ಮಧ್ಯರಾತ್ರಿ 7 ಗಂಟೆಗಳ ದೀರ್ಘ ಕಾರ್ಯಾಚರಣೆಯ ಮೂಲಕ 500 ರೋಗಿಗಳ ಜೀವ ಉಳಿಸಿದ ಬಿಹಾರ ಡಿಎಂ

ದರ್ಬಂಗಾದ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿ ನೇಮಕವಾಗಿದ್ದ ಯುವ ಐಎಎಸ್ ಅಧಿಕಾರಿ ಡಾ. ಎಸ್.ಎಂ ತ್ಯಾಗರಾಜನ್ ಅವರು ಮಧ್ಯರಾತ್ರಿಯಲ್ಲಿ 7 ಗಂಟೆಗಳ ಸುದೀರ್ಘ ಕಾರ್ಯಾಚರಣೆ ನಡೆಸಿ ಬರೋಬ್ಬರಿ 500 ರೋಗಿಗಳ ಜೀವ ಉಳಿಸಿದ್ದಾರೆ. 
ದರ್ಬಂಗಾದ ಡಿಎಂ ತ್ಯಾಗರಾಜನ್
ದರ್ಬಂಗಾದ ಡಿಎಂ ತ್ಯಾಗರಾಜನ್

ಪಾಟ್ನಾ: ದರ್ಬಂಗಾದ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿ ನೇಮಕವಾಗಿದ್ದ ಯುವ ಐಎಎಸ್ ಅಧಿಕಾರಿ ಡಾ. ಎಸ್.ಎಂ ತ್ಯಾಗರಾಜನ್ ಅವರು ಮಧ್ಯರಾತ್ರಿಯಲ್ಲಿ 7 ಗಂಟೆಗಳ ಸುದೀರ್ಘ ಕಾರ್ಯಾಚರಣೆ ನಡೆಸಿ ಬರೋಬ್ಬರಿ 500 ರೋಗಿಗಳ ಜೀವ ಉಳಿಸಿದ್ದಾರೆ. 

ದರ್ಬಂಗದಲ್ಲಿ ವೈದ್ಯಕೀಯ ಆಮ್ಲಜನಕವನ್ನು ಉತ್ಪಾದಿಸುವ ಪ್ಲಾಂಟ್ ಮೇ 5ರಂದು ಥಟ್ಟನೆ ಮುರಿದುಬಿದ್ದಿತ್ತು. ಇದರಿಂದಾಗಿ 500 ರೋಗಿಗಳ ಜೀವಕ್ಕೆ ಕುತ್ತು ಎದುರಾಗಿತ್ತು. ಈ ವೇಳೆ ಡಾ. ಎಸ್.ಎಂ. ತ್ಯಾಗರಾಜನ್ ಅವರ ತ್ವರಿತ ಚಿಂತನೆ ಮತ್ತು ತ್ವರಿತ ಕ್ರಮಗಳಿಂದಾಗಿ ದರ್ಬಂಗಾದಲ್ಲಿ ಮಾತ್ರವಲ್ಲದೆ ಇತರ ಪಕ್ಕದ ಜಿಲ್ಲೆಗಳಲ್ಲೂ ರೋಗಿಗಳ ಜೀವವನ್ನು ಉಳಿಸಲು ಸಾಧ್ಯವಾಯಿತು.

ದರ್ಬಂಗದಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ -19 ಮತ್ತು ಕೋವಿಡ್ ಅಲ್ಲದ ಇತರ ಕಾಯಿಲೆಗಳಿಗಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಇವರೆಲ್ಲರಿಗೂ ಆಕ್ಸಿಜನ್ ಅಳವಡಿಸಲಾಗಿತ್ತು. ಆದರೆ ತಾಂತ್ರಿಕ ತೊಂದರೆಯಿಂದಾಗಿ ಪ್ಲಾಂಟ್ ನಿಂದ ಆಮ್ಲಜನಕದ ಪೂರೈಕೆ ನಿಂತುಹೋಯಿತು.

ದರ್ಬಂಗಾದಲ್ಲಿನ ಈ ಆಕ್ಸಿಜನ್ ಸ್ಥಾವರವು ದರ್ಬಂಗಾ ಮಾತ್ರವಲ್ಲದೆ ಮಧುಬಾನಿ ಮತ್ತು ಇತರ ಪಕ್ಕದ ಜಿಲ್ಲೆಗಳ ಅಗತ್ಯಗಳನ್ನು ಪೂರೈಸುತ್ತಿತ್ತು. ಮೇ 5ರಂದು ಸಂಜೆ 6.00 ಗಂಟೆ ಸುಮಾರಿಗೆ ಮಾಧೋಪತಿಯಲ್ಲಿರುವ ಪ್ಲಾಂಟ್ ಸ್ಫೋಟಗೊಂಡಿತ್ತು. ಈ ವೇಳೆ ಸ್ಥಳಕ್ಕಾಗಮಿಸಿದ ತ್ಯಾಗರಾಜನ್ ಅವರು ಸ್ಥಾವರ ಪುನರಾರಂಭಿಸುವವರೆಗೆ ಆಮ್ಲಜನಕದ ಪೂರೈಕೆಯನ್ನು ಮುಂದುವರಿಸಲು ಪರ್ಯಾಯ ವ್ಯವಸ್ಥೆಗಳನ್ನು ಮಾಡಲು ಪ್ರಾರಂಭಿಸಿದ್ದೇವೆ ಎಂದು ಹೇಳಿದರು.

ಮೊದಲಿಗೆ ಡಿಎಂ ಪ್ರಧಾನ ಕಚೇರಿಗೆ ಎಸ್‌ಒಎಸ್ ಸಂದೇಶವನ್ನು ನೀಡಲಾಯಿತು. ಜೊತೆಗೆ ಇತರ ಜಿಲ್ಲಾ ಆಸ್ಪತ್ರೆಗಳ ನಿರ್ವಹಣಾ ಸಂಸ್ಥೆಗಳು ಪರ್ಯಾಯ ಯೋಜನೆಯೊಂದಿಗೆ ಎಚ್ಚರವಾಗಿರಲು ಕೇಳಿಕೊಂಡವು. "ಈ ಸಮಯದಲ್ಲಿ ನನ್ನ ಗಮನವನ್ನು ಸಮಸ್ಯೆಯನ್ನು ಸರಿಪಡಿಸಲು ಮಾತ್ರ ಕೇಂದ್ರೀಕರಿಸಿದೆ. ಹೀಗಾಗಿ ಅಹಿತಕರ ಘಟನೆ ಸಂಭವಿಸದಂತೆ ನೋಡಿಕೊಂಡವು ಎಂದರು.  

ಬ್ಯಾಕ್-ಅಪ್ ಆಕ್ಸಿಜನ್ ಸಿಲಿಂಡರ್‌ಗಳನ್ನು ಒದಗಿಸಲು ನೆರೆಯ ಜಿಲ್ಲೆಗಳಾದ ಮುಜಾಫರ್ಪುರ್, ಸಮಸ್ತಿಪುರ, ಪೂರ್ಣಿಯಾ, ಕಿಶಂಗಂಜ್ ಮತ್ತು ಬೆಗುಸರೈ ಜಿಲ್ಲಾ ಮ್ಯಾಜಿಸ್ಟ್ರೇಟ್ ರನ್ನು ಸಂಪರ್ಕಿಸಲಾಯಿತು. ಅಲ್ಲದೆ ಬಿಹಾರದ ಅಭಿವೃದ್ಧಿ ಆಯುಕ್ತ ಅಮೀರ್ ಸುಭಾನಿಯವರಿಗೂ ಬಿಕ್ಕಟ್ಟಿನ ಬಗ್ಗೆ ಮಾಹಿತಿ ನೀಡಲಾಯಿತು. ತಕ್ಷಣವೇ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಯಿತು. ಅಲ್ಲಿ ಪರ್ಯಾಯ ವ್ಯವಸ್ಥೆಗಳನ್ನು ಮಾಡುವವರೆಗೆ ತ್ಯಾಗರಾಜನ್ ಅಲ್ಲೇ ಬೀಡು ಬಿಟ್ಟಿದ್ದರು. 

ಮಧುಬಾನಿಯಿಂದ 27 ಸಿಲಿಂಡರ್‌ಗಳನ್ನು ಸಾಗಿಸುವ ವಾಹನವನ್ನು ಡಿಎಂಸಿಎಚ್‌ಗೆ ಕಳುಹಿಸಲಾಗಿದ್ದು, ರಾತ್ರಿಯಿಡೀ ವಿವಿಧ ಮೂಲಗಳಿಂದ ಆಮ್ಲಜನಕವನ್ನು ವ್ಯವಸ್ಥೆ ಮಾಡಲಾಯಿತು. ಮೇ 5ರ ರಾತ್ರಿ ಡಿಎಂ ಉಪಸ್ಥಿತಿಯಲ್ಲಿ ದೋಘಂಗಾದ ತಂತ್ರಜ್ಞನಿಗೆ ವಾಟ್ಸಾಪ್ ವಿಡಿಯೋ ಕರೆ ಮೂಲಕ ಸಮಸ್ಯೆಯನ್ನು ಹೇಗೆ ಬಗೆಹರಿಸಬೇಕೆಂದು ಕೇಳಲಾಯಿತು. 

ನಂತರ ತ್ಯಾಗರಾಜನ್ ಬೆಗುಸರೈನಿಂದ ವೆಲ್ಡಿಂಗ್ ಯಂತ್ರವನ್ನು ತರುವಂತೆ ಸೂಚಿಸಿದರು. ಬೆಗುಸರೈನ ಡಿಎಂ ಸಹ ಕೆಲವು ತಂತ್ರಜ್ಞರೊಂದಿಗೆ 50 ಸಿಲಿಂಡರ್ ಗಳ ಜೊತೆ ಮಧ್ಯರಾತ್ರಿ 12.30ಕ್ಕೆ ಹೊರಟು 115 ಕಿ.ಮೀ ದೂರದ ದರ್ಬಂಗಾಕ್ಕೆ ರಾತ್ರಿ 2.30ಕ್ಕೆ ತಲುಪಿದರು. ಹೀಗೆ ಸಮಸ್ತಿಪುರ 60 ದೊಡ್ಡ ಆಮ್ಲಜನಕ ಸಿಲಿಂಡರ್‌ಗಳು, ಮುಜಾಫರ್ಪುರದಿಂದ 60 ಸಿಲಿಂಡರ್‌ಗಳನ್ನು ಮುಂಜಾನೆ 1.00ಕ್ಕೆ ಕಳುಹಿಸಲಾಗಿತ್ತು.

ಇತರ ಕಡೆಗಳಿಂದ ಬಂದ ಎಲ್ಲಾ ಸಿಲಿಂಡರ್‌ಗಳು ಬ್ಯಾಕಪ್ ಮಾಡಲಾಗಿದ್ದು ಇದು ಮೇ 6ರ ಬೆಳಿಗ್ಗೆ ತನಕ ಬಳಸಲಾಯಿತು. ಆಮ್ಲಜನಕದ ವ್ಯವಸ್ಥೆಯನ್ನು ಮಾಡುತ್ತಿರುವಾಗಲೇ ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸಲಾಯಿತು. ತಾಂತ್ರಿಕ ದೋಷದಿಂದ ಸ್ಥಗಿತಗೊಂಡಿದ್ದ ವೈದ್ಯಕೀಯ ಆಮ್ಲಜನಕ ಸ್ಥಾವರ ಮುಂಜಾನೆ 3.35ಕ್ಕೆ ಕೆಲಸ ಪ್ರಾರಂಭಿಸಿತು. ಹೀಗಾಗಿ ಪೂರ್ಣಿಯಾದಿಂದ ಬೆಳಗ್ಗೆ 6 ಗಂಟೆ ಸುಮಾರಿಗೆ ಬಂದ 40 ಆಮ್ಲಜನಕ ಸಿಲಿಂಡರ್ ಹೊತ್ತ ವಾಹನವನ್ನು ಹಿಂದಕ್ಕೆ ಕಳುಹಿಸಲಾಯಿತು ಎಂದು ತ್ಯಾಗರಾಜನ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com