ಕೇಂದ್ರ ಸರ್ಕಾರದಿಂದ ರೈತರಿಗೆ ಶುಭಸುದ್ದಿ: ರಸಗೊಬ್ಬರದ ಮೇಲಿನ ಸಬ್ಸಿಡಿ ಶೇ.140 ರಷ್ಟು ಹೆಚ್ಚಳ!

ರೈತರ ಕಲ್ಯಾಣವೇ ನಮ್ಮ ಸರ್ಕಾರದ ಕೇಂದ್ರ ಉದ್ದೇಶ ಎಂದಿರುವ ಪ್ರಧಾನಿ ನರೇಂದ್ರ ಮೋದಿ ರಸಗೊಬ್ಬರ ಸಬ್ಸಿಡಿಯನ್ನು ಶೇಕಡಾ 140 ರಷ್ಟು ಹೆಚ್ಚಿಸಿ ಐತಿಹಾಸಿಕ ಹೆಜ್ಜೆ ಇಟ್ಟಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ರೈತರ ಕಲ್ಯಾಣವೇ ನಮ್ಮ ಸರ್ಕಾರದ ಕೇಂದ್ರ ಉದ್ದೇಶ ಎಂದಿರುವ ಪ್ರಧಾನಿ ನರೇಂದ್ರ ಮೋದಿ ರಸಗೊಬ್ಬರ ಸಬ್ಸಿಡಿಯನ್ನು ಶೇಕಡಾ 140 ರಷ್ಟು ಹೆಚ್ಚಿಸಿ ಐತಿಹಾಸಿಕ ಹೆಜ್ಜೆ ಇಟ್ಟಿದ್ದಾರೆ.

ಈ ನಿರ್ಧಾರ ರೈತರಿಗೆ ಅನುಕೂಲವಾಗಿದ್ದು ಡಿಎಪಿ ಗೊಬ್ಬರದ ಸಬ್ಸಿಡಿ ಪ್ರತಿ ಚೀಲಕ್ಕೆ 500 ರೂ.ನಿಂದ 1200 ರೂ. ಗೆ ಹೆಚ್ಚಳವಾಗಿದೆ. ಅದರಿಂದಾಗಿ ಒಂದು ಚೀಲ ಡಿಎಪಿ 2400 ರೂ. ಗೆ ಬದಲು 1200 ರೂ. ಗೆ ಸಿಕ್ಕಲಿದೆ.

ಈ ಸಬ್ಸಿಡಿಗಾಗಿ ಸರ್ಕಾರ ಸುಮಾರು 14,775 ಕೋಟಿ ರೂ. ವೆಚ್ಚ ಮಾಡಲಿದೆ.

"ರೈತರ ಜೀವನವನ್ನು ಸುಧಾರಿಸಲು ಸರ್ಕಾರ ಬದ್ಧವಾಗಿದೆ. ಆದ್ದರಿಂದ, ಜಾಗತಿಕ ಬೆಲೆಗಳ ಹೆಚ್ಚಳದ ಹೊರತಾಗಿಯೂ, ಗೊಬ್ಬರವನ್ನು ಹಳೆಯ ದರದಲ್ಲಿ ಲಭ್ಯವಾಗುವಂತೆ ನೋಡಿಕೊಳ್ಳುತ್ತೇವೆ" ಎಂದು ಪ್ರಧಾನಿ ಮೋದಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ಡಿಎಪಿಯ ಅಂತರರಾಷ್ಟ್ರೀಯ ಮಾರುಕಟ್ಟೆ ಬೆಲೆಗಳ ಏರಿಕೆಯ ಹೊರತಾಗಿಯೂ, ಹಳೆಯ ಚೀಲಕ್ಕೆ 1,200 ರೂ.ಗೆ ಮಾರಾಟ ಮಾಡುವುದನ್ನು ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ.

ಡಿಎಪಿಯ ನಿಜವಾದ ಬೆಲೆ ಈಗ ಪ್ರತಿ ಚೀಲಕ್ಕೆ 2,400 ರೂ., ರಸಗೊಬ್ಬರ ಕಂಪೆನಿಗಳು 500 ರೂ.ಗಳ ಸಬ್ಸಿಡಿಯನ್ನು ಪರಿಗಣಿಸಿ 1,900 ರೂ.ಗೆ ಮಾರಾಟ ಮಾಡುತ್ತಿದ್ದವು.

"ಬೆಲೆ ಏರಿಕೆಯ ಎಲ್ಲಾ ಹೊರೆಗಳನ್ನು ಹೊರಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಪ್ರತಿ ಚೀಲಕ್ಕೆ ಸಬ್ಸಿಡಿ ಪ್ರಮಾಣವನ್ನು ಒಂದೇ ಬಾರಿಗೆ ಹೆಚ್ಚಿಸಿಲ್ಲ" ಎಂದು ಅದು ಹೇಳಿದೆ. ರಾಸಾಯನಿಕ ಗೊಬ್ಬರಗಳಿಗೆ ಸಬ್ಸಿಡಿ ನೀಡಲು ಸರ್ಕಾರ ಪ್ರತಿವರ್ಷ ಸುಮಾರು 80,000 ಕೋಟಿ ರೂ. ವೆಚ್ಚ ಮಾಡಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com