ಲಸಿಕೆ ವೆಚ್ಚದ ಬಜೆಟ್'' ನಿಧಿ ಬಳಕೆ ಮಾಡುವುದಕ್ಕೆ ತಡೆಯಾಗುವುದಿಲ್ಲ: ಹಣಕಾಸು ಸಚಿವಾಲಯ

ಲಸಿಕೆಗಾಗಿ ಕೇಂದ್ರ ಬಜೆಟ್-2022 ರಲ್ಲಿ 35,000 ಕೋಟಿ ರೂಪಾಯಿ ಖರ್ಚು ಮಾಡುತ್ತಿರುವುದು ಕೇಂದ್ರ ಸರ್ಕಾರವನ್ನು ಕೋವಿಡ್-19 ಲಸಿಕೆ ಖರೀದಿಸುವ ಅನುದಾನದ ಬಳಕೆಗೆ ಯಾವುದೇ ರೀತಿಯಲ್ಲೂ ತಡೆಯೊಡ್ಡುವುದಿಲ್ಲ ಎಂದು ಹಣಕಾಸು ಸಚಿವಾಲಯ ಹೇಳಿದೆ. 
ಲಸಿಕೆ ವೆಚ್ಚದ ಬಜೆಟ್'' ನಿಧಿ ಬಳಕೆ ಮಾಡುವುದಕ್ಕೆ ತಡೆಯಾಗುವುದಿಲ್ಲ: ಹಣಕಾಸು ಸಚಿವಾಲಯ
ಲಸಿಕೆ ವೆಚ್ಚದ ಬಜೆಟ್'' ನಿಧಿ ಬಳಕೆ ಮಾಡುವುದಕ್ಕೆ ತಡೆಯಾಗುವುದಿಲ್ಲ: ಹಣಕಾಸು ಸಚಿವಾಲಯ

ನವದೆಹಲಿ: ಲಸಿಕೆಗಾಗಿ ಕೇಂದ್ರ ಬಜೆಟ್-2022 ರಲ್ಲಿ 35,000 ಕೋಟಿ ರೂಪಾಯಿ ಖರ್ಚು ಮಾಡುತ್ತಿರುವುದು ಕೇಂದ್ರ ಸರ್ಕಾರವನ್ನು ಕೋವಿಡ್-19 ಲಸಿಕೆ ಖರೀದಿಸುವ ಅನುದಾನದ ಬಳಕೆಗೆ ಯಾವುದೇ ರೀತಿಯಲ್ಲೂ ತಡೆಯೊಡ್ಡುವುದಿಲ್ಲ ಎಂದು ಹಣಕಾಸು ಸಚಿವಾಲಯ ಹೇಳಿದೆ. 

ರಾಜ್ಯಗಳಿಗೆ ವರ್ಗಾವಣೆ ಎಂಬ ಶೀರ್ಷಿಕೆಯಡಿ ಕೇಂದ್ರ ಬಜೆಟ್ ನಿಂದ ಲಸಿಕೆಗಳಿಗಾಗಿ 35,000 ಕೋಟಿ ರೂಪಾಯಿಗಳನ್ನು ಒದಗಿಸಲಾಗುತ್ತಿದೆ. 

ಏ.2021 ರಿಂದ ಪ್ರಾರಂಭವಾಗಿರುವ ಹೊಸ ಆರ್ಥಿಕ ವರ್ಷದಲ್ಲಿ 35,000 ಕೋಟಿ ರೂಪಾಯಿಗಳನ್ನು ಡಿಮಾಂಡ್ ಗ್ರಾಂಟ್ಸ್ ನ ಅಡಿಯಲ್ಲಿ ನೀಡಲಾಗಿದ್ದು, ರಾಜ್ಯಗಳಿಗೆ ವರ್ಗಾವಣೆಯನ್ನು ಹಲವಾರು ಆಡಳಿತಾತ್ಮಕ ಅನುಕೂಲಗಳಿಗೆ ತ್ರೈಮಾಸಿಕ ನಿಯಂತ್ರಣಕ್ಕೆ ವಿನಾಯಿತಿ ನೀಡಲಾಗಿದೆ. 

ಕೇಂದ್ರ ಸರ್ಕಾರ ಲಸಿಕೆಗಳನ್ನು ಸಂಗ್ರಹಿಸಿ, ರಾಜ್ಯಗಳಿಗೆ ಅನುದಾನದ ರೂಪದಲ್ಲಿ ನೀಡಲು ಅವಕಾಶ ನೀಡಲಿದೆ. ಕೋವಿಡ್-19 ಲಸಿಕೆ ವೆಚ್ಚಕ್ಕೆ ಕೇಂದ್ರದಿಂದ ಯಾವುದೇ, ವೆಚ್ಚಕ್ಕಾಗಿ ಅವಕಾಶವಿಲ್ಲ ಎಂಬ ವರದಿಗಳನ್ನು ಹಣಕಾಸು ಸಚಿವಾಲಯ ತಿರಸ್ಕರಿಸಿದ್ದು, ಕೇಂದ್ರ ಸರ್ಕಾರ (ಡಿಮಾಂಡ್ ಫಾರ್ ಗ್ರಾಂಟ್ಸ್ ನಂ.40  ರಾಜ್ಯಗಳಿಗೆ ವರ್ಗಾವಣೆಯ ಅಡಿಯಲ್ಲೇ) ಲಸಿಕೆಗಳನ್ನು ಖರೀದಿಸಿ ಪಾವತಿ ಮಾಡುತ್ತಿದೆ ಎಂದು ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com