ಲಸಿಕೆ ಉತ್ಪಾದನೆ ಹೆಚ್ಚಿಸಲು ಕೋವ್ಯಾಕ್ಸಿನ್ ತಂತ್ರಜ್ಞಾನ ವರ್ಗಾವಣೆಗೆ ಮುಕ್ತ ಎಂದ ಕೇಂದ್ರ! 

ಲಸಿಕೆ ಉತ್ಪಾದನೆ ಹೆಚ್ಚಿಸಲು ದೇಶವ್ಯಾಪಿ ಕೂಗು ಹೆಚ್ಚಾಗುತ್ತಿದ್ದರೆ ಇತ್ತ ಕೇಂದ್ರ ಸರ್ಕಾರ ಕೋವ್ಯಾಕ್ಸಿನ್ ತಂತ್ರಜ್ಞಾನ ವರ್ಗಾವಣೆಯ ಪ್ರಸ್ತಾವನೆಗೆ ತಾನು ಮುಕ್ತವಾಗಿರುವುದಾಗಿ ತಿಳಿಸಿದೆ. 

Published: 13th May 2021 09:31 PM  |   Last Updated: 13th May 2021 09:31 PM   |  A+A-


Covaxin

ಕೋವ್ಯಾಕ್ಸಿನ್

Posted By : Srinivas Rao BV
Source : The New Indian Express

ನವದೆಹಲಿ: ಲಸಿಕೆ ಉತ್ಪಾದನೆ ಹೆಚ್ಚಿಸಲು ದೇಶವ್ಯಾಪಿ ಕೂಗು ಹೆಚ್ಚಾಗುತ್ತಿದ್ದರೆ ಇತ್ತ ಕೇಂದ್ರ ಸರ್ಕಾರ ಕೋವ್ಯಾಕ್ಸಿನ್ ತಂತ್ರಜ್ಞಾನ ವರ್ಗಾವಣೆಯ ಪ್ರಸ್ತಾವನೆಗೆ ತಾನು ಮುಕ್ತವಾಗಿರುವುದಾಗಿ ತಿಳಿಸಿದೆ. 
 
ಆದರೆ ಇದಕ್ಕೆ ಸೂಕ್ತವಾದಂತಹ ವೇದಿಕೆಯದ್ದೇ ಸಮಸ್ಯೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಕೋವಿಶೀಲ್ಡ್ ಲಸಿಕೆ ಕೋವಿಡ್-19 ನ ನಿಷ್ಕ್ರಿಯ ವೈರಾಣುವಿನ ಆವೃತ್ತಿಯಾಗಿದ್ದು, ಸಂಸ್ಕರಣೆಗಾಗಿ ಯಾವುದಾದರೂ ಜೀವಂತ ವೈರಾಣುವಿನ ಅಗತ್ಯವಿರುತ್ತದೆ. ಈ ಪ್ರಕ್ರಿಯೆಯನ್ನು ಬಯೋಸೇಫ್ಟಿ ಲೆವೆಲ್ 3 ಶ್ರೇಣಿಯ ಪ್ರಯೋಗಾಲಯಗಳಲ್ಲಿ ಮಾತ್ರವೇ ಮಾಡಬಹುದಾಗಿದೆ ಎಂದು ನೀತಿ ಆಯೋಗದ ಸದಸ್ಯ, ರಾಷ್ಟ್ರೀಯ ಕೋವಿಡ್-19 ಕಾರ್ಯಪಡೆಯ ಮುಖ್ಯಸ್ಥ ವಿಕೆ ಪೌಲ್ ತಿಳಿಸಿದ್ದಾರೆ. 

ಕೋವ್ಯಾಕ್ಸಿನ್ ನ್ನು ಭಾರತ್ ಬಯೋಟೆಕ್ ಹಾಗೂ ಐಸಿಎಂಆರ್ ಅಭಿವೃದ್ಧಿಪಡಿಸಿದ್ದು, ಐಸಿಎಂಆರ್ ಐಪಿ ಹಕ್ಕುಗಳಲ್ಲಿ ಪಾಲನ್ನು ಹೊಂದಿದೆ. ಕೋವಿಶೀಲ್ಡ್ ಲಸಿಕೆ ಕೋವಿಡ್-19 ನ ನಿಷ್ಕ್ರಿಯ ವೈರಾಣುವಿನ ಆವೃತ್ತಿಯಾಗಿದ್ದು, ಸಂಸ್ಕರಣೆ ಬಿಎಸ್ಎಲ್ 3 ಗುಣಮಟ್ಟದ ಪ್ರಯೋಗಾಲಯದಲ್ಲಿ ಮಾತ್ರವೇ ಅಭಿವೃದ್ಧಿಪಡಿಸುವುದು ಸಾಧ್ಯವಿದೆ.  ಭಾರತದಲ್ಲಿರುವ ಬೇರೆ ಯಾವ ಸಂಸ್ಥೆಗಳಲ್ಲೂ ಈ ಗುಣಮಟ್ಟದ ಪ್ರಯೋಗಾಲಯಗಳು ಇಲ್ಲದೇ ಇರುವುದು ಕೋವ್ಯಾಕ್ಸಿನ್ ತಂತ್ರಜ್ಞಾನ ವರ್ಗಾವಣೆಗೆ ಸಮಸ್ಯೆಯಾಗಿದೆ ಎಂದು ಕಾರ್ಯಪಡೆಯ ಮುಖ್ಯಸ್ಥ ವಿಕೆ ಪೌಲ್ ಹೇಳಿದ್ದಾರೆ. 

ಆದಾಗ್ಯೂ ಲಸಿಕೆಯನ್ನು ಹೆಚ್ಚು ಉತ್ಪಾದಿಸುವ ನಿಟ್ಟಿನಲ್ಲಿ ಸಹಕಾರಿಯಾಗುವುದಕ್ಕೆ ಯಾವುದೇ ಸಂಸ್ಥೆಗಳು ಈ ಗುಣಮಟ್ಟದ ತಾಂತ್ರಿಕ ಉನ್ನತೀಕರಣಕ್ಕೆ ಮುಂದಾಗುವುದಾದರೆ ಅದನ್ನು ಸರ್ಕಾರ ಬೆಂಬಲಿಸಲಿದೆ ಎಂದು ವಿಕೆ ಪೌಲ್ ಮಾಹಿತಿ ನೀಡಿದ್ದಾರೆ. 

ಸದ್ಯದ ಪರಿಸ್ಥಿತಿಯಲ್ಲಿ ಈ ರೀತಿಯ ಮಹತ್ವಾಕಾಂಕ್ಷಿ ಸಾಹಸಕ್ಕೆ ಕೈಹಾಕುವುದಕ್ಕಾಗಿ ಬೇರೆಲ್ಲದಕ್ಕಿಂತಲೂ ರಾಜಕೀಯ ಇಚ್ಛಾಶಕ್ತಿ ಅಗತ್ಯವಿದೆ ಎಂದು ತಜ್ಞರು ಹೇಳಿದ್ದಾರೆ. 


Stay up to date on all the latest ರಾಷ್ಟ್ರೀಯ news
Poll
Rahul gandhi

ಕಾಂಗ್ರೆಸ್‌ನಲ್ಲಿನ ಯುವ, ಕ್ರಿಯಾಶೀಲ ನಾಯಕರಿಂದ ರಾಹುಲ್ ಗಾಂಧಿಗೆ ಅಭದ್ರತೆ ಕಾಡುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp