ಆಮ್ಲಜನಕ ಸ್ಥಾವರಗಳಿಗೆ ದಿನದ 24 ತಾಸು ನಿರಂತರ ವಿದ್ಯುತ್ ಪೂರೈಕೆ

ದೇಶಾದ್ಯಂತ ಆಮ್ಲಜನಕ ಸ್ಥಾವರಗಳಿಗೆ ಅಡೆತಡೆಯಿಲ್ಲದೆ ನಿರಂತರ ವಿದ್ಯುತ್‍ ಪೂರೈಕೆ ಮಾಡುವ ಗುರಿಯೊಂದಿಗೆ ದೆಹಲಿಯ 13 ಸ್ಥಾವರ ಸೇರಿದಂತೆ ದೇಶದ 73 ಪ್ರಮುಖ ಆಮ್ಲಜನಕ ಸ್ಥಾವರಗಳಿಗೆ ವಿದ್ಯುತ್ ಸರಬರಾಜು ಮಾಡಲು ಕೇಂದ್ರ ಇಂಧನ ಸಚಿವಾಲಯ ಮೇಲ್ವಿಚಾರಣೆ ಕೇಂದ್ರವನ್ನು ಸ್ಥಾಪಿಸಿದೆ. 
ಆಮ್ಲಜನಕ ಸ್ಥಾವರಗಳಿಗೆ ದಿನದ 24 ತಾಸು ನಿರಂತರ ವಿದ್ಯುತ್ ಪೂರೈಕೆ
ಆಮ್ಲಜನಕ ಸ್ಥಾವರಗಳಿಗೆ ದಿನದ 24 ತಾಸು ನಿರಂತರ ವಿದ್ಯುತ್ ಪೂರೈಕೆ

ನವದೆಹಲಿ: ದೇಶಾದ್ಯಂತ ಆಮ್ಲಜನಕ ಸ್ಥಾವರಗಳಿಗೆ ಅಡೆತಡೆಯಿಲ್ಲದೆ ನಿರಂತರ ವಿದ್ಯುತ್‍ ಪೂರೈಕೆ ಮಾಡುವ ಗುರಿಯೊಂದಿಗೆ ದೆಹಲಿಯ 13 ಸ್ಥಾವರ ಸೇರಿದಂತೆ ದೇಶದ 73 ಪ್ರಮುಖ ಆಮ್ಲಜನಕ ಸ್ಥಾವರಗಳಿಗೆ ವಿದ್ಯುತ್ ಸರಬರಾಜು ಮಾಡಲು ಕೇಂದ್ರ ಇಂಧನ ಸಚಿವಾಲಯ ಮೇಲ್ವಿಚಾರಣೆ ಕೇಂದ್ರವನ್ನು ಸ್ಥಾಪಿಸಿದೆ. 

ದಿನದ 24 ತಾಸು ವಿದ್ಯುತ್ ಪೂರೈಸುವ ಕ್ರಿಯಾಪರ ಉಪಕ್ರಮಗಳ ಭಾಗವಾಗಿ, ಆಮ್ಲಜನಕ ಸ್ಥಾವರಗಳಿಗೆ ವಿದ್ಯುತ್ ಪೂರೈಕೆಯ ವಸ್ತುಸ್ಥಿತಿಯನ್ನು ಇಂಧನ ಕಾರ್ಯದರ್ಶಿಯವರು ಪರಿಶೀಲಿಸಿದ್ದು, ರಾಜ್ಯಗಳ ಇಂಧನ ಕಾರ್ಯದರ್ಶಿಗಳು ಮತ್ತು ವಿದ್ಯುತ್ ವ್ಯವಸ್ಥೆ ಕಾರ್ಯಾಚರಣೆ ನಿಗಮದ ಸಿಎಂಡಿಯವರೊಂದಿಗೂ ಪ್ರತಿದಿನ ಸಮಾಲೋಚಿಸುತ್ತಿದ್ದಾರೆ. 

24 ತಾಸು ಕಾರ್ಯನಿರ್ವಹಿಸುವ ಆಮ್ಲಜನಕ ನಿಯಂತ್ರಣಾ ಕೊಠಡಿ ಮತ್ತು ಆಂತರಿಕ ನಿಯಂತ್ರಣ ತಂಡವನ್ನು ಆರ್ ಇಸಿ ಲಿಮಿಟೆಡ್‍ ಸಂಸ್ಥೆಯಲ್ಲಿ ತೆರೆಯಲಾಗಿದ್ದು, ಆಮ್ಲಜನಕ ಸ್ಥಾವರಗಳಿಗೆ ದಿನದ 24 ತಾಸು ವಿದ್ಯುತ್ ನಿರಂತರ ಪೂರೈಕೆಯಾಗುವಂತೆ ನೋಡಲ್‍ ಅಧಿಕಾರಿಗಳನ್ನು ಇವುಗಳಿಗೆ ನಿಯೋಜಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com