ಟೋಲ್ ಪ್ಲಾಜಾದಲ್ಲಿ ಆ್ಯಂಬುಲೆನ್ಸ್ ಗೆ ಪೊಲೀಸರಿಂದ ತಡೆ: ಆಂಧ್ರ- ತೆಲಂಗಾಣ ಗಡಿಯಲ್ಲಿ ಇಬ್ಬರು ಕೋವಿಡ್ ರೋಗಿಗಳ ಸಾವು

ಕರ್ನೂಲು ಜಿಲ್ಲೆಯ ಆಂಧ್ರಪ್ರದೇಶ- ತೆಲಂಗಾಣ ಗಡಿಯ ಟೋಲ್ ಪ್ಲಾಜಾದಲ್ಲಿ  ಆ್ಯಂಬುಲೆನ್ಸ್ ತಡೆಹಿಡಿದ ಕಾರಣ ಇಬ್ಬರು ಕೋವಿಡ್ ರೋಗಿಗಳು ಸಾವನ್ನಪ್ಪಿದ್ದಾರೆ ಎಂದು ಆರೋಪಿಸಲಾಗಿದೆ.
ಆ್ಯಂಬುಲೆನ್ಸ್ ಬಿಡುವಂತೆ ಶಾಸಕರ ಮನವಿ
ಆ್ಯಂಬುಲೆನ್ಸ್ ಬಿಡುವಂತೆ ಶಾಸಕರ ಮನವಿ

ವಿಜಯವಾಡ: ಕರ್ನೂಲು ಜಿಲ್ಲೆಯ ಆಂಧ್ರಪ್ರದೇಶ- ತೆಲಂಗಾಣ ಗಡಿಯ ಟೋಲ್ ಪ್ಲಾಜಾದಲ್ಲಿ  ಆ್ಯಂಬುಲೆನ್ಸ್ ತಡೆಹಿಡಿದ ಕಾರಣ ಇಬ್ಬರು ಕೋವಿಡ್ ರೋಗಿಗಳು ಸಾವನ್ನಪ್ಪಿದ್ದಾರೆ ಎಂದು ಆರೋಪಿಸಲಾಗಿದೆ.

ಗಂಭೀರ ಸ್ಥಿತಿಯಲ್ಲಿದ್ದ ಇಬ್ಬರು ರೋಗಿಗಳನ್ನು ಹೈದರಾಬಾದ್ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಈ ವೇಳೆ ತೆಲಂಗಾಣ ಪೊಲೀಸರು ಆ್ಯಂಬುಲೆನ್ಸ್ ತಡೆದಿದ್ದಾರೆ.

ರೋಗಿಗಳಲ್ಲಿ ಒಬ್ಬರು ಕರ್ನೂಲ್ ಜಿಲ್ಲೆಯ ನಂದ್ಯಾಲ್ ಮೂಲದವರಾಗಿದ್ದರೆ, ಇನ್ನೊಬ್ಬರು ಕಡಪ ಮೂಲದವರು ಎಂದು ವರದಿಯಾಗಿದೆ. ಚಿಕಿತ್ಸೆ ಪಡೆಯುವಲ್ಲಿ ವಿಳಂಬವಾದ ಕಾರಣ ಅವರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.

ಹೈದರಾಬಾದ್‌ಗೆ ಹೋಗುವ ದಾರಿಯಲ್ಲಿ ಸುಮಾರು 20 ಆಂಬುಲೆನ್ಸ್‌ಗಳನ್ನು ಟೋಲ್ ಪ್ಲಾಜಾದಲ್ಲಿ ಗಂಟೆಗಳ ಕಾಲ ನಿಲ್ಲಿಸಲಾಯಿತು. ಇದರಿಂದ ನೊಂದ ಕುಟುಂಬ ಸದಸ್ಯರ ಮನವಿಗಳ ಹೊರತಾಗಿಯೂ,ತೆಲಂಗಾಣ ಪೊಲೀಸರು ಆಂಬುಲೆನ್ಸ್‌ಗಳನ್ನು ರಾಜ್ಯಕ್ಕೆ ಪ್ರವೇಶಿಸಲು ಅನುಮತಿ ನೀಡಲಿಲ್ಲ.

ತುರ್ತು ಚಿಕಿತ್ಸೆಗಾಗಿ ನನ್ನ ಗಂಡನನ್ನು ಹೈದರಾಬಾದ್‌ಗೆ ಕರೆದೊಯ್ಯುತ್ತಿದ್ದೇವೆ. ಅವರು ವೆಂಟಿಲೇಟರ್ ನಲ್ಲಿದ್ದಾರೆ ಮತ್ತು ತುರ್ತು ವೈದ್ಯಕೀಯ ಆರೈಕೆಯ ಅಗತ್ಯವಿದೆ. ದಯವಿಟ್ಟು ಅವರನ್ನು ಉಳಿಸಿ. ನಮಗೆ ಅವಕಾಶ ನೀಡುವಂತೆ ನಾನು ಅವರನ್ನು ವಿನಂತಿಸುತ್ತಿದ್ದೇನೆ, ಆದರೆ ತೆಲಂಗಾಣ ಪೊಲೀಸರು ಅನುಮತಿಸುತ್ತಿಲ್ಲ ”ಎಂದು ಮಹಿಳೆಯೊಬ್ಬರು ಮಾಧ್ಯಮಕ್ಕೆ ಮನವಿ ಮಾಡಿದರು. ರೋಗಿಯನ್ನು ಹೊತ್ತ ಆಂಬುಲೆನ್ಸ್ ಬೆಳಿಗ್ಗೆ 5 ಗಂಟೆಯಿಂದ ಟೋಲ್ ಪ್ಲಾಜಾದಲ್ಲಿ ಕಾಯುತ್ತಿತ್ತು. ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಹಾಸಿಗೆಯನ್ನು ನಿಗದಿಪಡಿಸಲಾಗಿದೆ ಎಂದು ಆಕೆಯ ಕುಟುಂಬ ಸದಸ್ಯರು ಹೇಳಿದರು ಪೊಲೀಸರು ಕೇಳಿಸಿಕೊಳ್ಳಲಿಲ್ಲ.

ಗಡಿಯಲ್ಲಿ ಆಂಬುಲೆನ್ಸ್‌ಗಳನ್ನು ನಿಲ್ಲಿಸದಂತೆ ತೆಲಂಗಾಣ ರಾಜ್ಯ ಹೈಕೋರ್ಟ್‌ನ ನಿರ್ದೇಶನದ ಹೊರತಾಗಿಯೂ, ತೆಲಂಗಾಣ ಪೊಲೀಸರು ಶುಕ್ರವಾರ ಬೆಳಿಗ್ಗೆಯಿಂದ ಮತ್ತೆ ಅಂತರರಾಜ್ಯ ಗಡಿಗಳಲ್ಲಿ ನಿಲ್ಲಿಸಲು ಪ್ರಾರಂಭಿಸಿದ್ದಾರೆ ಮತ್ತು ಕುಟುಂಬಗಳು ಆಸ್ಪತ್ರೆಗಳಲ್ಲಿನ ಹಾಸಿಗೆ ದೃಢೀಕರಣ ಪತ್ರಗಳನ್ನು ತೋರಿಸಿದ ನಂತರವೂ  ಹೈದರಾಬಾದ್ ಆಸ್ಪತ್ರೆ ಪ್ರವೇಶಕ್ಕೆ ಅವಕಾಶ ನೀಡುತ್ತಿಲ್ಲ.

ಕೃಷ್ಣ ಜಿಲ್ಲೆಯ ಎಪಿ-ಟಿಎಸ್ ಅಂತರರಾಜ್ಯ ಗಡಿಯಲ್ಲಿರುವ ರಾಮಪುರಂ ಕ್ರಾಸ್‌ರೋಡ್‌ನಲ್ಲಿ ಇದೇ ರೀತಿಯ ಘಟನೆಗಳು ನಡೆದವು, ಅಲ್ಲಿ ಹಲವಾರು ಆಂಬುಲೆನ್ಸ್‌ಗಳಿಗೆ ತಡೆ ಒಡ್ಡಲಾಯಿತು.

ಕರ್ನೂಲ್ ಶಾಸಕ ಹಫೀಜ್ ಖಾನ್ ಪುಲ್ಲೂರ್ ಟೋಲ್ ಪ್ಲಾಜಾಗೆ ಧಾವಿಸಿ ತೆಲಂಗಾಣ ಪೊಲೀಸರಿಗೆ ಆಂಬುಲೆನ್ಸ್‌ಗಳಿಗೆ ಅವಕಾಶ ನೀಡುವಂತೆ ವಿನಂತಿಸಿದರೂ  ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ರೋಗಿಗಳ ಸ್ಥಿತಿ ಗಂಭೀರವಾಗಿದ್ದರಿಂದ ಹಲವಾರು ಆಂಬುಲೆನ್ಸ್‌ಗಳು ಹಿಂತಿರುಗಬೇಕಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com