ಭಾರತದ ಕೋವಿಡ್-19 ನಿರ್ವಹಣೆ ನಿಯಮಗಳಲ್ಲಿ ಸಲಹೆ ನೀಡಲಾದ ಐವರ್ಮೆಕ್ಟಿನ್ ಔಷಧಿ ಬಗ್ಗೆ ಡಬ್ಲ್ಯುಹೆಚ್ಒ ಎಚ್ಚರಿಕೆ 

ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡುವುದಕ್ಕಾಗಿ ಕೋವಿಡ್-19 ನಿರ್ವಹಣೆ ನಿಯಮಗಳಲ್ಲಿ ಸಲಹೆ ನೀಡಲಾದ ಐವರ್ಮೆಕ್ಟಿನ್ ಔಷಧಿ ಬಗ್ಗೆ ಡಬ್ಲ್ಯುಹೆಚ್ಒ ಎಚ್ಚರಿಕೆ ನೀಡಿದೆ. 

Published: 11th May 2021 10:58 PM  |   Last Updated: 11th May 2021 11:24 PM   |  A+A-


World Health Organisation's Chief Scientist Soumya Swaminathan (Photo | Twitter)

ಮುಖ್ಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್

Posted By : Srinivas Rao BV
Source : The New Indian Express

ನವದೆಹಲಿ: ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡುವುದಕ್ಕಾಗಿ ಕೋವಿಡ್-19 ನಿರ್ವಹಣೆ ನಿಯಮಗಳಲ್ಲಿ ಸಲಹೆ ನೀಡಲಾದ ಐವರ್ಮೆಕ್ಟಿನ್ ಔಷಧಿ ಬಗ್ಗೆ ಡಬ್ಲ್ಯುಹೆಚ್ಒ ಎಚ್ಚರಿಕೆ ನೀಡಿದೆ. 

ಪಾರಾಸಿಟಿಕ್ ಸೋಂಕುಗಳನ್ನು ನಿವಾರಿಸುವುದಕ್ಕಾಗಿ ಅನುಸರಿಸಲಾಗುತ್ತಿದ್ದ ಚಿಕಿತ್ಸಾ ವಿಧಾನದಲ್ಲಿ ಬಾಯಿಯಿಂದ ತೆಗೆದುಕೊಳ್ಳುವ ಐವರ್ಮೆಕ್ಟಿನ್ ಔಷಧಿಯನ್ನು ಕೋವಿಡ್-19 ರೋಗಿಗಳಿಗೂ ನೀಡುವುದಕ್ಕೆ ಭಾರತ ಸರ್ಕಾರ ಪ್ರಕಟಿಸಿರುವ  ಕೋವಿಡ್-19 ನಿರ್ವಹಣೆ ನಿಯಮಗಳಲ್ಲಿ ಸಲಹೆ ನೀಡಲಾಗಿತ್ತು.

ಆದರೆ ಇದರ ವಿರುದ್ಧ ಡಬ್ಲ್ಯುಹೆಚ್ಒ ಸಾರ್ವತ್ರಿಕ ಬಳಕೆಯ ವಿರುದ್ಧ ಎಚ್ಚರಿಸಿದೆ. ಪ್ರಾರಂಭಿಕ ಹಂತದ ಸೋಂಕು ಲಕ್ಷಣಗಳಿರುವವರಿಗೆ ಐವರ್ಮೆಕ್ಟಿನ್ ಔಷಧ ಬಳಕೆ ಮಾಡಲು ಹೇಳಲಾಗಿತ್ತಾದರೂ ಆದರೆ ಕೋವಿಡ್-19 ಗೆ ಈ ಔಷಧ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂಬುದಕ್ಕೆ ಯಾವುದೇ ಸ್ಪಷ್ಟ ಪುರಾವೆಗಳು ಇಲ್ಲ ಎಂದು ಹೇಳಲಾಗುತ್ತಿದೆ. 

ಹೊಸ ರೋಗಗಳಿಗೆ ಔಷಧಗಳನ್ನು ನೀಡುವಾಗ ಸುರಕ್ಷತೆ ಹಾಗೂ ಪರಿಣಾಮಕಾರಿತ್ವ ಬಹಳ ಮುಖ್ಯವಾಗುತ್ತದೆ. ಕ್ಲಿನಿಕಲ್ ಟ್ರಯಲ್ ಗಳನ್ನು ಹೊರತುಪಡಿಸಿ ಕೋವಿಡ್-19 ಗೆ ಐವರ್ಮೆಕ್ಟಿನ್ ನೀಡುವುದರ ವಿರುದ್ಧ ಡಬ್ಲ್ಯುಹೆಚ್ಒ ಶಿಫಾರಸು ಮಾಡುತ್ತದೆ ಎಂದು ಸಂಸ್ಥೆಯ ಮುಖ್ಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್ ಹೇಳಿದ್ದಾರೆ. 


Stay up to date on all the latest ರಾಷ್ಟ್ರೀಯ news
Poll
Rahul gandhi

ಕಾಂಗ್ರೆಸ್‌ನಲ್ಲಿನ ಯುವ, ಕ್ರಿಯಾಶೀಲ ನಾಯಕರಿಂದ ರಾಹುಲ್ ಗಾಂಧಿಗೆ ಅಭದ್ರತೆ ಕಾಡುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp