ಗಂಗಾ ನದಿಯಿಂದ ಈಯವರೆಗೆ 71 ಶವ ಹೊರತೆಗೆಯಲಾಗಿದೆ, ಎಲ್ಲವೂ 'ಯುಪಿ'ಯಿಂದ ತೇಲಿಬಂದಿವೆ: ಬಿಹಾರ ಸಚಿವ

ಬಿಹಾರ ರಾಜ್ಯದ ಬಕ್ಸರ್ ಜಿಲ್ಲೆಯ ಗಂಗಾ ನದಿಯಲ್ಲಿ ಶಂಕಿತ ಕೋವಿಡ್‌ ಮೃತ ದೇಹಗಳು ತೇಲುತ್ತಿರುವುದು ಬೆಳಕಿಗೆ ಬಂದಿದ್ದು. ಈವರೆಗೆ 71 ಮೃತ ದೇಹಗಳನ್ನು ನದಿಯಿಂದ ಹೊರ ತೆಗೆಯಲಾಗಿದೆ.
ಗಂಗಾನದಿ (ಸಾಂದರ್ಭಿಕ ಚಿತ್ರ)
ಗಂಗಾನದಿ (ಸಾಂದರ್ಭಿಕ ಚಿತ್ರ)

ಪಾಟ್ನಾ: ಬಿಹಾರ ರಾಜ್ಯದ ಬಕ್ಸರ್ ಜಿಲ್ಲೆಯ ಗಂಗಾ ನದಿಯಲ್ಲಿ ಶಂಕಿತ ಕೋವಿಡ್‌ ಮೃತ ದೇಹಗಳು ತೇಲುತ್ತಿರುವುದು ಬೆಳಕಿಗೆ ಬಂದಿದ್ದು. ಈವರೆಗೆ 71 ಮೃತ ದೇಹಗಳನ್ನು ನದಿಯಿಂದ ಹೊರ ತೆಗೆಯಲಾಗಿದೆ.

ಈ ಸಂಬಂಧ ಬಿಹಾರ ಜಲಸಂಪನ್ಮೂಲ ಸಚಿವ ಸಂಜಯ್ ಕುಮಾರ್ ಅವರು ಸರಣಿ ಟ್ವೀಟ್‌ ಮಾಡಿದ್ದು, ಈ ಮೃತ ದೇಹಗಳು ನೆರೆಯ ಉತ್ತರ ಪ್ರದೇಶದಿಂದ ಕೊಚ್ಚಿಕೊಂಡು ಬಂದಿವೆ ಎಂದು ಪ್ರತಿಪಾದಿಸಿದ್ದಾರೆ.

"ಗಂಗಾ ನದಿಯಲ್ಲಿ ಮೃತದೇಹದ ಅವಶೇಷಗಳನ್ನು ತೇಲಿ ಬರುತ್ತಿರುವ ದುರದೃಷ್ಟಕರ ಪ್ರಕರಣವನ್ನು ಬಿಹಾರ ಸರ್ಕಾರದ ಗಮನಕ್ಕೆ ಬಂದಿದೆ.... ಶವಗಳು ಉತ್ತರ ಪ್ರದೇಶದಿಂದ ಬಿಹಾರಕ್ಕೆ ತೇಲಿ ಬರುತ್ತಿವೆ" ಎಂದು ಸಂಜಯ್ ಕುಮಾರ್ ಅವರು ಹೇಳಿದ್ದಾರೆ.

ಇವು "ನಾಲ್ಕು-ಐದು ದಿನಗಳ" ಹಿಂದೆ ಮೃತಪಟ್ಟ ವ್ಯಕ್ತಿಗಳ ಶವ ಎಂಬುದು ಮರಣೋತ್ತರ ಪರೀಕ್ಷೆಯ ನಂತರ ವೈದ್ಯರು ದೃಢಪಡಿಸಿದ್ದಾರೆ.  

ಈ ದುರಂತ ಮತ್ತು ಗಂಗಾ ನದಿಯ "ಹಾನಿ" ಬಗ್ಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಆಘಾತ ವ್ಯಕ್ತಪಡಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

"ಪ್ರೋಟೋಕಾಲ್ ಪ್ರಕಾರ 71 ಶವ ಸಂಸ್ಕಾರ ಮಾಡಲಾಗಿದೆ. ಉತ್ತರ ಪ್ರದೇಶ ಮತ್ತು ಬಿಹಾರದ ಗಡಿಯಲ್ಲಿರುವ ರಾಣಿಘಾಟ್ ಗಂಗೆಯಲ್ಲಿ ಒಂದು ಬಲೆ ಇರಿಸಲಾಗಿದೆ. ಯುಪಿ ಆಡಳಿತವು ಜಾಗರೂಕರಾಗಿರಲು ನಾವು ಸಲಹೆ ನೀಡಿದ್ದೇವೆ. ನಮ್ಮ ಆಡಳಿತವೂ ಜಾಗರೂಕತೆಯಿಂದ ಇರುತ್ತದೆ. ಮೃತರಿಗೆ ಮತ್ತು ಮಾ ಗಂಗೆಗೆ ಗೌರವ ನೀಡಿ" ಎಂದು ಸಲಹೆ ನೀಡಲಾಗಿದೆ ಎಂದು ಬಿಹಾರ ಸಚಿವರು ಟ್ವೀಟ್ ಮಾಡಿದ್ದಾರೆ.

ಉತ್ತರ ಪ್ರದೇಶದಲ್ಲಿ ನೂರಾರು ಕೋವಿಡ್‌ ಮೃತ ದೇಹಗಳನ್ನು ಸುಡಲಾಗುತ್ತಿದೆ ಎಂಬ ಟೀಕೆಗಳ ನಡುವೆ ಗಂಗಾ ನದಿಯಲ್ಲಿ ತೇಲುತ್ತಿರುವ ಮೃತ ದೇಹಗಳು ಉತ್ತರ ಪ್ರದೇಶಕ್ಕೆ ಸೇರಿವೆ ಎಂಬ ಬಿಹಾರ ಸರ್ಕಾರದ ಹೇಳಿಕೆ ಮತ್ತಷ್ಟು ಟೀಕೆಗಳಿಗೆ ಕಾರಣವಾಗಿದೆ. ಈವರೆಗೆ ನೆಟ್ ಜನ್‌ಗಳು ದೊಡ್ಡ ಪ್ರಮಾಣದಲ್ಲಿ ಈ ವಿಷಯದ ಬಗ್ಗೆ ಯೋಗಿ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com