ಕೋವಿಡ್-19: ಹರಿಯಾಣದಲ್ಲಿ ಅತಿ ಹೆಚ್ಚು ಲಸಿಕೆ ವ್ಯರ್ಥ; 2, 3ನೇ ಸ್ಥಾನದಲ್ಲಿ ಅಸ್ಸಾಂ, ರಾಜಸ್ಥಾನ!

ಅತಿ ಹೆಚ್ಚಿನ ಪ್ರಮಾಣದ ಕೋವಿಡ್-19 ಲಸಿಕೆ ವ್ಯರ್ಥವಾಗುತ್ತಿರುವ ಮೂರು ರಾಜ್ಯಗಳ ಪೈಕಿ ಹರಿಯಾಣ ಮೊದಲ ಸ್ಥಾನದಲ್ಲಿದೆ. ಅಸ್ಸಾಂ ಮತ್ತು ರಾಜಸ್ಥಾನ ನಂತರದ ಸ್ಥಾನ ಪಡೆದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ತಿಳಿಸಿದೆ.
ಲಸಿಕೆ ಪಡೆಯಲು ವಾರಣಾಸಿಯ ಲಸಿಕೆ ಕೇಂದ್ರದಲ್ಲಿ ಸರತಿಯಲ್ಲಿ ನಿಂತಿರುವ ಫಲಾನುಭವಿಗಳು
ಲಸಿಕೆ ಪಡೆಯಲು ವಾರಣಾಸಿಯ ಲಸಿಕೆ ಕೇಂದ್ರದಲ್ಲಿ ಸರತಿಯಲ್ಲಿ ನಿಂತಿರುವ ಫಲಾನುಭವಿಗಳು

ನವದೆಹಲಿ: ಅತಿ ಹೆಚ್ಚಿನ ಪ್ರಮಾಣದ ಕೋವಿಡ್ -19 ಲಸಿಕೆ ವ್ಯರ್ಥವಾಗುತ್ತಿರುವ ಮೂರು ರಾಜ್ಯಗಳ ಪೈಕಿ ಹರಿಯಾಣ ಮೊದಲ ಸ್ಥಾನದಲ್ಲಿದೆ. ಅಸ್ಸಾಂ ಮತ್ತು ರಾಜಸ್ಥಾನ ನಂತರದ ಸ್ಥಾನ ಪಡೆದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ತಿಳಿಸಿದೆ.

ಹರಿಯಾಣದಲ್ಲಿ ಶೇ. 6.49 ಲಸಿಕೆಯನ್ನು ವ್ಯರ್ಥ ಮಾಡಲಾಗಿದೆ ಅಸ್ಸಾಂ ಶೇ. 5.92 ಮತ್ತು ರಾಜಸ್ಥಾನದಲ್ಲಿ  ಶೇ.5.68 ರಷ್ಟು ಲಸಿಕೆ ವ್ಯರ್ಥವಾಗಿದೆ ಎಂದು ಸಚಿವಾಲಯ ವರದಿ ಮಾಡಿದೆ.

ಮೇಘಾಲಯದಲ್ಲಿ ಶೇ 5.67 ರಷ್ಟು ಲಸಿಕೆ ವ್ಯರ್ಥವಾಗಿದೆ, ಬಿಹಾರದಲ್ಲಿ ಶೇ 5.20, ಮಣಿಪುರದಲ್ಲಿ ಶೇ 5.19, ಪಂಜಾಬ್‌ನಲ್ಲಿ ಶೇ 4.94, ದಾದ್ರಾ ಮತ್ತು ನಗರ್ ಹವೇಲಿಯಲ್ಲಿ ಶೇ 4.5, ತಮಿಳುನಾಡಿನಲ್ಲಿ ಶೇ 4.13 ಮತ್ತು ನಾಗಾಲ್ಯಾಂಡ್‌ನಲ್ಲಿ ಶೇ 3.36 ಲಸಿಕೆ ವ್ಯರ್ಥವಾಗಿವೆ.

ಭಾರತ ಸರ್ಕಾರವು ಈವರೆಗೆ ಸುಮಾರು 18 ಕೋಟಿ ಲಸಿಕೆ ಡೋಸ್ ಗಳನ್ನು (17,93,57,860) ರಾಜ್ಯಗಳು /ಕೇಂದ್ತಾಡಳಿತ ಪ್ರದೇಶಗಳಿಗೆ ಉಚಿತವಾಗಿ ನೀಡಿದೆ. ಇದರಲ್ಲಿ, ತ್ಯಾಜ್ಯಗಳು ಸೇರಿದಂತೆ ಒಟ್ಟು ಬಳಕೆ 16,89,27,797 ಪ್ರಮಾಣಗಳು (ಇಂದು ಬೆಳಿಗ್ಗೆ 8 ಗಂಟೆಗೆ ಲಭ್ಯವಿರುವ ಮಾಹಿತಿಯ ಪ್ರಕಾರ). ಆಗಿದೆ. 90 ಲಕ್ಷಕ್ಕೂ ಹೆಚ್ಚು ಕೋವಿಡ್ ಲಸಿಕೆ ಡೋಸ್ ಗಳು (90,31,691) ಇನ್ನೂ ರಾಜ್ಯಗಳು /ಕೇಂದ್ರಾಡಳಿತ ಪ್ರದೇಶಗಳಲ್ಲಿ ನಿರ್ವಹಿಸಲ್ಪಡುತ್ತವೆ. ನೆಗೆಟಿವ್ ಬ್ಯಾಲೆನ್ಸ್ ಹೊಂದಿರುವ ರಾಜ್ಯಗಳು ಸಶಸ್ತ್ರ ಪಡೆಗಳಿಗೆ ಸರಬರಾಜು ಮಾಡಿದ ಲಸಿಕೆಯನ್ನು ಒಪ್ಪಿಕೊಳ್ಳದ ಕಾರಣ ಸರಬರಾಜು ಮಾಡಿದ ಲಸಿಕೆಗಿಂತ ಹೆಚ್ಚಿನ ಬಳಕೆ (ವ್ಯರ್ಥ ಸೇರಿದಂತೆ) ತೋರಿಸುತ್ತಿವೆ ಎಂದು ಸಚಿವಾಲಯ ಹೇಳಿದೆ.

ಮುಂದಿನ ಮೂರು ದಿನಗಳಲ್ಲಿ 7 ಲಕ್ಷ (7,29,610) ಲಸಿಕೆ ಪ್ರಮಾಣವನ್ನು ರಾಜ್ಯಗಳು /ಕೇಂದ್ರಾಡಳಿತ ಪ್ರದೇಶಗಳು ಸ್ವೀಕರಿಸಲಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ತಿಳಿಸಿದೆ.

ಸರ್ಕಾರದ ಅಂಕಿಅಂಶಗಳ ಪ್ರಕಾರ, ಮಹಾರಾಷ್ಟ್ರವು ಅತಿ ಹೆಚ್ಚು ಲಸಿಕೆ ಡೋಸ್ ಗಳನ್ನು (1,82,52,450) ಪಡೆದಿದ್ದು, ಉತ್ತರ ಪ್ರದೇಶ 1,51,31,270; ಗುಜರಾತ್ 1,48,70,490 ರಾಜಸ್ಥಾನ 1,47,37,360, ಪಶ್ಚಿಮ ಬಂಗಾಳ 1,20,83,340, ಕರ್ನಾಟಕ 1,09,28,270, ಮಧ್ಯಪ್ರದೇಶ 94,79,720, ಬಿಹಾರ 87,65,820, ಕೇರಳ 78,97,790 ಮತ್ತು ತಮಿಳುನಾಡು 76,43,010 ಡೋಸ್ ಗಳನ್ನು ಪಡೆದಿವೆ.

ಸಚಿವಾಲಯದ ಮಾಹಿತಿಯ ಪ್ರಕಾರ, ಮೇ 11, ಬೆಳಿಗ್ಗೆ 8 ರವರೆಗೆ, ಲಸಿಕೆ ಡೋಸ್ ಗಳ ಬ್ಯಾಲೆನ್ಸ್ ಉತ್ತರ ಪ್ರದೇಶದಲ್ಲಿ 11,52,091 ಡೋಸ್ ನೊಂದಿಗೆ ಅತಿ ಹೆಚ್ಚು ಇದ್ದು ಗುಜರಾತ್, ಮಧ್ಯಪ್ರದೇಶಗಳು ನಂತರ ಸ್ಥಾನದಲ್ಲಿವೆ.

ಏತನ್ಮಧ್ಯೆ, ಕಳೆದ 24 ಗಂಟೆಗಳಲ್ಲಿ 3,29,942 ಹೊಸ ಕೋವಿಡ್ ಪ್ರಕರಣಗಳು ದೇಶದಲ್ಲಿ ದಾಖಲಾಗಿದೆ. ಆದಾಗ್ಯೂ, ಈ ಅವಧಿಯಲ್ಲಿ ದೇಶವು ಹೆಚ್ಚಿನ ಚೇತರಿಕೆ ಕಂಡಿದ್ದು ಕಳೆದ ಒಂದೇ ದಿನ 3,56,082 ಮಂದಿ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ. 3,876 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟೂ ಸಾವಿನ ಸಂಖ್ಯೆ 2,49,992ಕ್ಕೆ ತಲುಪಿದೆ. ದೇಶದಲ್ಲಿ ಪ್ರಸ್ತುತ 37,15,221 ಸಕ್ರಿಯ ಕೊರೋನಾ ಪ್ರಕರಣಗಳಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com