'ಕೊರೋನಾ ವೈರಸ್ ಒಂದು ಜೀವಂತ ಜೀವಿ, ಅದಕ್ಕೆ ಬದುಕುವ ಹಕ್ಕಿದೆ': ಉತ್ತರಾಖಂಡ್ ಮಾಜಿ ಸಿಎಂ ಅಸಹಜ ಹೇಳಿಕೆ

ಕೊರೋನಾ ವೈರಸ್ ಒಂದು ಜೀವಂತ ಜೀವಿಯಾಗಿದ್ದು ಅದಕ್ಕೆ ಬದುಕುವ ಹಕ್ಕು ಇದೆ ಎಂಬ ಅಸಹಜ ಹೇಳಿಕೆಯನ್ನು ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ನೀಡಿದ್ದಾರೆ.

Published: 14th May 2021 10:29 AM  |   Last Updated: 14th May 2021 12:44 PM   |  A+A-


Former Uttarakhand CM Trivendra Singh Rawat

ಉತ್ತರಾಖಂಡ ಮಾಜಿ ಸಿಎಂ ತ್ರಿವೇಂದ್ರ ಸಿಂಗ್ ರಾವತ್

Posted By : Sumana Upadhyaya
Source : PTI

ಡೆಹ್ರಾಡೂನ್: ಕೊರೋನಾ ವೈರಸ್ ಒಂದು ಜೀವಂತ ಜೀವಿಯಾಗಿದ್ದು ಅದಕ್ಕೆ ಬದುಕುವ ಹಕ್ಕು ಇದೆ ಎಂಬ ಅಸಹಜ ಹೇಳಿಕೆಯನ್ನು ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ನೀಡಿದ್ದಾರೆ.

ತಾತ್ವಿಕ ದೃಷ್ಟಿ ಕೋನದಿಂದ ನೋಡಿದಾಗ ಕೊರೋನಾವೈರಸ್ ಸಹ ಜೀವಂತ ಜೀವಿ. ನಮ್ಮಂತೆ ಅದಕ್ಕೂ ಬದುಕುವ ಹಕ್ಕಿದೆ. ಆದರೆ ನಾವು (ಮಾನವರು) ನಮ್ಮನ್ನು ಅತ್ಯಂತ ಬುದ್ಧಿವಂತರು ಎಂದು ಭಾವಿಸಿ ಅದನ್ನು ತೊಡೆದುಹಾಕಲು ಹೊರಟಿದ್ದೇವೆ. ಹೀಗಾಗಿ ಅದು ನಿರಂತರವಾಗಿ ತನ್ನನ್ನು ತಾನೇ ಪರಿವರ್ತಿಸಿಕೊಳ್ಳುತ್ತಿದೆ ಎಂದು ಖಾಸಗಿ ಸುದ್ದಿ ವಾಹಿನಿಯೊಂದಿಗೆ ಮಾತನಾಡುವಾಗ ಹೇಳಿದ್ದಾರೆ.
ಆದರೆ ಮನುಷ್ಯ ಸುರಕ್ಷಿತವಾಗಿರಲು ವೈರಸ್ ನ್ನು ಮೀರಿ ಬದುಕಬೇಕಾಗಿದೆ ಎಂದು ಸಹ ಅವರು ಹೇಳಿದ್ದಾರೆ.

ಇಂದು ಇಡೀ ದೇಶ ಕೊರೋನಾ ಎರಡನೇ ಅಲೆಗೆ ತತ್ತರಿಸಿ ಹೋಗುತ್ತಿರುವಾಗ ಉತ್ತರಾಖಂಡ್ ಮಾಜಿ ಸಿಎಂ ನೀಡಿರುವ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

ಈ ಜೀವಂತ ವೈರಸ್ ಗೆ ದೆಹಲಿಯ ಸೆಂಟ್ರಲ್ ವಿಸ್ಟಾದಲ್ಲಿ ಆಶ್ರಯ ನೀಡಬೇಕು ಎಂದು ಒಬ್ಬರು ಟ್ವೀಟ್ ಮಾಡಿದ್ದಾರೆ.


Stay up to date on all the latest ರಾಷ್ಟ್ರೀಯ news
Poll
Rahul gandhi

ಕಾಂಗ್ರೆಸ್‌ನಲ್ಲಿನ ಯುವ, ಕ್ರಿಯಾಶೀಲ ನಾಯಕರಿಂದ ರಾಹುಲ್ ಗಾಂಧಿಗೆ ಅಭದ್ರತೆ ಕಾಡುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp