್ಲಿ ವಿಪ್ರೋ ಸಮೂಹದ ಸ್ಥಾಪಕ ಅಜಿಮ್ ಪ್ರೇಮ್ ಜಿ, ಆಧ್ಯಾತ್ಮಿಕ ಗುರು ಜಗ್ಗಿ ವಾಸುದೇವ್, ಆರ್ ಎಸ್ ಎಸ್ ನ ಮುಖ್ಯಸ್ಥರಾದ ಮೋಹನ್ ಭಾಗ್ವತ್ ಭಾಗವಹಿಸಲಿದ್ದಾರೆ. 

ಕೋವಿಡ್-19 ರೆಸ್ಪಾನ್ಸ್ ಟೀಮ್ (ಸಿಆರ್ ಟಿ) ಹಾಗೂ ಹಲವು ನಾಗರಿಕ ಸೇವೆಗಳ ತಂಡಗಳಿಂದ ಈ ಕಾರ್ಯಕ್ರಮ ಆಯೋಜನೆಗೊಂಡಿದ್ದು, ಮೇ.11 ರಿಂದ 5 ದಿನಗಳ ಕಾಲ ಪಾಸಿಟಿವಿಟಿ ಅನ್ ಲಿಮಿಟೆಡ್ ಸರಣಿ ಪ್ರಾರಂಭವಾಗಲಿದೆ ಎಂದು ಸಂಘ ತಿಳಿಸಿದೆ. 

ಕೋವಿಡ್-19 ವಿರುದ್ಧ ಹೋರಾಡಕ್ಕೆ ಜನಸಾಮಾನ್ಯರಲ್ಲಿ ವಿಶ್ವಾಸ ಮೂಡಿಸುವುದಕ್ಕಾಗಿ ಈ ಸರಣಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಪಾಸಿಟಿವಿಟಿ ಅನ್ ಲಿಮಿಟೆಡ್ ನಲ್ಲಿ ಪ್ರತಿ ದಿನ 30 ನಿಮಿಷಗಳ ಕಾಲ, ಆಧ್ಯಾತ್ಮಿಕ, ಧಾರ್ಮಿಕ,  ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಉಪನ್ಯಾಸ ಇರಲಿದೆ.

ಇದೇ ವೇಳೆ ಕೋವಿಡ್-19 ಸಂದರ್ಭದಲ್ಲಿ ಕೈಗೊಂಡಿರುವ ಸೇವಾ ಕಾರ್ಯಕ್ರಮಗಳ ಬಗ್ಗೆಯೂ ಆರ್ ಎಸ್ಎಸ್ ಮಾಹಿತಿ ನೀಡಿದ್ದು, ಸಿಆರ್ ಟಿಯಿಂದ ದೆಹಲಿಯಲ್ಲಿ 7 ಆಕ್ಸಿಜನ್ ವ್ಯಾನ್ ಗಳು ಕಾರ್ಯನಿರ್ವಹಣೆ ಮಾಡುತ್ತಿದ್ದು, 28,000 ಮಂದಿ ಕೋವಿಡ್-19 ಸೋಂಕಿತ ಕುಟುಂಬಗಳಿಗೆ ಆಹಾರ ವಿತರಣೆ ಮಾಡಿರುವುದಾಗಿ ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com