ವಿರೋಧ ಪಕ್ಷಗಳು, ಕಾರ್ಯಕರ್ತರಿಂದ ಸೆಂಟ್ರಲ್ ವಿಸ್ಟಾ ಯೋಜನೆಗೆ ವಿರೋಧ: ವಿಡಿಯೊ ರೆಕಾರ್ಡಿಂಗ್, ಫೋಟೋಗ್ರಫಿಗೆ ನಿಷೇಧ

ಸೆಂಟ್ರಲ್ ವಿಸ್ಟಾ ಮರು ಅಭಿವೃದ್ಧಿ ಯೋಜನೆಗೆ ಕೇಳಿಬರುತ್ತಿರುವ ತೀವ್ರ ಟೀಕೆಗಳ ನಡುವೆ ಕೇಂದ್ರ ಲೋಕೋಪಯೋಗಿ ಇಲಾಖೆ ದೆಹಲಿಯ ಇಂಡಿಯಾ ಗೇಟ್ ಬಳಿ ನಿರ್ಮಾಣ ಸ್ಥಳದಲ್ಲಿ ಫೋಟೋ ಮತ್ತು ವಿಡಿಯೊಗ್ರಾಫಿಯನ್ನು ನಿಷೇಧಿಸಿದೆ.
ದೆಹಲಿಯ ರಾಜ್ ಪಥ್ ಬಳಿ ಸೆಂಟ್ರಲ್ ವಿಸ್ಟಾ ಯೋಜನೆಯ ಕಾಮಗಾರಿ
ದೆಹಲಿಯ ರಾಜ್ ಪಥ್ ಬಳಿ ಸೆಂಟ್ರಲ್ ವಿಸ್ಟಾ ಯೋಜನೆಯ ಕಾಮಗಾರಿ

ನವದೆಹಲಿ: ಸೆಂಟ್ರಲ್ ವಿಸ್ಟಾ ಮರು ಅಭಿವೃದ್ಧಿ ಯೋಜನೆಗೆ ಕೇಳಿಬರುತ್ತಿರುವ ತೀವ್ರ ಟೀಕೆಗಳ ನಡುವೆ ಕೇಂದ್ರ ಲೋಕೋಪಯೋಗಿ ಇಲಾಖೆ ದೆಹಲಿಯ ಇಂಡಿಯಾ ಗೇಟ್ ಬಳಿ ನಿರ್ಮಾಣ ಸ್ಥಳದಲ್ಲಿ ಫೋಟೋ ಮತ್ತು ವಿಡಿಯೊ ರೆಕಾರ್ಡಿಂಗ್ ನ್ನು ನಿಷೇಧಿಸಿದೆ.

ಸೆಂಟ್ರಲ್ ವಿಸ್ಟಾ ಅವೆನ್ಯು ಮರು ಅಭಿವೃದ್ಧಿ ಸ್ಥಳದಲ್ಲಿ ಈ ಸಂಬಂಧ ಸೂಚನಾ ಫಲಕಗಳನ್ನು ಹಾಕಲಾಗಿದ್ದು ಅದರಲ್ಲಿ ವಿಡಿಯೊ ರೆಕಾರ್ಡಿಂಗ್, ಫೋಟೋಗ್ರಫಿ ನಿಷೇಧಿಸಲಾಗಿದೆ ಎಂದು ಬರೆಯಲಾಗಿದೆ.

ಯೋಜನೆಯನ್ನು ಕಾರ್ಯರೂಪಕ್ಕೆ ತರುತ್ತಿರುವ ಇಲಾಖೆ ಈ ಬಗ್ಗೆ ಕೇಳಿದಾಗ ಪ್ರತಿಕ್ರಿಯಿಸಲಿಲ್ಲ. ದೇಶದಲ್ಲಿ ಕೊರೋನಾ ಸೋಂಕು ಇಷ್ಟೊಂದು ವ್ಯಾಪಕವಾಗಿ ಹರಡುತ್ತಿರುವಾಗ, ಇಷ್ಟೊಂದು ಸಾವು, ನೋವು ಆಗುತ್ತಿರುವಾಗ ಸೆಂಟ್ರಲ್ ವಿಸ್ಟಾ ಕಾಮಗಾರಿ ಬೇಕೆ ಎಂದು ವಿರೋಧ ಪಕ್ಷಗಳಿಂದ ಕೇಂದ್ರ ಸರ್ಕಾರ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.

ದೇಶದ ಶಕ್ತಿ ಕೇಂದ್ರದ ಕಟ್ಟಡವಾದ ಸೆಂಟ್ರಲ್ ವಿಸ್ಟಾದಲ್ಲಿ ಹೊಸ ಸಂಸಸ್ತು ಕಟ್ಟಡ, ಕೇಂದ್ರ ಸಚಿವಾಲಯ, 3 ಕಿಲೋ ಮೀಟರ್ ವರೆಗೆ ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್ ವರೆಗೆ ಮರು ನವೀಕರಣ, ಹೊಸ ಪ್ರಧಾನಿ ನಿವಾಸ ಮತ್ತು ಕಚೇರಿ, ಹೊಸ ಉಪ ರಾಷ್ಟ್ರಪತಿ ಎನ್ ಕ್ಲೇವ್ ನ್ನು ಒಳಗೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com