ಮೇ 30ಕ್ಕೆ ಮುಂಗಾರು ಕೇರಳ ಪ್ರವೇಶ; ರಾಜ್ಯದಲ್ಲಿ ಮುಂದಿನ ಎರಡ್ಮೂರು ದಿನ ಮಳೆ ಸಾಧ್ಯತೆ

ಪ್ರಸಕ್ತ ವರ್ಷ ನೈರುತ್ಯ ಮುಂಗಾರು ಮೇ 30ರಂದು ಕೇರಳಕ್ಕೆ ಪ್ರವೇಶಿಸಲಿದೆ ಎಂದು ಖಾಸಗಿ ಹವಾಮಾನ ಮುನ್ಸೂಚನೆ ಸಂಸ್ಥೆ, ಸ್ಕೈಮೆಟ್‍ ಗುರುವಾರ ವರದಿ ಮಾಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಪ್ರಸಕ್ತ ವರ್ಷ ನೈರುತ್ಯ ಮುಂಗಾರು ಮೇ 30ರಂದು ಕೇರಳಕ್ಕೆ ಪ್ರವೇಶಿಸಲಿದೆ ಎಂದು ಖಾಸಗಿ ಹವಾಮಾನ ಮುನ್ಸೂಚನೆ ಸಂಸ್ಥೆ, ಸ್ಕೈಮೆಟ್‍ ಗುರುವಾರ ವರದಿ ಮಾಡಿದೆ.

‘ಈ ವರ್ಷ ನೈರುತ್ಯ ಮುಂಗಾರು ಕೇರಳದ ಮೇಲೆ ಮೇ 30ರಂದು ಎರಡು ದಿನ ಬೀಸಲಿದೆ. ಮುಂಗಾರು ಅವಧಿಯಲ್ಲಿ ಸರಾಸರಿ ಶೇ. 103ರಷ್ಟು ಮಳೆಯಾಗಲಿದೆ.’ ಎಂದು ಸ್ಕೈಮೆಟ್‍ ಪ್ರಕಟಣೆಯಲ್ಲಿ ತಿಳಿಸಿದೆ.

ಜೂನ್‍ ನಿಂದ ಸೆಪ್ಟೆಂಬರ್ ವರೆಗೆ ನಾಲ್ಕು ತಿಂಗಳ ವರೆಗೆ ಸರಾಸರಿ ಮಳೆಯಾಗುವುದನ್ನು ಆಧರಿಸಿ ಮುನ್ಸೂಚನೆ ನೀಡಲಾಗುತ್ತದೆ.
ಸಾಮಾನ್ಯವಾಗಿ ನೈರುತ್ಯ ಮುಂಗಾರು ಭಾರತಕ್ಕೆ ಜೂನ್‍ ಒಂದರಂದು ಅಪ್ಪಳಿಸುತ್ತೆ. ಅರಬ್ಬಿ ಸಮುದ್ರ ಮತ್ತು ಬಂಗಾಳಕೊಲ್ಲಿಯಲ್ಲಿನ ಏರುಪೇರುಗಳಿಂದಾಗಿ ಕೇರಳದಲ್ಲಿ ಮುಂಗಾರು ಆಗಮನದ ಮೇಲೆ ಪ್ರಭಾವ ಬೀರುತ್ತದೆ.

ರಾಜ್ಯಗಳಲ್ಲಿ ಎರಡು, ಮೂರು ದಿನ ಮಳೆ ಎಚ್ಚರ
ಬೆಂಗಳೂರು: ಕೊರೋನಾ ಸೋಂಕಿನ ಎರಡನೆ ಅಲೆಯ ಜೊತೆಗೆ, ಕರ್ನಾಟಕ, ಕೇರಳ, ಲಕ್ಷದ್ವೀಪ, ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ಮುಂದಿನ ಎರಡು, ಮೂರು ದಿನಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಈ ಕುರಿತಂತೆ ಟ್ವಿಟ್ ನಲ್ಲಿ ಮಾಹಿತಿ ಹಂಚಿಕೊಂಡಿರುವಂತ ಭಾರತೀಯ ಹವಾಮಾನ ಇಲಾಖೆ, ಅರಬ್ಬೀ ಸಮುದ್ರದಲ್ಲಿ ಎದ್ದಿರುವಂತ ತೌಕ್ತೆ ಚಂಡಮಾರುತದ ಪರಿಣಾಮದಿಂದಾಗಿ, ಮುಂದಿನ ಎರಡು ಮೂರು ದಿನಗಳು ಕೇರಳ, ಲಕ್ಷದ್ವೀಪ ಪ್ರದೇಶದಲ್ಲಿ ಭಾರೀ ಮಳೆಯಾಗಲಿದೆ ಎಂದು ಹೇಳಿದೆ.

ಈ ಮಳೆಗೆ ಅರಬ್ಬೀ ಸಮುದ್ರದಲ್ಲಿ ಏದ್ದಿರುವ ತೌಕ್ತೆ ಚಂಡಮಾರುತದ ಪರಿಣಾವಾಗಿ, ಮಳೆ ಸುರಿಯಲಿದೆ. ಹೀಗಾಗಿಯೇ ಮಂಗಳೂರಿನಲ್ಲಿ ಕರಾವಳಿ ಕಾವಲುಪಡೆ ಇಂದಿನಿಂದ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ಕೊಟ್ಟಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com