ಮಹಾರಾಷ್ಟ್ರದ ಥಾಣೆಯಲ್ಲಿ ಕಟ್ಟಡ ಕುಸಿತ: ನಾಲ್ವರು ಸಾವು

ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಉಲ್ಹಾಸ್‌ನಗರ ಟೌನ್‌ಶಿಪ್‌ನಲ್ಲಿರುವ ವಸತಿ ಕಟ್ಟಡ ಕುಸಿದು ಕನಿಷ್ಠ ನಾಲ್ಕು ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯಲ್ಲಿ 11 ಜನರನ್ನು ರಕ್ಷಿಸಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಥಾಣೆ: ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಉಲ್ಹಾಸ್‌ನಗರ ಟೌನ್‌ಶಿಪ್‌ನಲ್ಲಿರುವ ವಸತಿ ಕಟ್ಟಡ ಕುಸಿದು ಕನಿಷ್ಠ ನಾಲ್ಕು ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯಲ್ಲಿ 11 ಜನರನ್ನು ರಕ್ಷಿಸಲಾಗಿದೆ.

ನಾಪತ್ತೆಯಾದ ಕಟ್ಟಡದ ನಿವಾಸಿಗಳಿಗಾಗಿ ಶೋಧ ನಡೆಯುತ್ತಿದೆ ಎಂದು ಥಾಣೆ ಮುನ್ಸಿಪಲ್ ಕಾರ್ಪೊರೇಶನ್‌ನ ಪ್ರಾದೇಶಿಕ ವಿಪತ್ತು ನಿರ್ವಹಣಾ ಕೋಶದ ಮುಖ್ಯಸ್ಥ ಸಂತೋಷ್ ಕದಮ್ ತಿಳಿಸಿದ್ದಾರೆ. ಶಿಬಿರ ಸಂಖ್ಯೆ 1 ರಲ್ಲಿರುವ ನೆಲಮಹಡಿ ಹಾಗೂ  ನಾಲ್ಕು ಅಂತಸ್ತಿನ "ಮನೋರಮಾ" ಕಟ್ಟಡದಲ್ಲಿ ಮಧ್ಯಾಹ್ನ 1.40 ರ ಸುಮಾರಿಗೆ ಈ ಘಟನೆ ಸಂಭವಿಸಿದೆ ಎಂದು ಅವರು ಹೇಳಿದರು.

ನಾಲ್ಕನೇ ಮಹಡಿಯಲ್ಲಿ ಒಂದು ಚಪ್ಪಡಿ ಇತರ ಚಪ್ಪಡಿಗಳ ಮೇಲೆ ಕುಸಿದು ಎಲ್ಲವೂ ನೆಲಮಹಡಿಯತ್ತ ಕುಸಿದವು.  ಆ ವೇಳೆ ಜನಗಳು ಅವಿಗಳ ನಡುವೆ ಸಿಲುಕಿದ್ದರು. ಘಟನಾ ಸ್ಥಳದಲ್ಲಿ ಎನ್.ಡಿ.ಆರ್.ಎಫ್.ಸಿಬ್ಬಂದಿಗಳ ತಂಡ ರಕ್ಷಣಾ ಕಾರ್ಯಾಚರಣೆ ನಡೆಸಿದೆ, ಸ್ಥಳೀಯ ಅಗ್ನಿಶಾಮಕ ದಳದವರು ಘಟನಾ ಸ್ಥಳಕ್ಕೆ ಧಾವಿಸಿ 11 ನಿವಾಸಿಗಳನ್ನು ರಕ್ಷಿಸಿದ್ದಾರೆ, ಅವರನ್ನು ಪ್ರಥಮ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಮೃತರನ್ನು ಮಾಂಟಿ ಮಿಲಿಂದ್ ಪಾರ್ಷೆ (12), ಐಶ್ವರಾಯ ಹರೀಶ್ ದೋಡ್ವಾಲ್ (23), ಹರೀಶ್ ದೋಡ್ವಾಲ್ (40) ಮತ್ತು ಸಾವಿತ್ರಿ ಪಾರ್ಷೆ (60) ಎಂದು ಗುರುತಿಸಲಾಗಿದೆ. ಸಂಧ್ಯಾ ದೋಡ್ವಾಲ್ ಕಾಣೆಯಾಗಿದ್ದು, ಪಾರುಗಾಣಿಕಾ ತಂಡಗಳು ಅವರನ್ನು ಅವಶೇಷಗಳಲ್ಲಿ ಪತ್ತೆ ಹಚ್ಚಲು ಪ್ರಯತ್ನಿಸುತ್ತಿವೆ. ನಾಲ್ಕು ಗಂಟೆಗಳಿಗಿಂತ ಹೆಚ್ಚಿನ ಶೋಧದ ನಂತರ ಶವಗಳನ್ನು ಅವಶೇಷಗಳಿಂದ ಹೊರತೆಗೆಯಲಾಯಿತು.

ಕಟ್ಟಡ ನಿರ್ಮಾಣದ ವರ್ಷ ಮತ್ತು ಅದರ ನಿವಾಸಿಗಳ ಸಂಖ್ಯೆಯಂತಹ ವಿವರಗಳನ್ನು ನಂತರ ತಿಳಿಯಲಾಗುವುದು ಎಂದು ಉಲ್ಹಾಸ್‌ನಗರ ತೆಹಶೀಲ್ದಾರ್ ವಿಜಯ್ ವಾಕೋರ್ ಪಿಟಿಐಗೆ ತಿಳಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com