ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಜತೆ ಕೈಜೋಡಿಸದಿದ್ದದ್ದೇ ಕಾಂಗ್ರೆಸ್ ಸೋಲಿಗೆ ಕಾರಣ: ವೀರಪ್ಪ ಮೊಯ್ಲಿ

ಇತ್ತೀಚೆಗೆ ನಡೆದ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ತಮ್ಮ ಪಕ್ಷವು ಮಮತಾ ಬ್ಯಾನರ್ಜಿಯ ತೃಣಮೂಲ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳಬೇಕಾಗಿತ್ತು ಎಂದು ಕಾಂಗ್ರೆಸ್ ಹಿರಿಯ ಮುಖಂಡ ಎಂ ವೀರಪ್ಪ ಮೊಯ್ಲಿ ಹೇಳಿದ್ದಾರೆ.

Published: 19th May 2021 07:06 PM  |   Last Updated: 19th May 2021 08:43 PM   |  A+A-


ವೀರಪ್ಪ ಮೊಯ್ಲಿ

Posted By : Raghavendra Adiga
Source : PTI

ಬೆಂಗಳೂರು:  ಇತ್ತೀಚೆಗೆ ನಡೆದ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ತಮ್ಮ ಪಕ್ಷವು ಮಮತಾ ಬ್ಯಾನರ್ಜಿಯ ತೃಣಮೂಲ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳಬೇಕಾಗಿತ್ತು ಎಂದು ಕಾಂಗ್ರೆಸ್ ಹಿರಿಯ ಮುಖಂಡ ಎಂ ವೀರಪ್ಪ ಮೊಯ್ಲಿ ಹೇಳಿದ್ದಾರೆ.

ಮಾಜಿ ಮುಖ್ಯಮಂತ್ರಿ ಮೊಯ್ಲಿ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಮಾಜಿ ಸಚಿವ, ಪಶ್ಚಿಮ ಬಂಗಾಳ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಧೀರ್ ರಂಜನ್ ಚೌಧರಿ "ತಳಮಟ್ಟದ ಸ್ಪರ್ಶವಿಲ್ಲದ ದುರ್ಬಲ ನಾಯಕ" ಎಂದು ಬಣ್ಣಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಸಂಪೂರ್ಣ ನೆಲಕಚ್ಚಲು ಮೈತ್ರಿಯ ತಪ್ಪು ಆಯ್ಕೆಯು ಕಾರಣ ಎಂದಿದ್ದಾರೆ. ಕಾಂಗ್ರೆಸ್ ಎಡ ಪಕ್ಷ ಹಾಗೂ ಇಂಡಿಯನ್ ಸೆಕ್ಯುಲರ್ ಫ್ರಂಟ್ ಜೊತೆ ಹೊಂದಾಣಿಕೆ ಮಾಡಿಕೊಂಡಿತ್ತು.

ಬ್ಯಾನರ್ಜಿ "ನಮ್ಮ ಮಹಿಳೆ" ಎಂದು ಉಲ್ಲೇಖಿಸಿದ ಮೊಯ್ಲಿ ಟಿಎಂಸಿಯನ್ನು ಕಟ್ಟುವ ಮುನ್ನ ಅವರು ಕಾಂಗ್ರೆಸ್ ನಲ್ಲಿದ್ದರು. ಅವರು ನಮ್ಮ ಶಾಸಕರನ್ನು ಸೆಳೆದುಕೊಂಡಿರಬಹುದು ಎಂಬ ಅಂಶದ ಹೊರತಾಗಿಯೂ ಅವರ ಪಕ್ಷವು ನನ್ನೊಂದಿಗೆ "ಉತ್ತಮ ಸಂಬಂಧವನ್ನು ಹೊಂದಿದೆ, ಅವರು ಬಿಜೆಪಿ ವಿರುದ್ಧ ಹೋರಾಡುತ್ತಿರುವಾಗ, ನಮ್ಮ ಆತ್ಮೀಯರಾಗಿದ್ದರು" ಎಂದರು. 

ಚೌಧರಿಯ ವಿರುದ್ಧ ವಾಗ್ದಾಳಿ ನಡೆಸಿದ ಮೊಯ್ಲಿ ಅವರಿಗೆ ತಳಮಟ್ಟದ ತಿಳುವಳಿಕೆಯೇ ಇಲ್ಲದ ಮತ್ತು "ಮಮತಾ ಬ್ಯಾನರ್ಜಿ ವಿರುದ್ಧ ನಿಂದನೀಯ ಪದಗಳನ್ನು ಬಳಸಿದ್ದ ಕಾರಣದಿಂದಾಗಿ ನಾಯಕನಾಗಿದ್ದಾರೆ." ಎಂದು ಹೇಳಿದರು. "ಅದನ್ನು ಜನರು ಮತ್ತು ನಮ್ಮ ಕಾರ್ಯಕರ್ತರು ಮೆಚ್ಚಲಿಲ್ಲ. ನಮ್ಮ ಮತದಾರರು ಸಹ ನಮ್ಮ ಭದ್ರಕೋಟೆಗಳಲ್ಲಿ ಮಮತಾ ಅವರತ್ತ ವಾಲಿದರು, ಆದರೆ ಚೌಧರಿಗೆ ಶಿಕ್ಷೆ ಆಗುವುದಿಲ್ಲ.ಅವರು ಪಿಸಿಸಿ ಅಧ್ಯಕ್ಷರಾಗಿ ಮತ್ತು ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರಾಗಿ ಮುಂದುವರಿಯುತ್ತಾರೆ. ನೀವು ಕ್ರಮ ಕೈಗೊಳ್ಳದಿದ್ದರೆ ಮತ್ತು ಅವರನ್ನು ಜವಾಬ್ದಾರರನ್ನಾಗಿ ಮಾಡದಿದ್ದರೆ ಯಾರು ಪಕ್ಷವನ್ನು ನೋಡಿಕೊಳ್ಳುತ್ತಾರೆ?" ಎಂದು ಮೊಯ್ಲಿ ಹೇಳಿದ್ದಾರೆ.

ಚುನಾವಣಾ ಕಾರ್ಯತಂತ್ರದ ಬಗ್ಗೆ ತಮ್ಮ ಪಕ್ಷವನ್ನು ಟೀಕಿಸುವುದರಲ್ಲಿ ಅವರು ಹಿಂಜರಿಯಲಿಲ್ಲ, ಪ್ರಾದೇಶಿಕ ನಾಯಕತ್ವವನ್ನು ಬೆಳೆಸುವಲ್ಲಿ ಬಲವಾದ ಒತ್ತಡ ಹಾಕಿದ್ದರು. ಅಸ್ಸಾಂನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಗುರುತಿಸುವುದರಲ್ಲಿ ಕಾಂಗ್ರೆಸ್ ವಿಫಲವಾಗಿದೆ. ಅಲ್ಲದೆ ಕೇರಳದಲ್ಲಿ ಕಾಂಗ್ರೆಸ್ ಗೆ ಬಲವಾದ ಪೆಟ್ಟು ಬಿದ್ದಿದೆ ಎಂದರು.

ತನ್ನ ಅಸಮಾಧಾನವನ್ನು ರಹಸ್ಯವಾಗಿರಿಸದ ಮೊಯ್ಲಿ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಕಾಂಗ್ರೆಸ್ ಅದೇ ತಪ್ಪುಗಳನ್ನು ಮಾಡುತ್ತದೆ ಎಂದು ಹೇಳಿದರು. "ನಾವು ನಮ್ಮ ನಾಯಕರನ್ನು ವಿವಿಧ ರಾಜ್ಯಗಳಲ್ಲಿ ಆಯ್ಕೆ ಮಾಡುತ್ತೇವೆ ಅವರ ಹಣವನ್ನು (ಸಂಪನ್ಮೂಲಗಳನ್ನು) ಸಂಗ್ರಹಿಸುವ ಸಾಮರ್ಥ್ಯ ಮತ್ತು ಆಯಾ ಜಾತಿಯನ್ನು ಒಗ್ಗೂಡಿಸುವ ಸಾಮರ್ಥ್ಯವನ್ನು ಅವಲಂಬಿಸಿ. ಕಾಂಗ್ರೆಸ್ ಈ ರೀತಿಯ ಚುನಾವಣೆಗಳಲ್ಲಿ ಗೆಲ್ಲಬಹುದು ಎಂದು ನಾನು ಭಾವಿಸುವುದಿಲ್ಲ" ಎಂದು ಅವರು ಹೇಳಿದರು

ಒಂದು ಪಕ್ಷದ ಕೇಂದ್ರ ನಾಯಕತ್ವವನ್ನು ನೋಡಿ ಜನ ಮುಂದಿನ ದಿನಗಳಲ್ಲಿ ಮತ ಚಲಾಯಿಸುವುದಿಲ್ಲ ಅವರು ತಮ್ಮ ಮುಖ್ಯಮಂತ್ರಿ ಅಭ್ಯರ್ಥಿಗಳ ಬಗ್ಗೆ ತಿಳಿಯಬಯಸುತ್ತಾರೆ. ಉದಾಹರಣೆಗೆ ಕೇರಳ ಚುನಾವಣೆಗಳಲ್ಲಿ, ಮುಖ್ಯಮಂತ್ರಿ ಅಭ್ಯರ್ಥಿಯ ಆಯ್ಕೆ ವಿಚಾರದಲ್ಲಿ  ಕಾಂಗ್ರೆಸ್ ಗೊಂದಲಕ್ಕೊಳಗಾಯಿತು ಮತ್ತು ಜನರು ಮತ್ತೆ ಪಿಣರಾಯಿ ವಿಜಯನ್ ಅವರನ್ನು ಬೆಂಬಲಿಸಿದರು ಅಸ್ಸಾಂನಲ್ಲಿಯೂ ಕಾಂಗ್ರೆಸ್ ಯಾವುದೇ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಗುರುತಿಸುವಲ್ಲಿ ವಿಫಲವಾಗಿದೆ. ತಮಿಳುನಾಡಿನಲ್ಲಿ ಕಾಂಗ್ರೆಸ್ ಡಿಎಂಕೆ ಜತೆಗೆ ಮೈತ್ರಿಗಾಗಿ ಜತೆಯಾಗಿದೆ  ಆದರೆ ಚುನಾವಣೆಯ ನಂತರ ಪಕ್ಷದ ಸಂಘಟನೆಯನ್ನು ಬಲಪಡಿಸಲು ಯಾವುದೇ ಪ್ರಯತ್ನ ಮಾಡುವುದಿಲ್ಲ ಪುದುಚೇರಿಯಲ್ಲಿನ ಮೈತ್ರಿ ಪಾಲುದಾರ ಡಿಎಂಕೆಗೆ ಕಾಂಗ್ರೆಸ್ ಹಲವಾರು ಸ್ಥಾನಗಳನ್ನು ಬಿಟ್ಟುಕೊಟ್ಟಿದೆ ಆದರೆ ಆ ಪಕ್ಷವು "ಹೆಚ್ಚು ಉಪಸ್ಥಿತಿಯನ್ನು ಹೊಂದಿಲ್ಲ".

ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಕೇರಳ ಮತ್ತು ಪುದುಚೇರಿಯಲ್ಲಿ ವಿಧಾನಸಭಾ ಚುನಾವಣಾ ಹಿನ್ನಡೆ ಕುರಿತು ಮೊಯ್ಲಿ ಎಐಸಿಸಿ ಮತ್ತು ರಾಜ್ಯ ಮಟ್ಟದಲ್ಲಿ ಯಾರನ್ನಾಗಲಿ ಹೊಣೆಗಾರರನ್ನಾಗಿಸಬೇಕು ಎಂದು ಅಭಿಪ್ರಾಯಪಟ್ಟರು.


Stay up to date on all the latest ರಾಷ್ಟ್ರೀಯ news
Poll
lokasbha

ಸಂಸತ್ತಿನ ಕಲಾಪಗಳಿಗೆ ಅಡ್ಡಿಪಡಿಸುವ ಸಂಸದರಿಗೆ ದಂಡ ವಿಧಿಸಬೇಕೇ?


Result
ಹೌದು, ಇವರಿಂದ ಸಮಯ ವ್ಯರ್ಥ
ಬೇಡ, ಅವರು ಪ್ರತಿಭಟಿಸಬೇಕು
flipboard facebook twitter whatsapp