ಹೈದರಾಬಾದ್ ನಲ್ಲಿ ಸ್ಪುಟ್ನಿಕ್ ವಿ ಲಸಿಕೆಯ ಮೊದಲ ಡೋಸ್ ಹಾಕಲಾಗಿದೆ: ಡಾ. ರೆಡ್ಡೀಸ್ ಲ್ಯಾಬೊರೇಟರಿ

ಕೋವಿಡ್ ಲಸಿಕೆ ಕೊರತೆಯ ಈ ಸಂದರ್ಭದಲ್ಲಿ ದೇಶದ ಜನತೆಗೆ ಕೊಂಚ ಸಮಾಧಾನದ ಸುದ್ದಿ ಸಿಕ್ಕಿದೆ. ರಷ್ಯಾದಿಂದ ತರಿಸಿರುವ ಸ್ಪುಟ್ನಿಕ್ ವಿನ ಡೋಸ್ ನೀಡುವಿಕೆ ಆರಂಭವಾಗಿದ್ದು ಶುಕ್ರವಾರ ಮೊದಲ ಡೋಸ್ ನ್ನು ಹೈದರಾಬಾದ್ ನಲ್ಲಿ ನೀಡಲಾಗಿದೆ.
ಸ್ಪುಟ್ನಿಕ್ ವಿ ಲಸಿಕೆ
ಸ್ಪುಟ್ನಿಕ್ ವಿ ಲಸಿಕೆ

ನವದೆಹಲಿ: ಕೋವಿಡ್ ಲಸಿಕೆ ಕೊರತೆಯ ಈ ಸಂದರ್ಭದಲ್ಲಿ ದೇಶದ ಜನತೆಗೆ ಕೊಂಚ ಸಮಾಧಾನದ ಸುದ್ದಿ ಸಿಕ್ಕಿದೆ. ರಷ್ಯಾದಿಂದ ತರಿಸಿರುವ ಸ್ಪುಟ್ನಿಕ್ ವಿನ ಡೋಸ್ ನೀಡುವಿಕೆ ಆರಂಭವಾಗಿದ್ದು ಶುಕ್ರವಾರ ಮೊದಲ ಡೋಸ್ ನ್ನು ಹೈದರಾಬಾದ್ ನಲ್ಲಿ ನೀಡಲಾಗಿದೆ.

ಔಷಧ ಸಂಸ್ಥೆ ಡಾ ರೆಡ್ಡೀಸ್ ಲ್ಯಾಬೊರೇಟರೀಸ್ ಸ್ಪುಟ್ನಿಕ್ ವಿ ಲಸಿಕೆಯನ್ನು ಪ್ರಾಯೋಗಿಕ ಮಾದರಿಯಲ್ಲಿ ಆರಂಭಿಸಿದೆ. ಸ್ಪುಟ್ನಿಕ್ ವಿ ಲಸಿಕೆ ಭಾರತಕ್ಕೆ ಮೇ 1ರಂದು ಬಂದಿಳಿದಿತ್ತು. ಕೇಂದ್ರ ಡ್ರಗ್ ಲ್ಯಾಬೊರೇಟರಿ ಕಸೌಲಿ ಇದಕ್ಕೆ ನಿನ್ನೆ ಬಳಕೆಗೆ ಅನುಮತಿ ನೀಡಿತ್ತು.

ಸ್ಪುಟ್ನಿಕ್ ವಿ ಲಸಿಕೆಯ ಮತ್ತಷ್ಟು ಸಂಗ್ರಹ ಮುಂದಿನ ತಿಂಗಳುಗಳಲ್ಲಿ ಬರುವ ನಿರೀಕ್ಷೆಯಿದೆ. ಅದರ ಜೊತೆಗೆ ಲಸಿಕೆಯ ಪೂರೈಕೆಯನ್ನು ಭಾರತದ ತಯಾರಿಕಾ ಸಹಭಾಗಿ ಕಂಪೆನಿಗಳು ಆರಂಭಿಸಲಿವೆ ಎಂದು ಡಾ ರೆಡ್ಡೀಸ್ ಲ್ಯಾಬೊರೇಟರಿ ಪ್ರಕಟಣೆಯಲ್ಲಿ ಹೇಳಿದೆ.

ಸ್ಪುಟ್ನಿಕ್ ವಿ ಆಮದು ಲಸಿಕೆಯ ಪ್ರತಿ ಡೋಸ್ ಗೆ ಶೇಕಡಾ 5ರಷ್ಟು ಜಿಎಸ್ ಟಿ ಸೇರಿದಂತೆ 948 ರೂಪಾಯಿ ನಿಗದಿಪಡಿಸಲಾಗಿದೆ. ಸ್ಥಳೀಯ ಪೂರೈಕೆ ಆರಂಭವಾದರೆ ಲಸಿಕೆ ದರ ಕಡಿಮೆಯಾಗುವ ನಿರೀಕ್ಷೆಯಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com