ರೈಲ್ವೆಯಿಂದ ವಿವಿಧ ರಾಜ್ಯಗಳಿಗೆ ಈವರೆಗೆ 7,900 ಮೆಟ್ರಿಕ್ ಟನ್ ಆಮ್ಲಜನಕ ಸರಬರಾಜು

ಕಳೆದ 20 ದಿನಗಳಲ್ಲಿ 500 ಟ್ಯಾಂಕರ್‌ಗಳಲ್ಲಿ ಸುಮಾರು 7,900 ಮೆಟ್ರಿಕ್ ಟನ್ ದ್ರವೀಕೃತ ಆಮ್ಲಜನಕವನ್ನು 12 ರಾಜ್ಯಗಳಿಗೆ ತಲುಪಿಸಲಾಗಿದೆ ಎಂದು ಭಾರತೀಯ ರೈಲ್ವೆ ಶುಕ್ರವಾರ ತಿಳಿಸಿದೆ.

Published: 14th May 2021 11:36 PM  |   Last Updated: 14th May 2021 11:36 PM   |  A+A-


Railways delivered nearly 7900 tonnes of oxygen via Oxygen Express trains

ರೈಲ್ವೆಯಿಂದ ವಿವಿಧ ರಾಜ್ಯಗಳಿಗೆ ಈವರೆಗೆ 7,900 ಮೆಟ್ರಿಕ್ ಟನ್ ಆಮ್ಲಜನಕ ಸರಬರಾಜು

Posted By : Srinivas Rao BV
Source : UNI

ನವದೆಹಲಿ: ಕಳೆದ 20 ದಿನಗಳಲ್ಲಿ 500 ಟ್ಯಾಂಕರ್‌ಗಳಲ್ಲಿ ಸುಮಾರು 7,900 ಮೆಟ್ರಿಕ್ ಟನ್ ದ್ರವೀಕೃತ ಆಮ್ಲಜನಕವನ್ನು 12 ರಾಜ್ಯಗಳಿಗೆ ತಲುಪಿಸಲಾಗಿದೆ ಎಂದು ಭಾರತೀಯ ರೈಲ್ವೆ ಶುಕ್ರವಾರ ತಿಳಿಸಿದೆ.

ಏಪ್ರಿಲ್ 24 ರಂದು ಮಹಾರಾಷ್ಟ್ರಕ್ಕೆ 126 ಮೆಟ್ರಿಕ್‍ ಟನ್ ಧ್ರವೀಕೃತ ಆಮ್ಲಜನಕ ಹೊತ್ತ ಮೊದಲ ಆಕ್ಸಿಜನ್ ಎಕ್ಸ್‌ಪ್ರೆಸ್‌ ರೈಲು ಸೇವೆ ಆರಂಭಿಸಿತು. ಆ ನಂತರ 20 ದಿನಗಳಲ್ಲಿ ಪಶ್ಚಿಮದ ಹಪಾ ಮತ್ತು ಮುಂಡ್ರಾ, ರೂರ್ಕೆಲಾ, ದುರ್ಗಾಪುರ, ಟಾಟಾನಗರ, ಪೂರ್ವದ ಅಂಗುಲ್ ಮುಂತಾದ ಸ್ಥಳಗಳಿಂದ ಆಮ್ಲಜನಕವನ್ನು ಉತ್ತರಾಖಂಡ, ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ, ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಿಗೆ ತಲುಪಿಸುತ್ತಿದೆ. ಸಕಾಲದಲ್ಲಿ ಆಮ್ಲಜನಕವನ್ನು ಸರಬರಾಜು ಮಾಡಲು ರೈಲ್ವೆ ವಿನೂತನ ಕಾರ್ಯವಿಧಾನವನ್ನು ಅಳವಡಿಸಿಕೊಂಡಿದೆ. 

ಸವಾಲಿನ ಸನ್ನಿವೇಶಗಳಲ್ಲಿ ಸಾವಿರಾರು ಕಿಲೋ ಮೀಟರ್ ದೂರಕ್ಕೆ ಆಮ್ಲಜನಕ ತಲುಪಿಸುವುದು ಸಂಕೀರ್ಣ ಕಾರ್ಯಾಚರಣೆಯಾಗಿದ್ದು, ಈ ರೈಲುಗಳು ಯಾವುದೇ ಅಡೆತಡೆಯಿಲ್ಲದೆ, ಗಂಟೆಗೆ 55 ಕಿ.ಮೀಗೂ ಹೆಚ್ಚು ವೇಗದಲ್ಲಿ ಸುರಕ್ಷಿತವಾಗಿ ಸಾಗುತ್ತಿವೆ ಎಂದು ರೈಲ್ವೆ ತಿಳಿಸಿದೆ. 


Stay up to date on all the latest ರಾಷ್ಟ್ರೀಯ news
Poll
Rahul gandhi

ಕಾಂಗ್ರೆಸ್‌ನಲ್ಲಿನ ಯುವ, ಕ್ರಿಯಾಶೀಲ ನಾಯಕರಿಂದ ರಾಹುಲ್ ಗಾಂಧಿಗೆ ಅಭದ್ರತೆ ಕಾಡುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp