ದೆಹಲಿಯಲ್ಲಿ ಇಂದು 2,260 ಮಂದಿಗೆ ಕೊರೋನಾ ಪಾಸಿಟಿವ್, 182 ಸಾವು; ಪಾಸಿಟಿವ್ ಪ್ರಮಾಣ ಶೇ. 3.58ಕ್ಕೆ ಇಳಿಕೆ

ದೆಹಲಿಯಲ್ಲಿ ಶನಿವಾರ 2,260 ಮಂದಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, ರಾಷ್ಟ್ರ ರಾಜಧಾನಿಯಲ್ಲಿ ದೈನಂದಿನ ಹೊಸ ಪ್ರಕರಣಗಳ ಸಂಖ್ಯೆ ಸತತ ನಾಲ್ಕನೇ ದಿನವೂ 4,000 ಕ್ಕಿಂತ ಕಡಿಮೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ದೆಹಲಿಯಲ್ಲಿ ಶನಿವಾರ 2,260 ಮಂದಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, ರಾಷ್ಟ್ರ ರಾಜಧಾನಿಯಲ್ಲಿ ದೈನಂದಿನ ಹೊಸ ಪ್ರಕರಣಗಳ ಸಂಖ್ಯೆ ಸತತ ನಾಲ್ಕನೇ ದಿನವೂ 4,000 ಕ್ಕಿಂತ ಕಡಿಮೆ ಬಂದಿದೆ.

ದೆಹಲಿಯಲ್ಲಿ ಕೋವಿಡ್ ಪಾಸಿಟಿವ್ ಪ್ರಮಾಣ ಶೇಕಡಾ 3.58ಕ್ಕೆ ಇಳಿದಿದೆ ಎಂದು ಆರೋಗ್ಯ ಇಲಾಖೆ ಹಂಚಿಕೊಂಡ ಅಂಕಿ ಅಂಶಗಳು ತಿಳಿಸಿವೆ.

ಇತ್ತೀಚಿನ ಆರೋಗ್ಯ ಬುಲೆಟಿನ್ ಪ್ರಕಾರ, ಇಂದು ಕೊರೋನಾದಿಂದ 182 ಮಂದಿ ಮೃತಪಟ್ಟಿದ್ದು, ಇದರೊಂದಿಗೆ ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್ ಸಾವಿನ ಸಂಖ್ಯೆ 23,013ಕ್ಕೆ ಏರಿಕೆಯಾಗಿದೆ.

ಪಾಸಿಟಿವ್ ಪ್ರಮಾಣ ಕಳೆದ ಗುರುವಾರ ಶೇ 5.5 ಮತ್ತು ಶುಕ್ರವಾರ ಶೇ 4.76 ರಷ್ಟಿತ್ತು. ಇಂದು ಶೇ. 3.58ಕ್ಕೆ ಇಳಿದಿದೆ. ನಗರದಲ್ಲಿ ಇಂದು ಹೊಸದಾಗಿ 2,260 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಅವರು ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.

ಮಾರ್ಚ್ 31 ರ ನಂತರ ವರದಿಯಾದ ಅತಿ ಕಡಿಮೆ ಪಾಸಿಟಿವ್ ಸಂಖ್ಯೆ ಇದಾಗಿದ್ದು, ಇನ್ನೂ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಮತ್ತು ಕೋವಿಡ್ ನಿಯಮಗಳನ್ನು ಅನುಸರಿಸಬೇಕು ಎಂದು ದೆಹಲಿ ಆರೋಗ್ಯ ಸಚಿವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com