ಈವರೆಗೂ ದೇಶಾದ್ಯಂತ 17 ಕೋಟಿ ಡೋಸ್ ಕೋವಿಡ್-19 ಲಸಿಕೆ ನೀಡಿಕೆ: ಕೇಂದ್ರ

ದೇಶಾದ್ಯಂತ ಈ ವರೆಗೂ ಒಟ್ಟಾರೆ 17 ಕೋಟಿ ಡೋಸ್ ಕೋವಿಡ್-19 ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. 
ಕೋವಿಡ್-19 ಲಸಿಕೆ (ಸಂಗ್ರಹ ಚಿತ್ರ)
ಕೋವಿಡ್-19 ಲಸಿಕೆ (ಸಂಗ್ರಹ ಚಿತ್ರ)

ನವದೆಹಲಿ: ದೇಶಾದ್ಯಂತ ಈ ವರೆಗೂ ಒಟ್ಟಾರೆ 17 ಕೋಟಿ ಡೋಸ್ ಕೋವಿಡ್-19 ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. 

ಕೇಂದ್ರ ಆರೋಗ್ಯ ಸಚಿವಾಲಯ ಈ ಕುರಿತ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದ್ದು, 18-44 ವಯಸ್ಸಿನ ಗುಂಪಿನವರು 30 ರಾಜ್ಯ/ ಕೆಂದ್ರಾಡಳಿತ ಪ್ರದೇಶಗಳಲ್ಲಿ 2,43,958 ಫಲಾನುಭವಿಗಳು ಮೊದಲ ಡೋಸ್ ಗಳನ್ನು ಪಡೆದಿದ್ದಾರೆ. ಈ ಮೂಲಕ ದೇಶಾದ್ಯಂತ 17,01,53,432 ಮಂದಿಗೆ ಕೋವಿಡ್-19 ಲಸಿಕೆ ನೀಡಲಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.
 
95,46,871 ಮಂದಿ ಆರೋಗ್ಯ ಕಾರ್ಯಕರ್ತರು ಮೊದಲ ಡೋಸ್ ಲಸಿಕೆ ಪಡೆದಿದ್ದರೆ, ಇದೇ ವಿಭಾಗದ 64,71,090 ಮಂದಿ ಎರಡನೇ ಡೋಸ್ ನ್ನೂ ಪಡೆದಿದ್ದಾರೆ.  

1,39,71,341 ಮುನ್ನೆಲೆ ಕಾರ್ಯಕರ್ತರು (ಎಫ್ಎಲ್ ಡಬ್ಲ್ಯು) ಗಳು ಮೊದಲ ಡೋಸ್ ಲಸಿಕೆ ಪಡೆದಿದ್ದರೆ, ಇದೇ ವಿಭಾಗದ 77,54,283 ಮಂದಿ ಎರಡೂ ಡೋಸ್ ಗಳ ಲಸಿಕೆಯನ್ನು ಹಾಕಿಸಿಕೊಂಡಿದ್ದಾರೆ. 

ಇನ್ನು 45-60 ವಯಸ್ಸಿನ ಗುಂಪಿನ 5,51,74,561 ಹಾಗೂ 65,55,714 ಮಂದಿ ಅನುಕ್ರಮವಾಗಿ ಮೊದಲ ಹಾಗೂ ಎರಡನೇ ಡೋಸ್ ಗಳ ಲಸಿಕೆಯನ್ನು ಪಡೆದಿರುತ್ತಾರೆ. 60 ವರ್ಷದ ಮೇಲ್ಪಟ್ಟ 5,36,72,259 ಮಂದಿ ಮೊದಲ ಡೋಸ್ ಲಸಿಕೆ ಪಡೆದಿದ್ದರೆ 1,49,77,918 ಮಂದಿ ಎರಡನೇ ಡೋಸ್ ಲಸಿಕೆಯನ್ನೂ ಪಡೆದಿದ್ದಾರೆ ಎಂದು ಸಚಿವಾಲಯ ಮಾಹಿತಿ ನೀಡಿದೆ. ಲಸಿಕೆ ಅಭಿಯಾನದ 114 ನೇ ದಿನವಾದ ಭಾನುವಾರದಂದು 6,71,646 ಲಸಿಕೆ ಡೋಸ್ ಗಳನ್ನು ನೀಡಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com