ನಾರದಾ ವಿವಾದ: ತೃಣಮೂಲ ಮುಖಂಡರ ಜಾಮೀನಿಗೆ ಕೋಲ್ಕತ್ತಾ ಹೈಕೋರ್ಟ್ ತಡೆ

ನಾರದಾ ಕುಟುಕು ಕಾರ್ಯಾಚರಣೆ ಪ್ರಕರಣದ ಸಂಬಂಧ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಬಂಧಿಸಿರುವ ಪಶ್ಚಿಮ ಬಂಗಾಳ ಸಚಿವರು ಮತ್ತು ಮುಖಂಡರ ಜಾಮೀನು ಅರ್ಜಿಗಳಿಗೆ ಕೊಲ್ಕತ್ತಾ ಹೈಕೋರ್ಟ್ ತಡೆ ನೀಡಿದೆ.
ಕೊಲ್ಕತ್ತಾ ಹೈಕೋರ್ಟ್
ಕೊಲ್ಕತ್ತಾ ಹೈಕೋರ್ಟ್

ಕೋಲ್ಕತ್ತಾ: ನಾರದಾ ಕುಟುಕು ಕಾರ್ಯಾಚರಣೆ ಪ್ರಕರಣದ ಸಂಬಂಧ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಬಂಧಿಸಿರುವ ಪಶ್ಚಿಮ ಬಂಗಾಳ ಸಚಿವರು ಮತ್ತು ಮುಖಂಡರ ಜಾಮೀನು ಅರ್ಜಿಗಳಿಗೆ ಕೊಲ್ಕತ್ತಾ ಹೈಕೋರ್ಟ್ ತಡೆ ನೀಡಿದೆ.

ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕರಾದ ಹಿರಿಯ ಸಚಿವ ಸುಬ್ರಾತ್ ಮುಖರ್ಜಿ ಮತ್ತು ಫಿರ್ಹಾದ್  ಹಕೀಂ, ಶಾಸಕರಾದ ಮದನ್ ಮಿತ್ರಾ ಮತ್ತು ಮಾಜಿ ಸಚಿವ ಸೋವಾನ್ ಚಟರ್ಜಿ ಅವರಿಗೆ ವಿಶೇಷ ಸಿಬಿಐ ಕೋರ್ಟ್ ನೀಡಿದ್ದ ಜಾಮೀನಿಗೆ ಹೈಕೋರ್ಟ್ ಸೋಮವಾರ ತಡರಾತ್ರಿ ತಡೆ ನಿಡಿದೆ.

ಈ ಪ್ರಕರಣದ ವಿಚಾರಣೆಯನ್ನು ಪಶ್ಚಿಮ ಬಂಗಾಳದಿಂದ ವರ್ಗಾವಣೆ ಮಾಡುವಂತೆ ಕೋರಿ ಸಿಬಿಐ ಸಲ್ಲಿಸಿದ್ದ ಅರ್ಜಿಯಲ್ಲಿ ಕಾರ್ಯನಿರತ ಮುಖ್ಯ ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ಮತ್ತು ನ್ಯಾಯಮೂರ್ತಿ ಅರಿಜಿತ್ ಬ್ಯಾನರ್ಜಿ ಅವರ ನ್ಯಾಯಪೀಠ ಈ ಆದೇಶವನ್ನು ಅಂಗೀಕರಿಸಿದೆ.

ಶಾಸಕಾಂಗ ಸಮಿತಿ ರಚನೆಗೆ ಪಶ್ಚಿಮ ಬಂಗಾಳ ಸಂಪುಟ ಒಪ್ಪಿಗೆ 

ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರ ಚುನಾವಣಾ ಭರವಸೆಯಲ್ಲಿ ಒಂದನ್ನು ಪಶ್ಚಿಮ ಬಂಗಾಳ ಸಂಪುಟ ಸೋಮವಾರ ಅಂಗೀಕರಿಸಿದೆ. ಅದರಂತೆ ರಾಜ್ಯದಲ್ಲಿ "ವಿಧಾನ ಪರಿಷತ್ ರಚಿಸುವ ಪ್ರಸ್ತಾಪವನ್ನು ಸಂಪುಟ ಇಂದು ಅನುಮೋದಿಸಿದೆ. ಇದನ್ನು ಈಗ ರಾಜ್ಯಪಾಲರಿಗೆ ಕಳುಹಿಸಲಾಗುವುದು ಮತ್ತು ಅವರ ಅನುಮೋದನೆಯ ನಂತರ ಅಗತ್ಯ ಅನುಮೋದನೆಗಾಗಿ ರಾಜ್ಯ ವಿಧಾನಸಭೆಯ ಮುಂದಿಡಲಾಗುತ್ತದೆ" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಾಂವಿಧಾನಿಕ ನಿಬಂಧನೆಯ ಪ್ರಕಾರ, ರಾಜ್ಯ ಶಾಸಕಾಂಗ ಸಮಿತಿಯನ್ನುಯನ್ನು ರಚಿಸಲು ಅಥವಾ ರದ್ದುಗೊಳಿಸಲು, ರಾಜ್ಯ ಶಾಸಕಾಂಗವು ಒಂದು ನಿರ್ಣಯವನ್ನು ಅಂಗೀಕರಿಸಬೇಕು, ಇದನ್ನು ವಿಧಾನಸಭೆ ಬಹುಮತದ ಬಲದಿಂದ ಮತ್ತು ಪ್ರಸ್ತುತ ಮತ್ತು ಮತದಾನದ 2/3 ನೇ ಬಹುಮತದಿಂದ ಬೆಂಬಲಿಸಬೇಕು. ಆಂಧ್ರಪ್ರದೇಶ, ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ, ಬಿಹಾರ ಮತ್ತು ಉತ್ತರ ಪ್ರದೇಶ ಸೇರಿದಂತೆ ಏಳು ರಾಜ್ಯಗಳು ದ್ವಿಪಕ್ಷೀಯ ಶಾಸಕಾಂಗವನ್ನು ಹೊಂದಿವೆ ಎಂದು ನಮೂದಿಸಬೇಕು.

ಕೊರೋನಾವೈರಸ್ ಉಲ್ಬಣವನ್ನು ನಿಯಂತ್ರಿಸಲು ರಾಜ್ಯದಲ್ಲಿ ಸಂಪೂರ್ಣ ಲಾಕ್ ಡೌನ್ ಆಗಿರುವುದರಿಂದ ಮೇ 10 ರಂದು ರಚಿಸಲಾದ ಹೊಸ ಟಿಎಂಸಿ ಸರ್ಕಾರದ ಎರಡನೆಯ ಸಂಪುಟ ಭೆಯಲ್ಲಿ ಕೆಲವೇ ಮಂತ್ರಿಗಳು ಮಾತ್ರ ಹಾಜರಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com