61 ದಿನಗಳಲ್ಲಿ ಇದೇ ಮೊದಲು, 24 ಗಂಟೆಗಳಲ್ಲಿ ಕೋವಿಡ್ ಸಕ್ರಿಯ ಪ್ರಕರಣಗಳು 30 ಸಾವಿರದಷ್ಟು ಇಳಿಕೆ!

61 ದಿನಗಳ ನಂತರ ಇದೇ ಮೊದಲ ಬಾರಿಗೆ ಕಳೆದ 24 ಗಂಟೆಗಳ ಅವಧಿಯಲ್ಲಿ 30,016 ರಷ್ಟು ಒಟ್ಟು ಸಕ್ರಿಯ ಪ್ರಕರಣಗಳ ಇಳಿಕೆಯೊಂದಿಗೆ ದೇಶದಲ್ಲಿನ ಒಟ್ಟಾರೆ ಸಕ್ರಿಯ ಪ್ರಕರಣಗಳ ಸಂಖ್ಯೆ 37,15,221ಕ್ಕೆ ಇಳಿದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

Published: 11th May 2021 03:47 PM  |   Last Updated: 11th May 2021 05:40 PM   |  A+A-


Covid-19_Patient1

ಸಾಂದರ್ಭಿಕ ಚಿತ್ರ

Posted By : Nagaraja AB
Source : PTI

ನವದೆಹಲಿ: 61 ದಿನಗಳ ನಂತರ ಇದೇ ಮೊದಲ ಬಾರಿಗೆ ಕಳೆದ 24 ಗಂಟೆಗಳ ಅವಧಿಯಲ್ಲಿ 30,016 ರಷ್ಟು ಒಟ್ಟು ಸಕ್ರಿಯ ಪ್ರಕರಣಗಳ ಇಳಿಕೆಯೊಂದಿಗೆ ದೇಶದಲ್ಲಿನ ಒಟ್ಟಾರೆ ಸಕ್ರಿಯ ಪ್ರಕರಣಗಳ ಸಂಖ್ಯೆ 37,15,221ಕ್ಕೆ ಇಳಿದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟಾರೆ ಚೇತರಿಕೆ ಪ್ರಮಾಣವೂ 61 ದಿನಗಳ ಬಳಿಕ ದೈನಂದಿನ ಹೊಸ ಕೋವಿಡ್-19
ಪ್ರಕರಣಕ್ಕಿಂತಲೂ ಹೆಚ್ಚಾಗಿದೆ. ಒಟ್ಟು ಸಕ್ರಿಯ ಪ್ರಕರಣಗಳು ಈಗ ದೇಶದ ಒಟ್ಟು ಕೊರೋನಾ ವೈರಸ್ ಸೋಂಕುಗಳಲ್ಲಿ
ಶೇಕಡಾ 16.16 ರಷ್ಟಿದೆ.

ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಕೇರಳ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ರಾಜಸ್ಥಾನ, ಆಂಧ್ರಪ್ರದೇಶ, ಗುಜರಾತ್, ತಮಿಳುನಾಡು, ಛತ್ತೀಸ್ ಗಢ, ಹರಿಯಾಣ, ಬಿಹಾರ ಮತ್ತು ಮಧ್ಯಪ್ರದೇಶ ಸೇರಿದಂತೆ ಒಟ್ಟು 13 ರಾಜ್ಯಗಳಲ್ಲಿ ದೇಶದಲ್ಲಿನ ಶೇ.82.68 ರಷ್ಟು ಒಟ್ಟು ಸಕ್ರಿಯ ಪ್ರಕರಣಗಳಿರುವುದಾಗಿ ಸಚಿವಾಲಯ ಮಾಹಿತಿ ನೀಡಿದೆ.

ಬೆಂಗಳೂರು ನಗರ, ಪುಣೆ, ದೆಹಲಿ, ಎರ್ನಾಕುಲಂ, ನಾಗಪುರ, ಅಹಮದಾಬಾದ್, ತ್ರಿಸೂರ್, ಜೈಪುರ, ಕೋಝಿಕೊಡ್ ಮತ್ತು ಮುಂಬೈ ಸೇರಿದಂತೆ 10 ಜಿಲ್ಲೆಗಳಿಂದ ದೇಶದಲ್ಲಿನ ಶೇ.24.44 ರಷ್ಟು ಒಟ್ಟು ಸಕ್ರಿಯ ಪ್ರಕರಣಗಳು ವರದಿಯಾಗುತ್ತಿವೆ. ಕರ್ನಾಟಕ, ಕೇರಳ, ತಮಿಳುನಾಡು, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ರಾಜಸ್ಥಾನ, ಆಂಧ್ರ ಪ್ರದೇಶ, ಹರಿಯಾಣ ಮತ್ತು ದೆಹಲಿಯಲ್ಲಿ ಶೇ.69.88 ರಷ್ಟು ಹೊಸ ಪ್ರಕರಣಗಳು ಒಂದೇ ದಿನದಲ್ಲಿ ದಾಖಲಾಗುತ್ತಿರುವುದಾಗಿ ಸಚಿವಾಲಯ ಹೇಳಿದೆ. 

ಸೋಮವಾರ ಕರ್ನಾಟಕದಲ್ಲಿ 39,305, ಮಹಾರಾಷ್ಟ್ರ 37,236 ಮತ್ತು ತಮಿಳುನಾಡಿನಲ್ಲಿ 28, 978 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿದ್ದವು. ಕಳೆದ 24 ಗಂಟೆಗಳಲ್ಲಿ 3,56,082 ರೋಗಿಗಳು ಚೇತರಿಕೆಯೊಂದಿಗೆ ಒಟ್ಟಾರೆ ಗುಣಮುಖರಾದವರ ಸಂಖ್ಯೆ 1,90,27,304ಕ್ಕೆ ಏರಿಕೆಯಾಗಿದೆ. ಹತ್ತು ರಾಜ್ಯಗಳಲ್ಲಿ ಶೇ.72.28 ರಷ್ಟು ಮಂದಿ ಹೊಸ ರೋಗಿಗಳು ಚೇತರಿಕೆಯಾಗಿದ್ದಾರೆ. ರಾಷ್ಟ್ರೀಯ ಮರಣ ಪ್ರಮಾಣ ಪ್ರಸ್ತುತ ಶೇ.1.09ರಷ್ಟಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.


Stay up to date on all the latest ರಾಷ್ಟ್ರೀಯ news
Poll
Rahul gandhi

ಕಾಂಗ್ರೆಸ್‌ನಲ್ಲಿನ ಯುವ, ಕ್ರಿಯಾಶೀಲ ನಾಯಕರಿಂದ ರಾಹುಲ್ ಗಾಂಧಿಗೆ ಅಭದ್ರತೆ ಕಾಡುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp