ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಬಾಗಿಲು ತೆರೆದ ಕೇದಾರನಾಥ ದೇವಾಲಯ: ಕೋವಿಡ್ ನಿಂದ ಯಾತ್ರಿಕರ ಭೇಟಿ ರದ್ದು 

ಹಿಂದೂ ಧರ್ಮೀಯರ ಪವಿತ್ರ ಯಾತ್ರಾ ಸ್ಥಳ ಉತ್ತರಾಖಂಡದ ಕೇದಾರನಾಥ ದೇವಾಲಯ ಸೋಮವಾರ ತೆರೆದಿದೆ, ಸಂಪ್ರದಾಯಬದ್ಧವಾಗಿ ಧಾರ್ಮಿಕ ವಿಧಿವಿಧಾನಗಳನ್ನು ಕೋವಿಡ್-19 ಶಿಷ್ಟಾಚಾರಗಳ ಮಧ್ಯೆ ನಡೆಸಲಾಯಿತು.
ಕೇದಾರನಾಥ ದೇವಾಲಯ
ಕೇದಾರನಾಥ ದೇವಾಲಯ

ಉತ್ತರಾಖಂಡ: ಹಿಂದೂ ಧರ್ಮೀಯರ ಪವಿತ್ರ ಯಾತ್ರಾ ಸ್ಥಳ ಉತ್ತರಾಖಂಡದ ಕೇದಾರನಾಥ ದೇವಾಲಯ ಸೋಮವಾರ ತೆರೆದಿದೆ, ಸಂಪ್ರದಾಯಬದ್ಧವಾಗಿ ಧಾರ್ಮಿಕ ವಿಧಿವಿಧಾನಗಳನ್ನು ಕೋವಿಡ್-19 ಶಿಷ್ಟಾಚಾರಗಳ ಮಧ್ಯೆ ನಡೆಸಲಾಯಿತು.

ಈ ಬಾರಿ ಕೋವಿಡ್ ಸಾಂಕ್ರಾಮಿಕದಿಂದಾಗಿ ಚಾರ್ ಧಾಮ್ ಯಾತ್ರೆಯನ್ನು ರದ್ದುಗೊಳಿಸಲಾಗಿದೆ. ಯಾತ್ರಿಗಳನ್ನು ಒಳಗೆ ಬಿಡದೆ ಕೇವಲ ಧಾರ್ಮಿಕ ಸಂಪ್ರದಾಯಗಳನ್ನು ನೆರವೇರಿಸಲಾಗುತ್ತದೆ ಎಂದು ಉತ್ತರಾಖಂಡ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಖಾತೆ ಇಲಾಖೆ ತಿಳಿಸಿದೆ. ಕಳೆದ ವರ್ಷ ನವೆಂಬರ್ 16ರಂದು ದೇವಸ್ಥಾನವನ್ನು ಮುಚ್ಚಲಾಗಿತ್ತು.

ಕೇದಾರನಾಥ ದೇವಾಲಯದ ಪೋರ್ಟಲ್ ತೆರೆಯುವಿಕೆ ದೃಶ್ಯ ಇಂದು ಬೆಳಗ್ಗೆ 5 ಗಂಟೆಗೆ ಕಂಡುಬಂದದ್ದು ಹೀಗೆ: 

ಮೊನ್ನೆ ಮೇ 14ರಂದು ಶಿವ ದೇವರ ಮೂರ್ತಿಯನ್ನು ಉಖಿಮಠದ ಓಂಕಾರೇಶ್ವರ ದೇವಸ್ಥಾನದ ಸ್ಥಳದಿಂದ ತೆಗೆಯಲಾಗಿತ್ತು. ಗಂಗೋತ್ರಿ ಮತ್ತು ಯಮುನೋತ್ರಿ ದೇವಾಲಯಗಳು ಮೇ 14ರಂದು ತೆರೆದಿತ್ತು. ಬದರಿನಾಥ ದೇವಾಲಯ ನಾಳೆ ತೆರೆಯಲಿದೆ. ಇದು ಕಳೆದ ನವೆಂಬರ್ 19ರಂದು ಮುಚ್ಚಿತ್ತು.

ಹೀಮಾಲಯ ತಪ್ಪಲಿನಲ್ಲಿರುವ ದೇಶದ ಪ್ರಮುಖ ನಾಲ್ಕು ದೇವಾಲಯಗಳಾದ ಕೇದಾರನಾಥ, ಬದರಿನಾಥ್, ಗಂಗೋತ್ರಿ ಮತ್ತು ಯಮುನೋತ್ರಿಯ ಬಾಗಿಲುಗಳನ್ನು ಪ್ರತಿವರ್ಷ ಏಪ್ರಿಲ್-ಮೇ ಮಧ್ಯೆ ತೆರೆಯಲಾಗುತ್ತದೆ, ಚಳಿಗಾಲದಲ್ಲಿ 6 ತಿಂಗಳು ಮುಚ್ಚಿರುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com