ತಮಿಳುನಾಡಿನಲ್ಲಿ ಮೇ 24 ರಿಂದ ಮತ್ತೆ ಒಂದು ವಾರ ಲಾಕ್ ಡೌನ್ ವಿಸ್ತರಣೆ

ತಮಿಳುನಾಡಿನಲ್ಲಿ ಜಾರಿಯಲ್ಲಿರುವ ಕೋವಿಡ್ ಲಾಕ್ ಡೌನ್ ಅನ್ನು ಮೇ 24 ರಿಂದ ಒಂದು ವಾರ ವಿಸ್ತರಿಸುವುದಾಗಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಶನಿವಾರ ಪ್ರಕಟಿಸಿದ್ದಾರೆ.
ಎಂ ಕೆ ಸ್ಟಾಲಿನ್
ಎಂ ಕೆ ಸ್ಟಾಲಿನ್

ಚೆನ್ನೈ: ತಮಿಳುನಾಡಿನಲ್ಲಿ ಜಾರಿಯಲ್ಲಿರುವ ಕೋವಿಡ್ ಲಾಕ್ ಡೌನ್ ಅನ್ನು ಮೇ 24 ರಿಂದ ಒಂದು ವಾರ ವಿಸ್ತರಿಸುವುದಾಗಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಶನಿವಾರ ಪ್ರಕಟಿಸಿದ್ದಾರೆ.

ಸಿಎಂ ಸ್ಟಾಲಿನ್ ಅವರು ಇಂದು ವೈದ್ಯಕೀಯ ತಜ್ಞರು ಮತ್ತು ಶಾಸಕಾಂಗ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ನಂತರ ಈ ಘೋಷಣೆ ಮಾಡಿದ್ದಾರೆ.

ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್ -19 ಸೋಂಕು ನಿಯಂತ್ರಿಸಲು ಲಾಕ್ ಡೌನ್ ವಿಸ್ತರಿಸುವಂತೆ ಆರೋಗ್ಯ ತಜ್ಞರ ಸಮಿತಿ ಶಿಫಾರಸು ಮಾಡಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಕೋವಿಡ್ -19 ಸೋಂಕು ಪ್ರಾರಂಭವಾದಾಗಿನಿಂದ ನಾವು ಅನೇಕ ಜೀವಗಳನ್ನು ಕಳೆದುಕೊಂಡಿದ್ದೇವೆ. ವೈದ್ಯರು ಸೇರಿದಂತೆ ಅನೇಕ ಮುಂಚೂಣಿ ಆರೋಗ್ಯ ಸಿಬ್ಬಂದಿ ವೈರಸ್‌ಗೆ ಬಲಿಯಾಗಿದ್ದಾರೆ. ಇದನ್ನು ನಾವು ನಿಲ್ಲಿಸಬೇಕಾಗಿದೆ ” ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ತಮಿಳುನಾಡಿನಲ್ಲಿ ಮೇ 24ಕ್ಕೆ ಅಂತ್ಯವಾಗಬೇಕಿದ್ದ ಲಾಕ್ ಡೌನ್ ಅನ್ನು ಈಗ ಮತ್ತೆ ಒಂದು ವಾರ ವಿಸ್ತರಿಸಲಾಗಿದೆ.

ತಮಿಳುನಾಡಿನಲ್ಲಿ ಶುಕ್ರವಾರ ಕೊರೋನಾ ಸೋಂಕಿನಿಂದ 467 ಮಂದಿ ಮೃತಪಟ್ಟಿದ್ದು, 36184 ಹೊಸ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com