ಬ್ಲ್ಯಾಕ್ ಫಂಗಸ್: ಏಮ್ಸ್ ನಿಂದ ಚಿಕಿತ್ಸಾ ಮಾರ್ಗಸೂಚಿ ತಯಾರಿ, ಶೀಘ್ರದಲ್ಲೇ ಬಿಡುಗಡೆ

ಮಾರಕ ಕೊರೋನಾ ವೈರಸ್ 2ನೇ ಅಲೆ ವೇಳೆ ಕೋವಿಡ್ ಗಿಂತಲೂ ಹೆಚ್ಚು ಭೀತಿ ಸೃಷ್ಟಿಸಿರುವ ಬ್ಲ್ಯಾಕ್ ಫಂಗಸ್ ಸೋಂಕು ಕುರಿತಂತೆ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಚಿಕಿತ್ಸಾ ವಿಧಾನದ ಮಾರ್ಗ ಸೂಚಿ ಸಿದ್ಧಪಡಿಸುತ್ತಿದ್ದು, ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ ಎಂದು ತಿಳಿದುಬಂದಿದೆ.
ದೆಹಲಿಯ ಏಮ್ಸ್ ಆಸ್ಪತ್ರೆ
ದೆಹಲಿಯ ಏಮ್ಸ್ ಆಸ್ಪತ್ರೆ

ನವದೆಹಲಿ: ಮಾರಕ ಕೊರೋನಾ ವೈರಸ್ 2ನೇ ಅಲೆ ವೇಳೆ ಕೋವಿಡ್ ಗಿಂತಲೂ ಹೆಚ್ಚು ಭೀತಿ ಸೃಷ್ಟಿಸಿರುವ ಬ್ಲ್ಯಾಕ್ ಫಂಗಸ್ ಸೋಂಕು ಕುರಿತಂತೆ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಚಿಕಿತ್ಸಾ ವಿಧಾನದ ಮಾರ್ಗ ಸೂಚಿ ಸಿದ್ಧಪಡಿಸುತ್ತಿದ್ದು, ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ ಎಂದು  ತಿಳಿದುಬಂದಿದೆ.

ದೇಶದಲ್ಲಿ ಕರ್ನಾಟಕ, ಉತ್ತರಾಖಂಡ, ತೆಲಂಗಾಣ, ಮಧ್ಯಪ್ರದೇಶ ಮತ್ತು ಬಿಹಾರ ಸೇರಿದಂತೆ ಹಲವು ರಾಜ್ಯಗಳಲ್ಲಿ ಈ ಬ್ಲ್ಯಾಕ್ ಫಂಗಸ್ (ಕಪ್ಪು ಶಿಲೀಂಧ್ರ ಅಥವಾ ಮ್ಯೂಕಾರ್ಮೈಕೋಸಿಸ್) ಸೋಂಕು ಪ್ರಕರಣಗಳು ವರದಿಯಾಗುತ್ತಿದ್ದು, ಈ ಸಂಬಂಧ ಏಮ್ಸ್ ಮಾರ್ಗಸೂಚಿಗಳನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಮೂಲಗಳು ಮಂಗಳವಾರ ತಿಳಿಸಿವೆ. 

ಈ ಕುರಿತಂತೆ ಕೇಂದ್ರ ಆರೋಗ್ಯ ಸಚಿವಾಲಯದ ಮೂಲಗಳು ಮಾಹಿತಿ ನೀಡಿದ್ದು, ಮ್ಯೂಕೋರ್ಮೈಕೋಸಿಸ್ ಅಥವಾ ಕಪ್ಪು ಶಿಲೀಂಧ್ರವು ಶಿಲೀಂಧ್ರಗಳ ಸೋಂಕಿನಿಂದ ಉಂಟಾಗುವ ಒಂದು ಸಮಸ್ಯೆಯಾಗಿದ್ದು, ಪರಿಸರದಲ್ಲಿನ ಶಿಲೀಂಧ್ರ ಬೀಜಕಗಳೊಂದಿಗೆ ಸಂಪರ್ಕಕ್ಕೆ ಬರುವ ಮೂಲಕ ಜನರು ಮ್ಯೂಕೋರ್ಮೈಕೋಸಿಸ್ ಸೋಂಕಿಗೆ ತುತ್ತಾಗುತ್ತಾರೆ. ಕತ್ತರಿಸಿದ ಚರ್ಮ, ಸುಟ್ಟಗಾಯ, ಇತರೆ ಚರ್ಮದ ಮೂಲಕ ಈ ಸೋಂಕು ದೇಹದ ಒಳಗೆ ಪ್ರವೇಶಿಸುತ್ತದೆ. ಅಲ್ಲದೆ ಗಾಳಿಯ ಮುಖಾಂತರವೂ ಇದು ಹರಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಬಳಿಕ ಇದಜು ಚರ್ಮದ ಮೇಲೆ ಬೆಳೆದು, ಸೋಂಕಿತರಲ್ಲಿ  ಗಂಭೀರ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡುತ್ತದೆ ಎನ್ನಲಾಗಿದೆ.

ಕೋವಿಡ್-19 ನಿಂದ ಚೇತರಿಸಿಕೊಳ್ಳುತ್ತಿರುವ ಅಥವಾ ಚೇತರಿಸಿಕೊಂಡ ರೋಗಿಗಳಲ್ಲಿ ಈ ರೋಗವನ್ನು ಕಂಡುಹಿಡಿಯಲಾಗುತ್ತಿದೆ. ಇದಲ್ಲದೆ, ಮಧುಮೇಹ ಮತ್ತು ಅವರ ರೋಗ ನಿರೋಧಕ ಶಕ್ತಿ ಸರಿಯಾಗಿ ಕಾರ್ಯನಿರ್ವಹಿಸದ ಯಾರಾದರೂ ಈ ಸೋಂಕಿಗೆ ತುತ್ತಾಗಬಲ್ಲರು. ಹೆಚ್ಚಾಗಿ ಮಣ್ಣಿನಲ್ಲಿ ಈ ಶಿಲೀಂದ್ರಗಳು  ಕಂಡುಬರುತ್ತದೆ. ಅಲ್ಲದೆ ಎಲೆಗಳು, ಕಾಂಪೋಸ್ಟ್ ಮತ್ತು ರಾಶಿಗಳಂತಹ ಕೊಳೆಯುತ್ತಿರುವ ಸಾವಯವ ಪದಾರ್ಥಗಳಲ್ಲಿ ಇದು ಕಂಡುಬರುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com