ಫೈನಾನ್ಷಿಯಲ್ ಎಕ್ಸ್‌ಪ್ರೆಸ್ ವ್ಯವಸ್ಥಾಪಕ ಸಂಪಾದಕ ಸುನಿಲ್ ಜೈನ್ ಕೊರೋನಾದಿಂದ ಸಾವು

ಫೈನಾನ್ಷಿಯಲ್ ಎಕ್ಸ್‌ಪ್ರೆಸ್‌ನ ವ್ಯವಸ್ಥಾಪಕ ಸಂಪಾದಕ ಸುನಿಲ್ ಜೈನ್ ಕೊರೋನಾದಿಂದಾಗಿ ಶನಿವಾರದಂದು ನಿಧನರಾದರು. ಅವರಿಗೆ 58 ವರ್ಷವಾಗಿತ್ತು.
ಸುನಿಲ್ ಜೈನ್
ಸುನಿಲ್ ಜೈನ್

ಫೈನಾನ್ಷಿಯಲ್ ಎಕ್ಸ್‌ಪ್ರೆಸ್‌ನ ವ್ಯವಸ್ಥಾಪಕ ಸಂಪಾದಕ ಸುನಿಲ್ ಜೈನ್ ಕೊರೋನಾದಿಂದಾಗಿ ಶನಿವಾರದಂದು ನಿಧನರಾದರು. ಅವರಿಗೆ 58 ವರ್ಷವಾಗಿತ್ತು.

ಜೈನ್ ಸಹೋದರಿ ಸಂಧ್ಯಾ ತನ್ನ ಸಹೋದರನ ನಿಧನದ ಸುದ್ದಿಯನ್ನು ಟ್ವಿಟ್ಟರ್ ನಲ್ಲಿ ಪ್ರಕಟಿಸುವ ಮೂಲಕ ದೃಢೀಕರಿಸಿದ್ದಾರೆ.

"ನಾನು ಈ ಸಂಜೆ ನನ್ನ ಸಹೋದರ ಸುನಿಲ್ ಜೈನ್ ಅವರನ್ನು ಕೋವಿಡ್ ನಿಂದಾಗಿ ಕಳೆದುಕೊಂಡಿದ್ದೇವೆ. ಏಮ್ಸ್ ನ ವೈದ್ಯರು ಸಾಕಷ್ಟು ಶ್ರಮಿಸ್ದರೂ ಅವರನ್ನು ಉಳಿಸಲಾಗಿಲ್ಲ. ತೀರ್ಥಂಕರರು ಅಗಲಿದ ಆತ್ಮಕ್ಕೆ  ಮುಂದಿನ ಪ್ರಯಾಣಕ್ಕೆ ಮಾರ್ಗದರ್ಶನ ನೀಡಲಿ;"  ಸಂಧ್ಯಾ  ಅವರು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಸಹ ಜೈನ್ ಅವರ ನಿಧನಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

ಜೈನ್ 1991 ರಲ್ಲಿ ಇಂಡಿಯಾ ಟುಡೆ ನಿಯತಕಾಲಿಕೆಯಲ್ಲಿ ವರದಿಗಾರರಾಗಿ ತನ್ನ ಪತ್ರಿಕೋದ್ಯಮ ವೃತ್ತಿಯನ್ನು ಪ್ರಾರಂಭಿಸಿದನು ಮತ್ತು ನಂತರ ಅದರ ವ್ಯವಹಾರ ಸಂಪಾದಕ (ಬ್ಯುಸಿನೆಸ್ ಎಡಿಟರ್)  ಆಗಿದ್ದರು.  ತರ ಅವರು ಆರು ವರ್ಷಗಳ ಕಾಲ ಇಂಡಿಯನ್ ಎಕ್ಸ್‌ಪ್ರೆಸ್‌ ನಲ್ಲಿ  ಆರ್ಥಿಕತೆ ಮತ್ತು ವ್ಯವಹಾರಕ್ಕೆ ಸಂಬಂಧಿಸಿದ ಸ್ಟೋರಿಗಳಿಗೆ ಹೆಸರಾಗಿದ್ದರು.

ಬಿಸಿನೆಸ್ ಸ್ಟ್ಯಾಂಡರ್ಡ್‌ ನಲ್ಲಿ ಕೆಲ ದಿನಗಳ ಕಳೆದ ನಂತರ  ಫೈನಾನ್ಷಿಯಲ್ ಎಕ್ಸ್‌ಪ್ರೆಸ್‌ನ ಸಹಾಯಕ ಸಂಪಾದಕರಾ ಅವರು ಮತ್ತೆ ಕಂಪನಿಗೆ ಮರಳೀದ್ದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com