ಚುನಾವಣೆ ನಂತರ ತೈಲ ಬೆಲೆ ಏರಿಕೆ: ಕೇಂದ್ರ ಸರ್ಕಾರ ವಿರುದ್ಧ 'ಸಾಮ್ನಾ'ದಲ್ಲಿ ಶಿವಸೇನೆ ಟೀಕೆ!
ಕೆಲ ರಾಜ್ಯಗಳಲ್ಲಿ ಇತ್ತೀಚಿಗೆ ನಡೆದ ವಿಧಾನಸಭಾ ಚುನಾವಣೆ ನಂತರ ತೈಲ ಬೆಲೆಯನ್ನು ಮತ್ತೆ ಏರಿಸಿರುವ ಕೇಂದ್ರ ಸರ್ಕಾರವನ್ನು ಶಿವಸೇನೆ ಗುರುವಾರ ಟೀಕಿಸಿದೆ.
Published: 13th May 2021 03:43 PM | Last Updated: 13th May 2021 06:16 PM | A+A A-

ಸಾಂದರ್ಭಿಕ ಚಿತ್ರ
ಮುಂಬೈ: ಕೆಲ ರಾಜ್ಯಗಳಲ್ಲಿ ಇತ್ತೀಚಿಗೆ ನಡೆದ ವಿಧಾನಸಭಾ ಚುನಾವಣೆ ನಂತರ ತೈಲ ಬೆಲೆಯನ್ನು ಮತ್ತೆ ಏರಿಸಿರುವ ಕೇಂದ್ರ ಸರ್ಕಾರವನ್ನು ಶಿವಸೇನೆ ಗುರುವಾರ ಟೀಕಿಸಿದೆ.
ಯಾವಾಗಲೂ ಏರುಗತ್ತಿಯಲ್ಲಿ ಸಾಗುತ್ತಿದ್ದ ತೈಲ ಬೆಲೆಯನ್ನು ಅಸ್ಸಾಂ, ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು ಮತ್ತು
ಪುದುಚೇರಿ ಕೇಂದ್ರಾಡಳಿತ ಪ್ರದೇಶದ ವಿಧಾನಸಭಾ ಚುನಾವಣೆ ವೇಳೆಯಲ್ಲಿ ದಿಢೀರನೆ ಇಳಿಸಲಾಗಿತ್ತು. ಆದರೆ, ಚುನಾವಣೆ
ನಂತರ ಈ ಚಿತ್ರಣ ಸಂಪೂರ್ಣವಾಗಿ ಬದಲಾಗಿದೆ. ಪ್ರಸ್ತುತದಲ್ಲಿ ಆಡಳಿತ ನಡೆಸುತ್ತಿರುವವರು ಚುನಾವಣೆಗಾಗಿ ಯಾವ
ಮಟ್ಟಕ್ಕಾದರೂ ಹೋಗಬಲ್ಲರು ಎಂದು ಶಿವಸೇನಾ ಮುಖವಾಣಿ ಸಾಮ್ನಾದಲ್ಲಿ ಆರೋಪಿಸಲಾಗಿದೆ.
ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳು ಸತತವಾಗಿ ಐದು ಬಾರಿ ಬೆಲೆಗಳನ್ನು ಹೆಚ್ಚಿಸಿದ ನಂತರ ಪೆಟ್ರೋಲ್ ಮತ್ತು ಡೀಸೆಲ್ ದರಗಳು ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿವೆ. ಮೇ 2 ರಂದು ಚುನಾವಣಾ ಫಲಿತಾಂಶ ಪ್ರಕಟವಾಯಿತು, ನಂತರ ಮೇ.4ರಿಂದಲೇ ತೈಲ ಬೆಲೆಯಲ್ಲಿ ಏರಿಕೆ ಮಾಡಲಾಗುತ್ತಿದೆ ಎಂದು ಶಿವಸೇನೆ ಹೇಳಿದೆ.
ಸದ್ಯದಲ್ಲಿ ಯಾವುದೇ ಚುನಾವಣೆ ಇಲ್ಲ. ಚುನಾವಣೆ ವೇಳೆಯಲ್ಲಿ ಇಂಧನ ಬೆಲೆ ಇಳಿಕೆಯಿಂದ ಬರಿದಾಗಿರುವ ತನ್ನ ಬೊಕ್ಕಸವನ್ನು ಸರ್ಕಾರ ಭರ್ತಿ ಮಾಡಿಕೊಳ್ಳುವ ಸಾಧ್ಯತೆಯಿದೆ. ಆದರೆ, ಸಾಮಾನ್ಯ ಜನರ ಜೇಬಿನ ಬಗ್ಗೆ ಏನು? ಅವರ ಜೇಬು ಖಾಲಿಯಾಗಿದೆ.
ನಿರುದ್ಯೋಗ ಮತ್ತು ಸಂಬಳ ಕಡಿತದಿಂದ ಜನಸಾಮಾನ್ಯರು ಈಗಾಗಲೇ ಹೊಡೆತ ತಿಂದಿರುವುದಾಗಿ ಸೇನೆ ತಿಳಿಸಿದೆ.
ಬಿಹಾರ ವಿಧಾನಸಭಾ ಚುನಾವಣೆ ವೇಳೆಯಲ್ಲಿ ತೈಲ ದರ ಸ್ಥಿರವಾಗಿತ್ತು. ಚುನಾವಣಾ ಫಲಿತಾಂಶದ ನಂತರ 18 ದಿನಗಳಲ್ಲಿ 15
ಬಾರಿ ಬೆಲೆಯನ್ನು ಹೆಚ್ಚಳ ಮಾಡಲಾಗಿತ್ತು. ದೆಹಲಿ ಚುನಾವಣೆ ವೇಳೆಯಲ್ಲಿ ಬೆಲೆ ಸ್ಥಿರವಾಗಿದದ್ದು ಆಶ್ಚರ್ಯವನ್ನುಂಟುಮಾಡಿದೆ.
ಮೂವರು ವರ್ಷಗಳ ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ, ಅಂತಾರಾಷ್ಟ್ರೀಯ ತೈಲ ಬೆಲೆಯಲ್ಲಿ ಏರಿಕೆ ಹೊರತಾಗಿಯೂ
ದೇಶದಲ್ಲಿ ತೈಲ ಬೆಲೆ ಸ್ಥಿರವಾಗಿತ್ತು ಎಂದು ಶಿವಸೇನೆ ಹೇಳಿದೆ.