26/11 ಉಗ್ರದಾಳಿಯ ವಿರುದ್ಧ ಹೋರಾಡಿದ್ದ ಎನ್‌ಎಸ್‌ಜಿ ಮಾಜಿ ಮುಖ್ಯಸ್ಥ ಕೊರೋನಾದಿಂದ ನಿಧನ

2008 ರ ಮುಂಬೈ ಭಯೋತ್ಪಾದಕ ದಾಳಿಯ ಸಂದರ್ಭದಲ್ಲಿ ಕಮಾಂಡೋ ಪಡೆಗೆ ಮುಖ್ಯಸ್ಥರಾಗಿದ್ದ ರಾಷ್ಟ್ರೀಯ ಭದ್ರತಾ ಪಡೆ ಸಿಬ್ಬಂದಿ ಮಾಜಿ ಮಹಾನಿರ್ದೇಶಕ ಜೆಕೆ ದತ್(72) ಬುಧವಾರ ಕೋವಿಡ್-19 ನಿಂದ ನಿಧನರಾದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜೆ ಕೆ ದತ್

ನಿವೃತ್ತ ಐಪಿಎಸ್ ಅಧಿಕಾರಿಯನ್ನು ಏಪ್ರಿಲ್ 14 ರಂದು ಗುರುಗ್ರಾಮದ ಮೆದಂತಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಆಮ್ಲಜನಕದ ಮಟ್ಟ  ಕ್ಷೀಣಿಸಲು ಪ್ರಾರಂಭಿಸಿದ್ದವೆಂದು ಕುಟುಂಬ ಮೂಲಗಳು ಪಿಟಿಐಗೆ ತಿಳಿಸಿವೆ.

"ಅವರು ಇಂದು ಮಧ್ಯಾಹ್ನ 3: 30 ಕ್ಕೆ ಹೃದಯ ಸ್ತಂಭನದಿಂದ ನಿಧನರಾದರು" ಎಂದು ಕುಟುಂಬ ಸದಸ್ಯರೊಬ್ಬರು ಹೇಳಿದರು.

ದತ್ ಅವರ ಪತ್ನಿ, ಮಗ, ನೋಯ್ಡಾದಲ್ಲಿ ಕೆಲಸ ಮಾಡುತ್ತಿದ್ದಾರೆ ಪುತ್ರಿ ಯುಕೆನಲ್ಲಿ ನೆಲೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com