ಭಾರತ, ಬ್ರಿಟನ್ ರೂಪಾಂತರಿ ವೈರಾಣುಗಳಿಗೆ ಕೋವ್ಯಾಕ್ಸಿನ್ ಲಸಿಕೆ ಪರಿಣಾಮಕಾರಿ: ಭಾರತ್ ಬಯೋಟೆಕ್ 

ಭಾರತ, ಬ್ರಿಟನ್ ನಲ್ಲಿ ಪತ್ತೆಯಾಗಿರುವ B.1.617 ಹಾಗೂ B.1.1.7 ಕೊರೋನಾ ವೈರಾಣುವಿನ ರೂಪಾಂತರಿ ತಳಿಗಳ ವಿರುದ್ಧ ಭಾರತ್ ಬಯೋಟೆಕ್ ನ ಕೋವ್ಯಾಕ್ಸಿನ್ ಲಸಿಕೆ ಅತ್ಯಂತ ಪರಿಣಾಮಕಾರಿಯಾಗಿದೆ ಎಂದು ಭಾರತ್ ಬಯೋಟೆಕ್ ಸಂಸ್ಥೆ ತಿಳಿಸಿದೆ. 
ಭಾರತ, ಬ್ರಿಟನ್ ರೂಪಾಂತರಿ ವೈರಾಣುಗಳಿಗೆ ಕೋವ್ಯಾಕ್ಸಿನ್ ಲಸಿಕೆ ಪರಿಣಾಮಕಾರಿ: ಭಾರತ್ ಬಯೋಟೆಕ್
ಭಾರತ, ಬ್ರಿಟನ್ ರೂಪಾಂತರಿ ವೈರಾಣುಗಳಿಗೆ ಕೋವ್ಯಾಕ್ಸಿನ್ ಲಸಿಕೆ ಪರಿಣಾಮಕಾರಿ: ಭಾರತ್ ಬಯೋಟೆಕ್

ನವದೆಹಲಿ: ಭಾರತ, ಬ್ರಿಟನ್ ನಲ್ಲಿ ಪತ್ತೆಯಾಗಿರುವ B.1.617 ಹಾಗೂ B.1.1.7 ಕೊರೋನಾ ವೈರಾಣುವಿನ ರೂಪಾಂತರಿ ತಳಿಗಳ ವಿರುದ್ಧ ಭಾರತ್ ಬಯೋಟೆಕ್ ನ ಕೋವ್ಯಾಕ್ಸಿನ್ ಲಸಿಕೆ ಅತ್ಯಂತ ಪರಿಣಾಮಕಾರಿಯಾಗಿದೆ ಎಂದು ಭಾರತ್ ಬಯೋಟೆಕ್ ಸಂಸ್ಥೆ ತಿಳಿಸಿದೆ. 

ಕೋವ್ಯಾಕ್ಸಿನ್ ಲಸಿಕೆಯಲ್ಲಿ ಬಳಕೆ ಮಾಡಲಾಗಿರುವ ರೂಪಾಂತರಿ (ಡಿ614ಜಿ) ಗೆ ಹೋಲಿಕೆ ಮಾಡಿದರೆ B.1.617 ರೂಪಾಂತರಿ ವೈರಾಣು ನಿಷ್ಪರಿಣಾಗೊಳಿಸುವಿಕೆಯಲ್ಲಿ ಲಸಿಕೆಯಲ್ಲಿ 1.95 ಅಂಶದಷ್ಟು ಕಡಿತ ದಾಖಲಾಗಿದ್ದರೆ, ಮೊದಲ ಬಾರಿಗೆ ಬ್ರಿಟನ್ ನಲ್ಲಿ ದಾಖಲಾಗಿರುವ B.1.1.7 ಹಾಗೂ ಲಸಿಕೆಯಲ್ಲಿರುವ ರೂಪಾಂತರಿ (D614G) ವೈರಾಣು ನಿಷ್ಕ್ರಿಯಗೊಳಿಸುವುದರಲ್ಲಿ ಯಾವುದೇ ಮಹತ್ವದ ನಕಾರಾತ್ಮಕ ಅಂಶಗಳೂ ಕಂಡುಬಂದಿಲ್ಲ ಎಂದು ಭಾರತ್ ಬಯೋಟೆಕ್ ಹೇಳಿದೆ.

ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ-ಐಸಿಎಂಆರ್  ಸಹಯೋಗದಲ್ಲಿ ನಡೆದ ಅಧ್ಯಯನದಲ್ಲಿ ಈ ಅಂಶ ಕಂಡುಬಂದಿದೆ.  

ದೇಶಾದ್ಯಂತ ನೀಡಲು ಅನುಮತಿ ನೀಡಿರುವ ಮೂರು ಲಸಿಕೆಗಳ ಪೈಕಿ ಕೋವ್ಯಾಕ್ಸಿನ್ ಕೂಡಾ ಒಂದಾಗಿದೆ. 

ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ ಈ ವರೆಗೂ ಒಟ್ಟಾರೆ 18,22,20,164 ಡೋಸ್ ಗಳಷ್ಟು ಲಸಿಕೆಯನ್ನು ನೀಡಲಾಗಿದೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com