ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್ ನಲ್ಲಿ ಕೋವಿಡ್-19; ಕನಿಷ್ಠ 100 ಪ್ರಕರಣಗಳಿವೆ- ಪರ್ವತಾರೋಹಿಗಳ ಮಾರ್ಗದರ್ಶಿ

ಮೌಂಟ್ ಎವರೆಸ್ಟ್ ನಲ್ಲೂ ಕೋವಿಡ್-19 ಪ್ರಕರಣಗಳು ಪತ್ತೆಯಾಗಿದ್ದು 100 ಕೋವಿಡ್-19 ಪ್ರಕರಣಗಳು ವರದಿಯಾಗಿವೆ ಎಂದು ಎವರೆಸ್ಟ್ ಪರ್ವತಾರೋಹಿಗಳ ಮಾರ್ಗದರ್ಶಿಯೊಬ್ಬರು ಹೇಳಿದ್ದಾರೆ.
ಮೌಂಟ್ ಎವರೆಸ್ಟ್
ಮೌಂಟ್ ಎವರೆಸ್ಟ್

ಕಠ್ಮಂಡು: ಮೌಂಟ್ ಎವರೆಸ್ಟ್ ನಲ್ಲೂ ಕೋವಿಡ್-19 ಪ್ರಕರಣಗಳು ಪತ್ತೆಯಾಗಿದ್ದು 100 ಕೋವಿಡ್-19 ಪ್ರಕರಣಗಳು ವರದಿಯಾಗಿವೆ ಎಂದು ಎವರೆಸ್ಟ್ ಪರ್ವತಾರೋಹಿಗಳ ಮಾರ್ಗದರ್ಶಿಯೊಬ್ಬರು ಹೇಳಿದ್ದಾರೆ. ಪರ್ವತಾರೋಹಿಗಳು ಹಾಗೂ ಸಿಬ್ಬಂದಿಗಳ ಪೈಕಿ 100 ಮಂದಿಗೆ ಕೋವಿಡ್-19 ಸೋಂಕು ತಗುಲಿದೆ ಎಂಬ ಮಾಹಿತಿ ಬಹಿರಂಗಗೊಂಡಿದೆ.

ವಿಶ್ವದ ಅತಿ ಎತ್ತರದ ಪರ್ವತದಲ್ಲಿ ಕೋವಿಡ್-19 ಕ್ಲಸ್ಟರ್ ಇಲ್ಲ ಎಂದು ನೇಪಾಳ ವಾದಿಸುತ್ತಿತ್ತು, ಈ ನಡುವೆ ಕೋವಿಡ್-19 ಪ್ರಕರಣಗಳು ಮೌಂಟ್ ಎವರೆಸ್ಟ್ ನಲ್ಲಿ ಪತ್ತೆಯಾಗಿರುವುದನ್ನು ಪರ್ವತಾರೋಹಿಗಳ ಮಾರ್ಗದರ್ಶಿಗಳು ಬಹಿರಂಗಪಡಿಸಿದ್ದಾರೆ.

ಆಸ್ಟ್ರಿಯಾದ ಲುಕಾಸ್ ಫರ್ಟೆನ್‌ಬಾಚ್, ಕೊರೋನಾ ಭೀತಿಯಿಂದ ಎವರೆಸ್ಟ್ ಪರ್ವತಾರೋಹಣವನ್ನು ಸ್ಥಗಿತಗೊಳಿಸಿದ್ದು, ತಮ್ಮ ವಿದೇಶಿ ಮಾರ್ಗದರ್ಶಕರೊಬ್ಬರು 6 ನೇಪಾಳಿ ಶಿರ್ಪಾ ಮಾರ್ಗದರ್ಶಿಗಳು ಕೊರೋನಾ ಸೋಂಕಿಗೆ ಒಳಗಾಗಿದ್ದಾರೆಂದು ಮಾಹಿತಿ ನೀಡಿದ್ದಾರೆ.

ಬೇಸ್ ಕ್ಯಾಂಪ್ ನಲ್ಲಿ 100 ಜನರಿಗೆ ಕೋವಿಡ್-19 ಸೋಂಕು ತಗುಲಿದೆ. ಒಟ್ಟಾರೆ ಇದು 150-200 ಇರಬಹುದು ಎಂದು ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿರುವ ಅಸೋಸಿಯೇಟೆಡ್ ಪ್ರೆಸ್ ಗೆ ಲುಕಾಸ್ ಫರ್ಟೆನ್‌ಬಾಚ್ ಹೇಳಿದ್ದಾರೆ.

ಈ ಋತುವಿನಲ್ಲಿ 408 ವಿದೇಶಿ ಪರ್ವತಾರೋಹಿಗಳಿಗೆ ಎವರೆಸ್ಟ್ ಪರ್ವತ ಆರೋಹಣಕ್ಕೆ ಅನುಮತಿ ನೀಡಲಾಗಿತ್ತು, ಈ ಪೈಕಿ ಕೆಲವು ನೂರು ಮಂದಿ ಮಾರ್ಗದರ್ಶಕರು, ಸಹಾಯಕ ಸಿಬ್ಬಂದಿಗಳಿದ್ದು, ಏಪ್ರಿಲ್ ನಿಂದಲೂ ಬೇಸ್ ಕ್ಯಾಂಪ್ ನಲ್ಲೇ ಇದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com