ಅಸ್ಸಾಂನಲ್ಲಿ ಸಿಡಿಲು ಬಡೆದು 18 ಕಾಡಾನೆಗಳು ಸಾವು

ಮಧ್ಯ ಅಸ್ಸಾಂನ ನಾಗಾಂವ್ ಜಿಲ್ಲೆಯಲ್ಲಿ ಬುಧವಾರ ರಾತ್ರಿ ಸಿಡಿಲು ಬಡಿದು 18 ಕಾಡಾನೆಗಳು ಸಾವನ್ನಪ್ಪಿವೆ.
ಸಿಡಿಲು ಬಡಿದು ಕಾಡಾನೆ ಸಾವು
ಸಿಡಿಲು ಬಡಿದು ಕಾಡಾನೆ ಸಾವು

ಗುವಾಹಟಿ: ಮಧ್ಯ ಅಸ್ಸಾಂನ ನಾಗಾಂವ್ ಜಿಲ್ಲೆಯಲ್ಲಿ ಬುಧವಾರ ರಾತ್ರಿ ಸಿಡಿಲು ಬಡಿದು 18 ಕಾಡಾನೆಗಳು ಸಾವನ್ನಪ್ಪಿವೆ.

ವರದಿಗಳ ಪ್ರಕಾರ, ಬುಧವಾರ ರಾತ್ರಿ ಬೆಟ್ಟದ ಮೇಲೆ ಆನೆಗಳಿಗೆ ಸಿಡಿಲು ಹೊಡೆದಿದೆ. ಭಾಗಶಃ ಸುಟ್ಟುಹೋದ ನಾಲ್ಕು ಆನೆಗಳು ಮತ್ತು ಮೂರು ಆನೆಗಳ ಮೃತದೇಹಗಳು ಬೆಟ್ಟದ ತಪ್ಪಲಿನಲ್ಲಿ ಪತ್ತೆಯಾಗಿವೆ.

ಕಂಡಲಿ ಉದ್ದೇಶಿತ ಮೀಸಲು ಅರಣ್ಯದಲ್ಲಿ ಈ ಘಟನೆ ನಡೆದಿದ್ದು, ಸ್ಥಳೀಯ ಗ್ರಾಮಸ್ಥರು ಮಾಹಿತಿ ನೀಡಿದ ನಂತರ ಆನೆಗಳ ಸಾವಿನ ಸುದ್ದಿ ಗುರುವಾರ ಮಧ್ಯಾಹ್ನ ತಿಳಿದುಬಂದಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

"ಸಿಡಿಲು ಆನೆಗಳ ಪ್ರಾಣವನ್ನೇ ಬಲಿ ತೆಗೆದುಕೊಂಡಿದೆ. ಸಿಡಿಲು ಬಡಿದು ಪ್ರಾಣಿಗಳು ಸಾವನ್ನಪ್ಪಿದ ಘಟನೆಗಳು ನಡೆದಿವೆ. ಆದರೆ ಆನೆಗಳು ದೊಡ್ಡ ಸಂಖ್ಯೆಯಲ್ಲಿ ಮೃತಪಟ್ಟಿವೆ" ಎಂದು ಅಸ್ಸಾಂನ ಮುಖ್ಯ ವನ್ಯಜೀವಿ ವಾರ್ಡನ್ ಎಂ.ಕೆ. ಯಾದವ ಅವರು ಹೇಳಿದ್ದಾರೆ.

ಪಶುವೈದ್ಯಕೀಯ ವೈದ್ಯರು ಮತ್ತು ವನ್ಯಜೀವಿ ತಜ್ಞರ ತಂಡ ಕಂಡಲಿಗೆ ಅರಣ್ಯಕ್ಕೆ ತೆರಳಿದ್ದು, ಶುಕ್ರವಾರ ಬೆಳಗ್ಗೆ ಅವರು ಸ್ಥಳಕ್ಕೆ ತಲುಪುವ ನಿರೀಕ್ಷೆಯಿದೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com