ಮಧ್ಯ ಪ್ರದೇಶ: ಮಾಸ್ಕ್ ಧರಿಸದ ಮಹಿಳೆಗೆ ಸಾರ್ವಜನಿಕವಾಗಿ ಥಳಿಸಿದ ಪೊಲೀಸರು

ಮಧ್ಯ ಪ್ರದೇಶದ ಸಾಗರ್ ಜಿಲ್ಲೆಯಲ್ಲಿ ಕೋವಿಡ್ ಸಾಂಕ್ರಾಮಿಕ ರೋಗದ ಮಧ್ಯೆ ಮಾಸ್ಕ್ ಧರಿಸದೆ ತರಕಾರಿ ಖರೀದಿಸಲು ಹೊರಟಿದ್ದ ಮಹಿಳೆಯೊಬ್ಬರನ್ನು ಪೊಲೀಸರು ರಸ್ತೆಯಲ್ಲಿಯೇ ಎಳೆದಾಡಿ, ಥಳಿಸಿದ ಘಟನೆ ನಡೆದಿದೆ.
ಘಟನೆಯ ವಿಡಿಯೋ ಫೋಟೊ
ಘಟನೆಯ ವಿಡಿಯೋ ಫೋಟೊ

ಸಾಗರ್: ಮಧ್ಯ ಪ್ರದೇಶದ ಸಾಗರ್ ಜಿಲ್ಲೆಯಲ್ಲಿ ಕೋವಿಡ್ ಸಾಂಕ್ರಾಮಿಕ ರೋಗದ ಮಧ್ಯೆ ಮಾಸ್ಕ್ ಧರಿಸದೆ ತರಕಾರಿ ಖರೀದಿಸಲು ಹೊರಟಿದ್ದ ಮಹಿಳೆಯೊಬ್ಬರನ್ನು ಪೊಲೀಸರು ರಸ್ತೆಯಲ್ಲಿಯೇ ಎಳೆದಾಡಿ, ಥಳಿಸಿದ ಘಟನೆ ನಡೆದಿದೆ.

ರಾಹ್ಲಿ ಪಟ್ಟಣದಲ್ಲಿ ಸೋಮವಾರ ನಡೆದ ಈ ಘಟನೆಯ ವಿಡಿಯೋ ಈಗ ವೈರಲ್ ಆಗಿದ್ದು, ಮಹಿಳೆ ಮೊದಲು ಮಹಿಳಾ ಪೊಲೀಸರಿಗೆ ಹೊಡೆದಿದ್ದಾಳೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಾಸ್ಕ್ ಧರಿಸದ ಕಾರಣ ಮಹಿಳೆ ಮತ್ತು ಆಕೆಯ ಮಗಳನ್ನು ಸೋಮವಾರ ಬೆಳಗ್ಗೆ 11ಗಂಟೆ ಸುಮಾರಿಗೆ ಪೊಲೀಸರು ತಡೆದಿದ್ದಾರೆ. ಬಳಿಕ ಇಬ್ಬರನ್ನು ಪೊಲೀಸರು ತಮ್ಮ ಜೀಪಿನಲ್ಲಿ ಕರೆದೊಯ್ಯಲು ಯತ್ನಿಸಿದ್ದಾರೆ, ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ ಮಹಿಳೆಯನ್ನು ಪೊಲೀಸರು ಥಳಿಸಿದ್ದಾರೆ.

ವೀಡಿಯೊದಲ್ಲಿ, ಮಹಿಳಾ ಪೋಲೀಸ್ ಸೇರಿದಂತೆ ಕೆಲವು ಪೊಲೀಸ್ ಸಿಬ್ಬಂದಿ ಮಹಿಳೆಯನ್ನು ಥಳಿಸುತ್ತಿರುವುದು ಮತ್ತು ಕೆಳಕ್ಕೆ ತಳ್ಳುವುದು ಮತ್ತು ಮಹಿಳೆ ಕೂದಲು ಎಳೆಯುವುದು ಕಂಡುಬಂದಿದೆ.

ಆದಾಗ್ಯೂ, "ವೀಡಿಯೋದಲ್ಲಿ ಘಟನೆಯ ಅರ್ಧದಷ್ಟು ಮಾತ್ರ ತೋರಿಸಲಾಗಿದೆ" ಎಂದು ರಾಹ್ಲಿಯ ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಕಮಲ್ ಸಿಂಗ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com