ಚಿಪ್ಕೊ ಚಳುವಳಿಯ ನಾಯಕ ಸುಂದರ್ ಲಾಲ್ ಬಹುಗುಣ ಕೋವಿಡ್‌ ನಿಂದ ಸಾವು

ಚಿಪ್ಕೊ ಚಳುವಳಿಯ ನಾಯಕ ಸುಂದರ್ ಲಾಲ್ ಬಹುಗುಣ ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಕೊರೊನಾ ಸೋಂಕು ಕಾಣಿಸಿಕೊಂಡಿದ್ದರಿಂದ ದೆಹಲಿಯ ಏಮ್ಸ್‌ ಆಸ್ಪತ್ರೆಯಲ್ಲಿ ಬಹುಗುಣ ಅವರು ಚಿಕಿತ್ಸೆ ಪಡೆಯುತ್ತಿದ್ದರು.
ಸುಂದರ್ ಲಾಲ್ ಬಹುಗುಣ
ಸುಂದರ್ ಲಾಲ್ ಬಹುಗುಣ

ನವದೆಹಲಿ: ಚಿಪ್ಕೊ ಚಳುವಳಿಯ ನಾಯಕ ಸುಂದರ್ ಲಾಲ್ ಬಹುಗುಣ ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಕೊರೊನಾ ಸೋಂಕು ಕಾಣಿಸಿಕೊಂಡಿದ್ದರಿಂದ ದೆಹಲಿಯ ಏಮ್ಸ್‌ ಆಸ್ಪತ್ರೆಯಲ್ಲಿ ಬಹುಗುಣ ಅವರು ಚಿಕಿತ್ಸೆ ಪಡೆಯುತ್ತಿದ್ದರು.

ಪರಿಸರ ಕಾರ್ಯಕರ್ತರಾಗಿದ್ದ ಸುಂದರ್ ಲಾಲ್ ಬಹುಗುಣ, ಕಾಡುಗಳು ಮತ್ತು ಹಿಮಾಲಯ ಪರ್ವತಗಳ ನಾಶವನ್ನು ತಪ್ಪಿಸಲು ಗ್ರಾಮಸ್ಥರ ಮನವೊಲಿಸಲು ಶಿಕ್ಷಣ ನೀಡುವ ಸಲುವಾಗಿ ತಮ್ಮ ಜೀವನವನ್ನೇ ಕಳೆದರು.

ಬಹುಗುಣ ಅವರ ಪ್ರಯತ್ನದಿಂದಾಗಿ ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರು ಮರಗಳನ್ನು ಕತ್ತರಿಸುವುದಕ್ಕೆ ನಿಷೇಧ ಹೇರಿದರರು. "ಪರಿಸರ ವಿಜ್ಞಾನ ಶಾಶ್ವತ ಆರ್ಥಿಕತೆ" ಎಂಬುದೇ ಬಹುಹುಣ ಅವರ ಘೋಷಣೆಯಾಗಿತ್ತು.

ಚಿಪ್ಕೊ ಚಳುವಳಿ 1973 ರಲ್ಲಿ ಅಹಿಂಸಾತ್ಮಕ ಆಂದೋಲನವಾಗಿದ್ದು ಅದು ಮರಗಳ ರಕ್ಷಣೆ ಮತ್ತು ಸಂರಕ್ಷಣೆ ಪ್ರಮುಖ ಉದ್ದೇಶವಾಗಿತ್ತು. ಕಾಡುಗಳನ್ನು ಸಂರಕ್ಷಿಸುವ ಉದ್ದೇಶದಿಂದ ಮಹಿಳೆಯರನ್ನು ಸಾಮೂಹಿಕವಾಗಿ ಸಜ್ಜುಗೊಳಿಸುವುದಾಗಿತ್ತು, ಇದು ಸಮಾಜದಲ್ಲಿ ತನ್ನದೇ ಆದ ರೀತಿ ಬದಲಾವಣೆಯನ್ನು ತಂದಿತು..
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com